Asianet Suvarna News Asianet Suvarna News

KGF Chapter 2: ಕನ್ನಡ ಸಿನಿಮಾ ಹಾಲಿವುಡ್‌ಗೂ ಸೆಡ್ಡು ಹೊಡೆದದ್ಹೇಗೆ?

ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರ ಬಿಡುಗಡೆಯಾದ 6  ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರು.ಗಳಷ್ಟುಕಲೆಕ್ಷನ್‌ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. 

ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರ ಬಿಡುಗಡೆಯಾದ 6  ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರು.ಗಳಷ್ಟುಕಲೆಕ್ಷನ್‌ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. ಬಾಲಿವುಡ್‌ನಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಕಲೆಕ್ಷನ್‌ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೂ ಭಾಜನವಾಗಿದೆ. ಈ ಮೂಲಕ ಅಮೀರ್‌ ಖಾನ್‌ ನಟನೆಯ ‘ದಂಗಲ್‌’ ಚಿತ್ರದ ದಾಖಲೆ ನೆಲಸಮ ಮಾಡಿದೆ. ಒಂದು ವಾರದೊಳಗೇ ‘ಕೆಜಿಎಫ್‌ 2’ ಹಿಂದಿ ವರ್ಶನ್‌ 219.56 ರು. ಕೋಟಿ ಸಂಗ್ರಹ ಮಾಡಿದೆ. ಬಾಲಿವುಡ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದ ‘ದಂಗಲ್‌’ ಚಿತ್ರ ಮೊದಲ ವಾರದಲ್ಲಿ 197.54 ಕೋಟಿ ರು. ಸಂಗ್ರಹಿಸಿತ್ತು.

ಕೆಜಿಎಫ್‌ 2 ರಿಲೀಸ್‌ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಎಲ್ಲಿದ್ದಾರೆ.?

ಇನ್ನೊಂದೆಡೆ ತಮಿಳ್ನಾಡಿನಲ್ಲೇ ವಿಜಯ್‌ ನಟನೆಯ ‘ಬೀಸ್ಟ್‌’ ಸಿನಿಮಾವನ್ನು ಬೀಟ್‌ ಮಾಡಿ ನಂ.1 ಸಿನಿಮಾವಾಗಿ ಹೊರ ಹೊಮ್ಮಿದೆ. ತಮಿಳ್ನಾಡಿನಲ್ಲೇ 50 ಕೋಟಿ ಕ್ಲಬ್‌ ಸೇರಿದೆ. ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ ಅನ್ನೋ ದಾಖಲೆಯನ್ನೂ ಇದು ಮಾಡಿದೆ.  ಸದ್ಯ ತಮಿಳ್ನಾಡಿನಲ್ಲಿ ಕೆಜಿಎಫ್‌ 50.27 ಕೋಟಿ ರು. ಗಳಿಕೆ ಮಾಡಿದ್ದರೆ, ‘ಬೀಸ್ಟ್‌’ 57.17 ಕೋಟಿ ಗಳಿಕೆ ಮಾಡಿದೆ. ಸಿನಿಮಾ ತಜ್ಞರ ಪ್ರಕಾರ ಶೀಘ್ರ ಕೆಜಿಎಫ್‌ 2 ಬೀಸ್ಟ್‌ನ ಗಳಿಕೆ ಮೀರಿಸಿ ಹೊಸ ದಾಖಲೆ ಬರೆಯಲಿದೆ. ಒಟ್ಟಿನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ 60ಕ್ಕೂ ಹೆಚ್ಚು ದಾಖಲೆಯಾಗಿದ್ದು, ಕನ್ನಡ ಸಿನಿಮಾ ಹಾಲಿವುಡ್‌ಗೂ ಸೆಡ್ಡು ಹೊಡೆದದ್ಹೇಗೆ? ಎಂಬ ಮಾಹಿತಿಯನ್ನುಈ ವಿಡಿಯೋದಲ್ಲಿ ವೀಕ್ಷಿಸಿ.

Video Top Stories