Yellow Board ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಂದ ತೊಂದರೆ!

ಜಾಲಿಡೇಸ್ ಸಿನಿಮಾ ಖ್ಯಾತಿಯ ಪ್ರದೀಪ್ ಅಭಿನಯದ 'ಯೆಲ್ಲೋ ಬೋರ್ಡ್' ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ 'ಯೆಲ್ಲೋ ಬೋರ್ಡ್' ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. 

Share this Video
  • FB
  • Linkdin
  • Whatsapp

ಜಾಲಿಡೇಸ್ ಸಿನಿಮಾ ಖ್ಯಾತಿಯ ಪ್ರದೀಪ್ (Pradeep) ಅಭಿನಯದ 'ಯೆಲ್ಲೋ ಬೋರ್ಡ್' (Yellow Board) ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಕ್ಯಾಬ್ ಚಾಲಕನ ಕಥೆ ನೋಡಿದ ಸಿನಿಮಂದಿ ಎಲ್ಲರೂ ಭರ್ಜರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ 'ಯೆಲ್ಲೋ ಬೋರ್ಡ್' ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲಿಲ್ಲ ಅನ್ನುವ ಹಾಗೆ ಸಿನಿಮಾ ಚೆನ್ನಾಗಿದ್ದರೂ, ಸಿನಿಮಾ ಪ್ರದರ್ಶನ ಮಾಡುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಸಿನಿಮಾದ ಶೋಗಳನ್ನೇ ಕೊಡುತ್ತಿಲ್ಲ.

Add Asianetnews Kannada as a Preferred SourcegooglePreferred

Yellow Board: ಪ್ರದೀಪ್ ನಟನೆಯ 'ಯೆಲ್ಲೋ ಬೋರ್ಡ್' ಸಿನಿಮಾ ಹೇಗಿದೆ ಗೊತ್ತಾ?

ಈ ಬಗ್ಗೆ ಚಿತ್ರದ ನಾಯಕ ಪ್ರದೀಪ್ ಅಸಮಾಧಾನವನ್ನು ಹೊರಹಾಕಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ಕ್ಯಾಬ್ ಚಾಲಕನ ಸುತ್ತ ಸುತ್ತುವ ಈ ಕಥೆ ಇದಾಗಿದೆ. ದಿನಗೂಲಿ ನೌಕರಿಯಲ್ಲಿ ತೊಡಗಿರುವ ಕ್ಯಾಬ್ ಡ್ರೈವರ್‌ಗಳ ಜೀವನ ಈ ಚಿತ್ರದಲ್ಲಿದೆ. ಕ್ಯಾಬ್ ಚಾಲಕನ ಜವಾಬ್ದಾರಿ, ಸಮಾಜದಲ್ಲಿ ಮಹಿಳಾ ಸುರಕ್ಷತೆ ಕುರಿತ (Women Saftey) ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಅಹಲ್ಯಾ ಸುರೇಶ್, ಸ್ನೇಹಾ ಖುಷಿ, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ​ಅಭಿನಯಿಸಿದ್ದಾರೆ. ಅದ್ವಿಕ್ ಸಂಗೀತ ನಿರ್ದೇಶನ, ಪ್ರವೀಣ್ ಕ್ಯಾಮೆರಾ ಕೈಚಳಕ ಹಾಗೂ ತ್ರಿಲೋಕ್​ ರೆಡ್ಡಿ (Trilok Reddy) ನಿರ್ದೇಶನ ಚಿತ್ರಕ್ಕಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video