50ನೇ ದಿನಕ್ಕೆ ಕಾಲಿಟ್ಟ ಕೆಜಿಎಫ್ 2 ; ಬಾಕ್ಸ್ ಆಫೀಸ್ ಮಾನ್ಸ್ಟರ್ ಆದ ರಾಕಿಭಾಯ್..!

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ 2 (KGF 2) ಸಿನಿಮಾ 50ನೇ ದಿನಕ್ಕೆ ಕಾಲಿಟ್ಟಿದೆ. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿರೋ ಕೆಜಿಎಫ್ 2 ಚಿತ್ರ ,ಭಾರತದ 390ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ವಿದೇಶದ 10 ಕ್ಕೂ ಹೆಚ್ಚು ಜಾಗಗಳಲ್ಲಿ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ 50ನೇ ದಿನ ಪೂರೈಸಿ ತೂಫಾನ್ ನಂತೆಯೇ ಮುನ್ನುಗ್ಗುತ್ತಿದೆ.
 
Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ 2 (KGF 2) ಸಿನಿಮಾ 50ನೇ ದಿನಕ್ಕೆ ಕಾಲಿಟ್ಟಿದೆ. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿರೋ ಕೆಜಿಎಫ್ 2 ಚಿತ್ರ ,ಭಾರತದ 390ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ವಿದೇಶದ 10 ಕ್ಕೂ ಹೆಚ್ಚು ಜಾಗಗಳಲ್ಲಿ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ 50ನೇ ದಿನ ಪೂರೈಸಿ ತೂಫಾನ್ ನಂತೆಯೇ ಮುನ್ನುಗ್ಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Vikrant Movie: ಥಿಯೇಟರ್‌ನಲ್ಲಿ ಮಾತ್ರ ಪಕ್ಕದಲ್ಲಿ ಕುಳಿತಿರುವವರನ್ನು ಯಾವ ಜಾತಿ ಅಂತ ನಾವು ಕೇಳೋದಿಲ್ಲ: ಕಮಲ್ ಹಾಸನ್

ಕೆಜಿಎಫ್ 2 (KGF 2) ಸಿನಿಮಾ ವಿಶ್ವಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಇಲ್ಲಿಯವರೆಗೂ ಸಿನಿಮಾ1239 .97 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಕೂಡ ಥಿಯೇಟರ್ ನಲ್ಲಿ ವೀಕೆಂಡ್ ಸಮಯದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಕನ್ನಡ, ತಮಿಳು, ತೆಲುಗು , ಹಿಂದಿ, ಹಾಗೂ ಮಲಯಾಳಂ ಈ ಐದು ಭಾಷೆಯಲ್ಲಿ ಮೊದಲ ದಿನ ಹೆಚ್ಚು ಗಳಿಕೆ ಮಾಡಿದ ಸಿನಿಮಾ, ವಾರಾಂತ್ಯದಲ್ಲಿ ಹೆಚ್ಚು ಗಳಿಸಿದ ಸಿನಿಮಾ, ವೀಕೆಂಡ್ ನಲ್ಲಿಯೂ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ..ಇನ್ನು ಭಾರತದ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ದಾಖಲೆಯ ಗಳಿಕೆ ಮಾಡಿದ ಮೊದಲ ಸಿನಿಮಾ ಕೆಜಿಎಫ್2, ಇಲ್ಲಿಯವರೆಗೂ ಅತಿ ಹೆಚ್ಚು ಟಿಕೆಟ್ ಸೇಲ್ ಆದ ಚಿತ್ರ ಕೂಡ ಇದೇ. 

ರಿವೀಲ್ ಆಯ್ತು ಬೈರಾಗಿ ಸಿಂಗರ್ ಸೀಕ್ರೆಟ್; ಶಿವಣ್ಣನ ಜೊತೆ ಹಾಡಿದ ಸ್ಟಾರ್ ಯಾರು ಗೊತ್ತಾ..?

ಕೆಜಿಎಫ್ 2 ಸಿನಿಮಾ ಎಷ್ಟೇ ದಾಖಲೆ ಮಾಡಿದ್ರು ಕೂಡ ಬಾಹುಬಲಿ (bahubali) ಹಾಗೂ ದಂಗಲ್ ಸಿನಿಮಾ ಕಲೆಕ್ಷನ್ ದಾಖಲೆಯನ್ನ ಮುರಿಯೋದು ಬಾಕಿ ಉಳಿದಿದೆ. ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಇರೋದ್ರಿಂದ ಆ ದಾಖಲೆ ಕೂಡ ಮುರಿಯಬಹುದು ಅನ್ನೋ ನಿರೀಕ್ಷೆ ಇದೆ.

Related Video