Asianet Suvarna News Asianet Suvarna News
breaking news image

ಕೆಜಿಎಫ್-2 ಗೆದ್ದಿದ್ದಕ್ಕೆ ಚಿಕ್ಕ ಕತೆ ಹೇಳಿ ಧನ್ಯವಾದ ತಿಳಿಸಿದ ರಾಕಿಭಾಯ್!

ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೆಜಿಎಫ್-2’ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ದೇಶ-ವಿದೇಶಗಳಲ್ಲಿ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್-2 ಸಿನಿಮಾ ಯಾರೂ ಊಹಿಸಲಾಗದ ಯಶಸ್ಸಿನ ಜೊತೆ ಬಾಕ್ಸಾಫೀಸ್ನಲ್ಲಿ 1000 ಕೋಟಿ ರೀಚ್ ಆಗೋ ಕಡೆ ಮುನ್ನುಗ್ಗುತ್ತಿದೆ. 

ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೆಜಿಎಫ್-2’ (KGF 2) ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ದೇಶ-ವಿದೇಶಗಳಲ್ಲಿ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್-2 ಸಿನಿಮಾ ಯಾರೂ ಊಹಿಸಲಾಗದ ಯಶಸ್ಸಿನ ಜೊತೆ ಬಾಕ್ಸಾಫೀಸ್ನಲ್ಲಿ 1000 ಕೋಟಿ ರೀಚ್ ಆಗೋ ಕಡೆ ಮುನ್ನುಗ್ಗುತ್ತಿದೆ. 

KGF 2 ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿದ ಸಿನಿಮಾ; ಸಂಜಯ್ ದತ್ ಭಾವುಕ ಮಾತು

ಇದೇ ಟೈಂನಲ್ಲಿ ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಗೆಲ್ಲಿಸಿದ್ದಕ್ಕೆ ಒಂದು ಚಿಕ್ಕ ಕಥೆ ಹೇಳಿ ಧನ್ಯವಾದ ಹೇಳಿದ್ದಾರೆ. ಒಂದು ಊರು. ಅಲ್ಲಿ ಬರಗಾಲ ಇತ್ತು. ಮಳೆಗಾಗಿ ಪ್ರಾರ್ಥಿಸೋಕೆ ಊರಿನ ಜನ ನಿರ್ಧರಿಸಿದ್ರು. ಆ ಊರಿಗೆ ಬಂದ ಹುಡುಗ ಮಳೆ ಬಂದುಬಿಟ್ಟರೆ ಅಂತ ಕೊಡೆ ಹಿಡಿದು ಬಂದಿದ್ದ. ಅದನ್ನ ನೋಡಿ ಊರ ಜನ ನಕ್ಕಿದ್ರು. ಇದು ಹುಚ್ಚುತನ ಎಂದಿದ್ರು. ಕೆಲವ್ರು ಓವರ್ ಕಾನ್ಫಿಡೆನ್ಸ್ ಎಂದ್ರು. ಆದ್ರೆ ಆ ಹುಡುಗನದ್ದು ನಂಬಿಕೆ. ನಾನು ಆ ಹುಡುಗನಂತೆ. ಈ ದಿನ ಬರುತ್ತೆ ಅಂತ ನಂಬಿಕೆ ಇಟ್ಟು ಕೂತಿದ್ದ ಹುಡುಗ ನಾನು. ಈ ರೀತಿ ಪ್ರೀತಿ ತೋರಿಸಿದ್ದಕ್ಕೆ ನನ್ನ ಹೃದಯಂತರಾಳದಿಂದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಯಶ್.
 

Video Top Stories