ಹೀರೋ ಹೊಂಡ ಸಾಂಗ್, ಶರಣ್ ಪೆಪ್ಪಿ ಡಾನ್ಸ್, ಆಶಿಕಾ ರಂಗನಾಥ್ ಗ್ಲಾಮರಸ್ ಲುಕ್..!

ಚುಟು ಚುಟು.... ಹಾಡಿನ ಮೂಲಕ ಮನ ಗೆದ್ದ ಆಶಿಕಾ ರಂಗನಾಥ್- ಶರಣ್ ಈಗ ಮತ್ತೊಮ್ಮೆ ಮೋಡಿ ಮಾಡುತ್ತಿದ್ದಾರೆ.  ಆಶಿಕಾ ಶರಣ್ ಈ ಬಾರಿ ಹೀರೋ ಹೊಂಡ ಬೈಕ್ ಏರಿ ಬಂದಿದ್ದಾರೆ. ಅದು ಅವತಾರ ಪುರುಷ ಸಿನಿಮಾದಲ್ಲಿ. 

Share this Video
  • FB
  • Linkdin
  • Whatsapp

ಚುಟು ಚುಟು.... ಹಾಡಿನ ಮೂಲಕ ಮನ ಗೆದ್ದ ಆಶಿಕಾ ರಂಗನಾಥ್- ಶರಣ್ ಈಗ ಮತ್ತೊಮ್ಮೆ ಮೋಡಿ ಮಾಡುತ್ತಿದ್ದಾರೆ. ಆಶಿಕಾ ಶರಣ್ ಈ ಬಾರಿ ಹೀರೋ ಹೊಂಡ ಬೈಕ್ ಏರಿ ಬಂದಿದ್ದಾರೆ. ಅದು ಅವತಾರ ಪುರುಷ ಸಿನಿಮಾದಲ್ಲಿ. ಉತ್ತರ ಕರ್ನಾಟಕ ಶೈಲಿಯ ಹಾಡಿನಲ್ಲಿ ಶರಣ್ ಆಶಿಕಾ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಯುಗಾಧಿ ಹಬ್ಬಕ್ಕೆ ಅವತಾರ ಪುರುಷ ಸಿನಿಮಾದ ಸ್ಪೆಷಲ್ ಡಾನ್ಸ್ ನಂಬರ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಬ್ಯೂಟಿ ಆಶಿಕಾಗೆ ಕಾಮಿಡಿ ಅಧ್ಯಕ್ಷ ಶರಣ್ ಇಂಡಿಯಾದಲ್ಲೇ ಇಂಗ್ಲೇಡ್ ತೋರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶರಣ್ ಆಶಿಕಾ ಕಾಂಬಿನೇಷನ್ನ ಅವತಾರ ಪುರುಷ ಸಿನಿಮಾದ ಟೀಸರ್ ಸೂಪರ್ ಹಿಟ್ ಆಗಿದೆ. ಇದೀಗ ಹೊರ ಬಂದಿರೋ ಹೀರೋ ಹೋಂಡ ಸಾಂಗ್ ಈ ಡಾನ್ಸ್ ಮ್ಯೂಸಿಕ್ ನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದೆ. ಈ ಹಾಡಿನಲ್ಲಿ ಕಲರ್ಫುಲ್ ಸೆಟ್ ಜೊತೆ ಶರಣ್ ಆಶಿಕಾ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಶರಣ್ ಮಾಡೋ ಪೆಪ್ಪಿ ಡಾನ್ಸ್, ಆಶಿಕಾ ಗ್ಲಾಮರಸ್ ಲುಕ್ ಈ ಹಾಡನ್ನ ಮತ್ತೆ ಮತ್ತೆ ನೋಡಬೇಕನ್ನಿಸುತ್ತೆ. 

ಮೇ 6 ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಸುನಿ ಅವತಾರ ಪುರುಷ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

Related Video