Asianet Suvarna News Asianet Suvarna News

ವಿಷ್ಣು ಎಲ್ಲಿ? ವರಮಹಾಲಕ್ಷ್ಮೀ ಫೋಟೋ ಶೇರ್‌ ಮಾಡಿದ ರಾಧಿಕಾಗೆ ಫ್ಯಾನ್ಸ್‌ ಪ್ರಶ್ನೆ!

ರಾಕಿಭಾಯ್ ಯಶ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಜೋರಾಗಿತ್ತು. ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಅದ್ದೂರಿಯಾಗಿ ಹಬ್ಬ ಆಚರಿಸಿದರು. ಇಬ್ಬರು ಮುದ್ದಾದ ಮಕ್ಕಳ ಜೊತೆ ರಾಧಿಕಾ ಹಬ್ಬ ಮಾಡಿದರು. ಹಬ್ಬದ ಒಂದಿಷ್ಟು ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ರಾಧಿಕಾಗೆ ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. 

Aug 9, 2022, 12:34 PM IST

ಇತ್ತೀಚಿಗಷ್ಟೆ ವರಮಹಾಲಕ್ಷ್ಮೀ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಸೆಲೆಬ್ರಿಟಿಗಳು ಸಹ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮಿಸಿದರು. ರಾಕಿಭಾಯ್ ಯಶ್ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬ ಜೋರಾಗಿತ್ತು. ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಅದ್ದೂರಿಯಾಗಿ ಹಬ್ಬ ಆಚರಿಸಿದರು. ಇಬ್ಬರು ಮುದ್ದಾದ ಮಕ್ಕಳ ಜೊತೆ ರಾಧಿಕಾ ಹಬ್ಬ ಮಾಡಿದರು. ಹಬ್ಬದ ಒಂದಿಷ್ಟು ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ರಾಧಿಕಾಗೆ ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಹೌದು, ವಿಷ್ಣು ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಲಕ್ಷ್ಮೀ ಏನು ಇದೆ ಆದರೆ ವಿಷ್ಣು ಎಲ್ಲಿ ಫ್ಯಾನ್ಸ್ ಕೇಳುತ್ತಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್ ಫೋಟೋದಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ರಾಕಿಭಾಯ್ ಕಾಣಿಸುತ್ತಿಲ್ಲ ಎನ್ನುತ್ತಿದ್ದಾರೆ. ಹಬ್ಬದ ದಿನ ಯಶ್ ಎಲ್ಲೋಗಿದ್ದರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

Video Top Stories