Asianet Suvarna News Asianet Suvarna News

Vikram Movie: ಥಿಯೇಟರ್‌ನಲ್ಲಿ ಮಾತ್ರ ಪಕ್ಕದಲ್ಲಿ ಕುಳಿತಿರುವವರನ್ನ ಯಾವ ಜಾತಿ ಅಂತ ನಾವು ಕೇಳೋದಿಲ್ಲ: ಕಮಲ್‌ ಹಾಸನ್

ಕಮಲ್​ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಜೂನ್​ 3ರಂದು ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಕಮಲ್ ಹಾಸನ್ ನೋಡಲು ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿದ್ದು, ಹೂವಿನ ಮಳೆ ಸುರಿಸಿ ಸ್ವಾಗತವನ್ನು ಕೋರಿದ್ದಾರೆ.

ಕಮಲ್​ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಜೂನ್​ 3ರಂದು ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಕಮಲ್ ಹಾಸನ್ ನೋಡಲು ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿದ್ದು, ಹೂವಿನ ಮಳೆ ಸುರಿಸಿ ಸ್ವಾಗತವನ್ನು ಕೋರಿದ್ದಾರೆ. ಮಾತ್ರವಲ್ಲದೇ ಕಮಲ್ ಹಾಸನ್ ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಲೋಕೇಶ್ ಕನಗರಾಜ್ ವಿಕ್ರಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಕಮಾಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಸೂರ್ಯ ಹಾಗೂ ಫಹಾದ್ ಫಾಜಿಲ್ ನಟಿಸಿದ್ದಾರೆ. ಇನ್ನು ಕಮಲ್ ಹಾಸನ್ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಾಗಿ ಕನ್ನಡದ ಸ್ಟಾರ್ಸ್ ಜತೆ ಮತ್ತು ಬೆಂಗಳೂರಿನ ಜತೆ ಒಳ್ಳೆಯ ನಂಟಿದೆ. ಇನ್ನು ಅಭಿಮಾನಿಗಳ ಎದುರು ಮಾತನಾಡಿದ ಕಮಲ್ ಹಾಸನ್, ಸಿನಿಮಾ ಒಂದು ಕಲೆ. 

ಸಿನಿಮಾ ಮಂದಿರದಲ್ಲಿ ಮಾತ್ರ ನಾವು ಪಕ್ಕದಲ್ಲಿ ಕುಳಿತಿರುವವರನ್ನ ನೀವು ಯಾವ ಜಾತಿ ಅಂತ ಕೇಳೋದಿಲ್ಲ. ಕತ್ತಲೆ ಅಂದ್ರೆ ಭಯ ಆಗುತ್ತೆ. ಆದ್ರೆ ಸಿನಿಮಾ ಮಂದಿರದಲ್ಲಿ ಕತ್ತಲೆ ಖುಷಿ ಕೊಡುತ್ತೆ ಎಂದು ಹೇಳಿದರು. ವಿಶೇಷವಾಗಿ ನನಗೆ ಬೆಂಗಳೂರಿನ ಜತೆ ಒಂದಲ್ಲ ಸಾಕಷ್ಟು ನೆನಪುಗಳು ಇವೆ. ಪುಟ್ಟಣ್ಣ ಕಣಗಾಲ್ ಸಿನಿಮಾ ರಿಲೀಸ್ ಆದರೆ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ  ಚೆನ್ನೈನಿಂದ ಬೆಂಗಳೂರಿಗೆ ಬಾಲಚಂದರ್​ ಜೊತೆ ಬರುತ್ತಿದೆ. ನಾನು ಗಿರೀಶ್ ಕಾರ್ನಾಡ್ ಅವರ ದೊಡ್ಡ ಫ್ಯಾನ್. ಬಿ.ವಿ .ಕಾರಂತ್ ಅವರನ್ನು ಮಾತನಾಡಿಸಲು ಬರುತ್ತಿದ್ದೆ ಎಂದಿದ್ದಾರೆ ಅವರು. ಕನ್ನಡದ ಕೋಕಿಲ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಚಿತ್ರ ತೆರೆಗೆ ಬಂದಿದ್ದು 1977ರಲ್ಲಿ. ಬಾಲು ಮಹೇಂದ್ರ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. 

