ವಿಶ್ವ ಚಾಂಪಿಯನ್ ರೇಸರ್ ಭೇಟಿಯಾದ ಯಶ್!

ರಾಕಿಂಗ್ ಸ್ಟಾರ್ ಯಶ್  ಮುಂದಿನ ಸಿನಿಮಾ ನಡೆ ಬಗ್ಗೆ ಗುಪ್ತವಾಗಿದ್ದು, ರಾಕಿ ಬಾಯ್‌ಗೆ ಯಾರು ಡೈರೆಕ್ಟ್ ಮಾಡುತ್ತಾರೆ ಎನ್ನುವ ಚರ್ಚೆ ಭಾರತೀಯ ಚಿತ್ರರಂಗದಲ್ಲಿ ಉಂಟುಮಾಡಿದೆ.ಅದಲ್ಲದೆ ಕೆಜಿಎಫ್ ಕಿಂಗ್ ರೇಸಿಂಗ್ ಲೆಜೆಂಡ್ ಜೊತೆ ಕಾಣಿಸಿಕೊಂಡಿದ್ದು ಹೊಸ ಚರ್ಚೆ ಹುಟ್ಟುಹಾಕಿದೆ.

Share this Video
  • FB
  • Linkdin
  • Whatsapp

ರಾಕಿ ಬಾಯ್‌ 19ನೇ ಸಿನಿಮಾ ಯಾವುದು ಎನ್ನುವ ಚರ್ಚೆ ಈಗಾಗಾಲೇ ಚಿತ್ರರಂಗದಲ್ಲಿ ಉಂಟಾಗಿದೆ. ಆದ್ರೆ ಯಶ್ ಮಾತ್ರ ದಿನಕ್ಕೊಂದು ಕಥೆ ಕವನಗಳು ಸೃಷ್ಟಿಯಾಗುವ ರೀತಿಯಲ್ಲಿ ಸಂಚಲನ ಸೃಷ್ಟಿಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಯಶ್ ಹಾಲಿವುಡ್ ಸ್ಟಾರ್ ಡೈರೆಕ್ಟರ್ ಕಮ್ ಸ್ಟಂಟ್ ಮಾಸ್ಟರ್ ಜೆಜೆ ಪ್ಯಾರಿ ಜೊತೆ ಕಾಣಿಸಿಕೊಂಡಿದ್ದರು,ಅದಲ್ಲದೆ ಗನ್ ಹಿಡಿದು ಶೂಟಿಂಗ್ ಕೂಡ ಮಾಡಿದ್ದರು. ಇದಕ್ಕಾಗಿ ರಾಕಿಂಗ್ ಸ್ಟಾರ್ ಹಾಲಿವುಡ್ ಕಡೆ ಹೊರಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಹೀಗಿರುವಾಗಲೆ ಈ ಭಾರಿ ಯಶ್ ರೇಸಿಂಗ್ ಲೆಜೆಂಡ್ ಲೆವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದು, ರಾಕಿ ಬಳಗದಲ್ಲಿ ಸಂಚಲನ ಉಂಟುಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video