KGF 2 ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿದ ಸಿನಿಮಾ; ಸಂಜಯ್ ದತ್ ಭಾವುಕ ಮಾತು

ಕೆಜಿಎಫ್-2 ಬಗ್ಗೆ ಸಂಜಯ್ ದತ್ ಭಾವುಕ ಪತ್ರ ಬರೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಸಿನಿಮಾ ತನಗೆ ತುಂಬಾ ವಿಶೇಷವಾಗಿದೆ ಎಂದು ಹೇಳಿರುವ ಸಂಜಯ್ ದತ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

Sanjay Dutt about KGF2 says It reminded me of my own potential

ಬಾಲಿವುಡ್ ಸ್ಟಾರ್ ಮುನ್ನಾಭಾಯ್ ಸಂಜಯ್ ದತ್(Sanjay Dutt) ಸದ್ಯ ಅಧೀರನಾಗಿ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಕೆಜಿಎಫ್-2(KGF 2) ಸಿನಿಮಾದಲ್ಲಿ ಸಂಜಯ್ ದತ್ ಭಯಾನಕ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸಂಜಯ್ ದತ್ ಅವರನ್ನು ಅಧೀರ ಅಂತನೆ ಅಭಿಮಾನಿಗಳು ಕರೆಯುತ್ತಿದ್ದಾರೆ. ವರ್ಷಗಳ ಬಳಿಕ ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಅಧೀರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ದೂಳ್ ಎಬ್ಬಿಸಿದೆ. ಕೋಟಿ ಕೋಟಿ ಬಾಚಿಕೊಂಡಿರುವ ಪ್ರಶಾಂತ್ ನೀಲ್ ಸಿನಿಮಾ ಭಾರತದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿದೆ.

ಚಿತ್ರಕ್ಕೆ ಸಿಕ್ಕ ಗೆಲುವು, ಪಾತ್ರದ ಬಗ್ಗೆ ಸಂಜಯ್ ದತ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಜಿಎಫ್-2 ಬಗ್ಗೆ ಸಂಜಯ್ ದತ್ ಭಾವುಕ ಪತ್ರ ಬರೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಸಿನಿಮಾ ತನಗೆ ತುಂಬಾ ವಿಶೇಷವಾಗಿದೆ ಎಂದು ಹೇಳಿರುವ ಸಂಜಯ್ ದತ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

'ಕೆಲವು ಸಿನಿಮಾಗಳು ಯಾವಾಗಲು ಬೇರೆ ಎಲ್ಲಾ ಸಿನಿಮಾಗಳಿಗಿಂತ ತುಂಬಾ ವಿಶೇಷವಾಗಿರುತ್ತದೆ. ಪ್ರತೀ ಬಾರಿಯೂ ನಾನು ನನ್ನ ಕಂಫರ್ಟ್ ಝೋನ್ ನಿಂದ ಹೊರಬಂದು ಮಾಡುವ ಸಿನಿಮಾಗಳನ್ನು ಹುಡುಕುತ್ತಿರುತ್ತೇನೆ. ಕೆಜಿಎಫ್-2 ನನಗೆ ಆರೀತಿಯ ಸಿನಿಮಾವಾಗಿತ್ತು. ಈ ಸಿನಿಮಾ ನನಗೆ ನನ್ನ ಸಾಮರ್ಥ್ಯವನ್ನು ನೆನಪಿಸಿತು. ಕೊನೆಯಲ್ಲಿ ಸಿನಿಮಾ ಯಾಕೆ ಉತ್ಸಾಹದ ಉತ್ಪನ್ನವಾಗಿರುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ನಾನು ಅರಿತುಕೊಂಡೆ' ಎಂದು ಹೇಳಿದ್ದಾರೆ.

