ಯಶ್‌- ದಳಪತಿ ಮಧ್ಯೆ ಭರ್ಜರಿ ಟಗಾಫರ್, ಬೀಸ್ಟ್‌ಗೆ ಟಕ್ಕರ್ ಕೊಡುತ್ತಾ ಕೆಜಿಎಫ್-2.?

ಇಡೀ ದೇಶದ ಸಿನಿ ಪ್ರೇಕ್ಷಕರು ಈಗ ಕೆಜಿಎಫ್-2 ಜ್ವರದಲ್ಲಿದ್ದಾರೆ. ಏಪ್ರಿಲ್ 14 ಬೇಗ ಬಂದು ಬಿಡ್ಲಪ್ಪಾ ಅಂತ ಕಾಯ್ತಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಅಂದ್ರೆ ಏಪ್ರಿಲ್ 13ಕ್ಕೇ ಬೆಳ್ಳಿತೆರೆ ಮೇಲೆ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನಟಿಸಿರೋ ಬೀಸ್ಟ್ ಸಿನಿಮಾ ಬರ್ತಿದೆ. 

Share this Video
  • FB
  • Linkdin
  • Whatsapp

ಇಡೀ ದೇಶದ ಸಿನಿ ಪ್ರೇಕ್ಷಕರು ಈಗ ಕೆಜಿಎಫ್-2 ಜ್ವರದಲ್ಲಿದ್ದಾರೆ. ಏಪ್ರಿಲ್ 14 ಬೇಗ ಬಂದು ಬಿಡ್ಲಪ್ಪಾ ಅಂತ ಕಾಯ್ತಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಅಂದ್ರೆ ಏಪ್ರಿಲ್ 13ಕ್ಕೇ ಬೆಳ್ಳಿತೆರೆ ಮೇಲೆ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನಟಿಸಿರೋ ಬೀಸ್ಟ್ ಸಿನಿಮಾ ಬರ್ತಿದೆ. ಹೀಗಾಗಿ ಸಿನಿ ಮಾರ್ಕೆಟ್‌ನಲ್ಲಿ ರಾಕಿಯ ಕೆಜಿಎಫ್-2 ಹಾಗೂ ವಿಜಯ್ರ ಬೀಸ್ಟ್ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದ್ದು, ಇಬ್ಬರ ಮಧ್ಯೆ ಟಗಾಫರ್ ಏರ್ಪಟ್ಟಿದೆ. ಇದೀಗ ಕೆಜಿಎಫ್-2 ಟ್ರೈಲರ್ ಬಂದ ಮೇಲೆ ಬೀಸ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಎರಡು ಸಿನಿಮಾಗಳ ಮಧ್ಯೆ 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಯಾವ ಸಿನಿಮಾದ್ದು ಅನ್ನೋ ಲೆಕ್ಕಾಚಾರ ಶುರುವಾಗಿದೆ. 

Add Asianetnews Kannada as a Preferred SourcegooglePreferred

ಹೀರೋ ಹೊಂಡ ಸಾಂಗ್, ಶರಣ್ ಪೆಪ್ಪಿ ಡ್ಯಾನ್ಸ್, ಆಶಿಕಾ ರಂಗನಾಥ್ ಗ್ಲಾಮರಸ್ ಲುಕ್..!

ದಳಪತಿ ವಿಜಯ್ ಬೀಸ್ಟ್ ಚಿತ್ರಕ್ಕೆ ಸೌತ್‌ನಲ್ಲಿ ದೊಡ್ಡ ಮಾರ್ಕೆಟ್ ಇದೆ. ಹೀಗಾಗಿ ಬಾಕ್ಸಾಫೀಸ್ನಲ್ಲಿ ಯಶ್ ಹಾಗು ವಿಜಯ್ ಮಧ್ಯೆ ಕ್ಲಾಶ್ ಆಗೋದಂತೂ ಸತ್ಯ. ಆದ್ರೆ ಯಶ್ ಮುಂದೆ ವಿಜಯ್ ಎದ್ದು ನಿಲ್ಲೋದು ಕಷ್ಟಕ್ಕೇ ಕಷ್ಟ ಅಂತ ಗೊತ್ತಾಗ್ತಿದೆ. ಯಾಕಂದ್ರೆ ಕೆಜಿಎಫ್-2 ಟ್ರೈಲರ್ ಬಂದಾಗ 24 ಗಂಟೆಯಲ್ಲಿ 105 ಮಿಲಿಯನ್ ವೀಕ್ಷಣೆ ಕಂಡಿತ್ತು. ಆದ್ರೆ ದಳಪತಿ ವಿಜಯ್ ಬೀಸ್ಟ್ ಟ್ರೈಲರ್ 24 ಗಂಟೆಯಲ್ಲಿ ಬರೀ 30 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಆಧಾರದ ಮೇಲೆ ರಾಕಿಂಗ್ ಸ್ಟಾರ್ ಮುಂದೆ ದಳಪತಿ ಆಟ ನಡೆಯೊದಿಲ್ಲಾ ಅಂತ ಬಾಕ್ಸಾಫೀಸ್ ಪಂಡಿತರು ಹೇಳ್ತಿದ್ದಾರೆ. ಯಶ್ ಕೆಜಿಎಫ್-2 ಪ್ರಚಾರಕ್ಕಾಗಾಗಿ ದೇಶಾದ್ಯಂತ ಸುತ್ತುತ್ತಿದ್ದಾರೆ. ಆದ್ರೆ ದಳಪತಿ ವಿಜಯ್ ಬೀಸ್ಟ್ ಪ್ರಚಾರದಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ. ಕೆಜಿಎಫ್-2 ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ರೆ, ಬೀಸ್ಟ್ ಕೂಡ ಐದು ಭಾಷೆಯಲ್ಲಿ ತೆರೆಗೆ ಬರ್ತಿದೆ.

Related Video