ಡಿಸೆಂಬರ್ ಲಕ್ ಹಿಂದೆ ಬಿದ್ದ ಸ್ಯಾಂಡಲ್‌ವುಡ್ ಲಕ್ಕಿ!'YASH-19' ಅನೌನ್ಸ್, ಶೂಟಿಂಗ್‌ಗೆ ಮಹಾ ಪ್ಲ್ಯಾನ್!
ರಂಗೀನ್ ಲೋಕ ಸಿನಿಮಾ ಜಗತ್ತಲ್ಲಿ ರಾಕಿಂಗ್ ಸ್ಟಾರ್ ಯಶ್ ರಂಗು ಹಬ್ಬೋದು ಯಾವಾಗಾ.? ಇದಕ್ಕೆ ಉತ್ತರ ಹುಡುಕ್ತಾ ಹತ್ತಾರು ಹಬ್ಬಗಳೇ ಕಳೆದು ಹೋದ್ವು. ಆದ್ರೆ ಹಬ್ಬದೂಟ ಮಾಡಿದ್ದು ಬಿಟ್ರೆ, ಯಶ್ ಹಬ್ಬದ ಖುಷಿ ಹೆಚ್ಚಿಸೋ ಯಾವ್ ಗುಡ್ ನ್ಯೂಸ್ ಅವರ ಫ್ಯಾನ್ಸ್ಗೆ ಕೊಡ್ಲಿಲ್ಲ. ಭಟ್ ಈಗ ಆಲ್ ಸೆಟ್, ಗೋ ಶೂಟ್ ಅನ್ನೋ ಬಿಗ್ ನ್ಯೂಸ್ ಒಂದು ಯಶ್ ಆಪ್ತ ಬಳಗದಿಂದ ರಿವೀಲ್ ಆಗಿದೆ.
ನ್ಯಾಷನಲ್ ಸ್ಟಾರ್ ಯಶ್ ತನ್ನ 19ನೇ ಸಿನಿಮಾ ಅನೌನ್ಸ್ ಹಾಗು ಶೂಟಿಂಗ್‌ಗೆ ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಅದು ಡಿಸೆಂಬರ್ ಪ್ಲ್ಯಾನ್.. ಯಶ್‌ಗೂ ವರ್ಷದ ಕೊನೆ ತಿಂಗಳು ಡಿಸೆಂಬರ್‌ಗೂ ಒಂದು ನಂಟಿದೆ. ಡಿಸೆಂಬರ್ ತಿಂಗಳು ಯಶ್‌ಗೆ(Yash) ಲಕ್ಕಿ ಮಂತ್. ಯಶ್ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿವೆ. ಯಶ್ ಸ್ಯಾಂಡಲ್‌ವುಡ್‌ನ(Sandalwood) ಲಕ್ಕಿ ಸ್ಟಾರ್. ಡಿಸೆಂಬರ್ ತಿಂಗಳು ಯಶ್‌ಗೆ ಲಕ್ಕಿ. ಹೀಗಾಗಿ ಈಗ ರಾಕಿ ಇದೇ ಡಿಸೆಂಬರ್‌ನಲ್ಲೇ ಮೋಸ್ಟ್ ಎಕ್ಸ್ಪೆಕ್ಟೆಡ್ ಮೋಸ್ಟ್ ವಾಂಟೆಡ್ ಯಶ್19 ಸಿನಿಮಾ(Yash 19 Movie) ಅನೌನ್ಸ್ ಮಾಡ್ತಾರಂತೆ. ಅದು ಡಿಸೆಂಬರ್ 26ರ ಕ್ರಿಸ್ಮಸ್ ಹಬ್ಬದ ದಿನ ಅಂತ ಹೇಳಲಾಗ್ತಿದೆ. ಯಶ್ ಸುಮ್ನೆ ಕೂತಿಲ್ಲ. ತನ್ನ 19ನೇ ಸಿನಿಮಾ ಕೆಲಸದಲ್ಲೇ ಫುಲ್ ಬ್ಯುಸಿಯಾಗಿದ್ದಾರೆ. ಕರ್ನಾಟಕ ಟು ಅಮೆರಿಕಾ ಅಂತ ಸುತ್ತುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಯಶ್ ಅಮೆರಿಕಾದಲ್ಲೇ(America) ಇದ್ದಾರೆ. ಇದೇ ತಿಂಗಳು 22ಕ್ಕೆ ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಯಶ್ 19 ಸಿನಿಮಾದ ಮೇಜರ್ ಪೋಷನ್ ಸಿನಿಮಾದ ಶೂಟಿಂಗ್ ಅಮೆರಿಕಾದಲ್ಲೇ ಆಗುತ್ತಂತೆ. ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ಗೆ ತಕ್ಕಂತೆ ಸಿನಿಮಾ ಸಿದ್ಧವಾಗುತ್ತಂತೆ. ಈ ಸಿನಿಮಾದಲ್ಲಿ ಹಾಲಿವುಡ್ ಟೆಕ್ನೀಷಿಯನ್ಸ್ ವರ್ಕ್ ಮಾಡ್ತಿದ್ದು ಯುಕೆ ಇಂಡಿಯಾ, ಶ್ರೀಲಂಕಾ, ಹಾಗು ಕರ್ನಾಟಕದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತೆ.
ಇದನ್ನೂ ವೀಕ್ಷಿಸಿ: ರಶ್ಮಿಕಾ, ವಿಜಯ್ ಲವ್ ಮಾಡ್ತಿರೋದು ಪಕ್ಕನಾ? ನೇರವಾಗಿ ವಿಜಯ್‌ಗೆ ಕಾಲ್ ಮಾಡಿದ್ದಾಗ ಆಗಿದ್ದೇನು ?