'ಇಂತ ಅದ್ಭುತ ಸಿನಿಮಾ ನೀಡಿದ ಮತ್ತು ಅಧೀರ ಪಾತ್ರ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಂಜಯ್ ಅವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ನನ್ನ ನಿರ್ದೇಶಕ ಪ್ರಶಾಂತ್ ನೀಲ್, ಭಯಾನಕವಾದ ಅಧೀರ ಪಾತ್ರವನ್ನು ನನಗೆ ಮಾರಿದ್ದಾರೆ. ನನ್ನ ಪಾತ್ರ ಹೇಗೆ ಮೂಡಿಬಂದಿದೆ ಎಂಬುದರ ಕ್ರೆಡಿಟ್ ಸಂಪೂರ್ಣವಾಗಿ ಪ್ರಶಾಂತ್ ನೀಲ್ ಅವರಿಗೆ ಸಲ್ಲುತ್ತದೆ. ಕ್ಯಾಪ್ಟನ್ ಆಫ್ ದಿ ಶಿಪ್ಟ್ ಪ್ರಶಾಂತ್ ನೀಲ್ ನಮ್ಮನ್ನೆಲ್ಲ ಈ ರೀತಿ ಸ್ಕ್ರೀನ್ ಮೇಲೆ ತರುವುದು ಅವರ ಕನಸಾಗಿದೆ' ಎಂದು ಹೇಳಿದ್ದಾರೆ.

KGF 2ಗೆ ಅಲ್ಲು ಅರ್ಜುನ್ ಫಿದಾ; ಯಶ್, ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದೇನು?

'ಪ್ರತಿ ಬಾರಿ ಜೀವನವು ಆಶ್ಚರ್ಯಕರವಾದಾಗ ಅದಕ್ಕಿಂತ ಉತ್ತಮವಾಗಿ ಮಾಡಲು ನಿಮ್ಮಲ್ಲಿ ಇನ್ನು ಇದೆ ಎಂಬುದನ್ನು ಚಲಚಿತ್ರ ಯಾವಾಗಲು ನೆನಪಿಸುತ್ತದೆ. ನನ್ನ ಅಭಿಮಾನಿಗಳು, ಕಟುಂಬ ಮತ್ತು ಹಿತೈಶಿಗಳಿಗೆ ಧನ್ಯವಾದಗಳು. ಎಲ್ಲರೂ ನನ್ನ ಶಕ್ತಿಯ ಆಧಾರಸ್ತಂಭವಾಗಿದ್ದಾರೆ' ಎಂದು ದೀರ್ಘವಾಗಿ ಬರೆದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Sanjay Dutt (@duttsanjay)

ಕೆಜಿಎಫ್-2 ಈಗಾಗಲೇ ಭರ್ಜರಿ ಕಲೆಕ್ಷನ್ ಮಾಡಿದೆ. 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಬಾಲಿವುಡ್ ನಲ್ಲೂ 300 ಕೋಟಿ ಸಮೀಪಿಸಿದೆ. ಈ ಮೂಲಕ ಎಲ್ಲಾ ದಾಖಲೆಯಗಳನ್ನು ಸರಿಗಟ್ಟಿದೆ. ಕೆಜಿಎಫ್-2 ಅಬ್ಬರಕ್ಕೆ ಬಾಲಿವುಡ್ ಮಂದಿ ಬೆಚ್ಚಿಬಿದ್ದಿದ್ದಾರೆ.

KGF 2 ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡ್ತಿರೋದು ಈ ಹೆಣ್ಮಗಳು! ಯಾರೀಕೆ?

ಎಲ್ಲಾ ದಾಖಲೆಯಗಳನ್ನು ಪುಡಿ ಪುಡಿ ಮಾಡಿ ಕೆಜಿಎಫ್-2 ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಬರೆದಿದೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಅಭಿನಯ, ಸಂಜಯ್ ದತ್ ಆರ್ಭಟ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್, ಪ್ರಕಾಶ್ ರೈ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅದ್ದೂರಿ ಮೇಕಿಂಗ್, ಆಕ್ಷನ್, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. ವಾರದ ಬಳಿಕವೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

 

Latest Videos
Follow Us:
Download App:
  • android
  • ios