ರಶ್ಮಿಕಾ, ವಿಜಯ್ ಲವ್ ಮಾಡ್ತಿರೋದು ಪಕ್ಕನಾ? ನೇರವಾಗಿ ವಿಜಯ್‌ಗೆ ಕಾಲ್ ಮಾಡಿದ್ದಾಗ ಆಗಿದ್ದೇನು ?
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪ್ರೀತಿ ಮಾಡುತ್ತಿರುವುದು ಪಕ್ಕಾ ಎನ್ನಲಾಗ್ತಿದೆ. ಶೋವೊಂದರಲ್ಲಿ ರಶ್ಮಿಕಾ ವಿಜಯ್‌ಗೆ ಕಾಲ್ ಮಾಡಿದ್ದು, ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ(Vijay Devarakonda) ಸದ್ಯದ್ರಲ್ಲೇ ಮದುವೆಯಾಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಏಕೆಂದರೆ ಇತ್ತೀಚೆಗೆ ಬಾಲಯ್ಯ ನಡೆಸುವ ಶೋವೊಂದರಲ್ಲಿ ಇದು ಪಕ್ಕಾ ಆಗಿದೆಯಂತೆ. ಅನಿಮಲ್ ಚಿತ್ರದಲ್ಲಿ ಪ್ರಮೋಷನ್‌ಗಾಗಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್(Ranbir Kapoor) ಮತ್ತು ರಶ್ಮಿಕಾ ಮಂದಣ್ಣ(Rashmika Mandanna), ಬಾಲಯ್ಯ ನಡೆಸಿಕೊಡುವ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ(Unstoppable with nbk) ಶೋಗೆ ಬಂದಿದ್ದರು. ಈ ಶೋನಲ್ಲಿ ರಶ್ಮಿಕಾ ವಿಜಯ್‌ಗೆ ಕಾಲ್(Call) ಮಾಡಿದ್ದಾರೆ. ಇವರಿಬ್ಬರ ನಡುವಿನ ಈ ಸಂಭಾಷಣೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಈ ಸಂಚಿಕೆಯ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದ ಪ್ರೇಕ್ಷಕರನ್ನು ಭರ್ಜರಿಯಾಗಿ ಆಕರ್ಷಿಸುತ್ತಿದೆ.
ಇದನ್ನೂ ವೀಕ್ಷಿಸಿ: 'ಶುಗರ್ ಫ್ಯಾಕ್ಟರಿ' ಎರಡನೇ ಟ್ರೈಲರ್ ರಿಲೀಸ್..! 'ಕೃಷ್ಣಾ'ವತಾರಕ್ಕೆ ನಿಖಿಲ್ ಕುಮಾರಸ್ವಾಮಿ ಬೌಲ್ಡ್!