Vikram Movie: ಎಲ್ಲರನ್ನೂ ಹೇಗೆ ಗೌರವಿಸಬೇಕು ಅನ್ನೋದನ್ನ ನಾನು ಅಣ್ಣಾವ್ರಿಂದ ಕಲಿತೆ: ಕಮಲ್ ಹಾಸನ್

ಈ ಬಗ್ಗೆ ಮಾತನಾಡಿರುವ ಅವರು, ಕೋಕಿಲ ಚಿತ್ರವನ್ನು ಕನ್ನಡದಲ್ಲೇ ಮಾಡಲಾಗಿತ್ತು. ಶೂಟಿಂಗ್​ಗಾಗಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ನಾನು ಪರಾಗ್ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದೆ ಎಂದು ಹೇಳಿದರು. ಜೊತೆಗೆ ಡಾ.ರಾಜ್​ಕುಮಾರ್ ಅವರ ಕುಟುಂಬ ಸೇರಿದಂತೆ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದರು. ಸಾಮಾನ್ಯವಾಗಿ ಹೆಸರಿನ‌ ಜೊತೆ ಊರಿನ ಹೆಸರು ಸೇರಿಸಿಕೊಳ್ತಾರೆ ಆದ್ರೆ ವಿಜಯ್ ಸೇತುಪತಿ ನಿಮ್ಮ ಹೆಸರನ್ನ ಅವರ ಹೆಸರಿನ ಜೊತೆ ಸೇರಿಕೊಂಡಿದ್ದಾರೆ. ಅದೇ ಅವರ ಎನರ್ಜಿ ಸೂರ್ಯ ತಂದೆ ನನ್ನ ಸ್ನೇಹಿತ ಅಂತ ಹೇಳೋದಿಲ್ಲ. ಯಾಕಂದ್ರೆ ಅವರು ನನ್ನ ಸಹೋದರ. ಸೂರ್ಯನಿಗೆ ನಾನು ಚಿಕ್ಕಪ್ಪ. ನೀವು ಸೂರ್ಯ ಅಂತಾ ಕರೆದಾಗ ಎಷ್ಟು ಖುಷಿ ಆಗುತ್ತೋ ಅಷ್ಟೇ ಖುಷಿ ನನಗೂ ಆಗತ್ತೆ, ನನ್ನ ಫಿಟ್ನೆಸ್ ಸೀಕ್ರೆಟ್ ನಾನು ಹೆಚ್ಚು ದಿನ‌ ಬದುಕಬೇಕು ನಿಮ್ಮನ್ನ ಎಂಟರ್ಟೈನ್ ಮಾಡಬೇಕು. 

ನಾನು ಸಿನಿಮಾ ಬ್ಲಾಕ್ ಬಾಸ್ಟರ್ ಅಂತ ಹೇಳಿದ್ರೆ ತಪ್ಪಾಗುತ್ತೆ. ನೀವು ಅಭಿಮಾನಿಗಳು ಬ್ಲಾಕ್ ಬಾಸ್ಟರ್ ಅಂತ ಹೇಳಬೇಕು ಎಂದು ಕಮಲ್ ತಿಳಿಸಿದರು.  ಇನ್ನು  ಸಂಗೀತ ನಿರ್ದೇಶಕ ಅನಿರುದ್ದ್  ಬಗ್ಗೆ ಮಾತನಾಡಿದ ಕಮಲ್ ಹಾಸನ್ ಅನಿರುದ್ಧ್ ಈ ರೀತಿ ಮ್ಯೂಸಿಕ್ ಮಾಡುತ್ತಾನೆ ಅನ್ನೋದೇ ಆಶ್ಚರ್ಯ. ಅವನ ತಾತನ ಕಾಲದಿಂದ ಅವ್ರ ಕುಟುಂಬದವರು ಮ್ಯೂಸಿಕ್ ಕಂಪೋಸ್ ಮಾಡಿಕೊಂಡು ಬರ್ತಿದ್ದಾರೆ. ಅನಿರುದ್ಧ್ ನಾಲ್ಕನೇ ಜನರೇಷನ್ ಎಂದು ಕಮಲ್ ಹೇಳಿದರು. ಈ ಸಮಯದಲ್ಲಿ ಪುಟ್ಟ ಅಭಿಮಾನಿ ಕೊಟ್ಟ ಪೇಂಟಿಂಗ್‌ಗೆ ಕಮಲ್ ಸಹಿ ಮಾಡಿಕೊಟ್ಟರು. ಅಲ್ಲದೇ ಆ ಪುಟ್ಟ ಅಭಿಮಾನಿಯ ತಲೆಗೆ ಹೂ ಕೂಡಾ ಮುಡಿಸಿದರು. 
 
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies