ಸ್ಯಾಂಡಲ್‌ವುಡ್‌ನಲ್ಲಿ'ವಾಮನ' ಮಾಸ್ ಸಂಚಾರ: ಮೈಸೂರಿನಲ್ಲಿ ಆ್ಯಕ್ಷನ್ ಧಮಾಕದಲ್ಲಿ ಮಿಂಚಿದ ಧನ್ವೀರ್ !

ನಿರ್ಮಾಪಕ ಚೇತನ್ ಗೌಡ ದೊಡ್ಡ ಕನಸು 'ವಾಮನ'
ನಟ ಧನ್ವೀರ್‌ಗೆ ನಟಿ ರೀಷ್ಮಾ ನಾಣಯ್ಯ ಜೋಡಿ..!
ಶಂಕರ್ ರಾಮನ್ ಎಸ್ ನಿರ್ದೇಶನ ವಾಮನ ಸಿನಿಮಾ
 

Share this Video
  • FB
  • Linkdin
  • Whatsapp

ಕನ್ನಡ ಸಿನಿ ಪ್ರೇಕ್ಷಕರಿಗೆ ಮತ್ತೊಬ್ಬ ಮಾಸ್ ಹೀರೋ ಆ್ಯಡ್‌ ಆಗಿದ್ದಾರೆ. ಅವ್ರೇ ವಾಮನ ಧನ್ವೀರ್. ಹೌದು, ಮೊದಲ ಸಿನಿಮಾದಲ್ಲೇ ಚಿತ್ರರಂಗದಲ್ಲಿ ತನ್ನ ಬಜಾರ್ ಸೃಷ್ಟಿಸಿಕೊಂಡಿದ್ದ ಧನ್ವೀರ್ ಈಗ ವಾಮನ ಸಂಚಾರ ಮಾಡುತ್ತಿದ್ದಾರೆ. ಧನ್ವೀರ್(Dhanveer) ನಟನೆಯಲ್ಲಿ ವಾಮನ ಸಿನಿಮಾದ(Vamana movie) ಆಕ್ಷನ್ ಟೀಸರ್ ಮೈಸೂರಿನಲ್ಲಿ ರಿಲೀಸ್ ಆಗಿದೆ. ವಾಮನ ಟೀಸರ್ ನೋಡುತ್ತಿದ್ರೆ ಧನ್ವೀರ್ ಬಾಕ್ಸಾಫೀಸ್‌ನ ಹೊಸ ಹಂಟರ್ ಅನ್ನೋದು ಗೊತ್ತಾಗುತ್ತೆ. ಈ ಸಿನಿಮಾದಲ್ಲಿ ಧನ್ವೀರ್ ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಡ್ರಗ್ಸ್ ಕಾಪ್ ಮತ್ತು ಫ್ಯಾಮಿಲಿ ಸ್ಟೋರಿ ಈ ಸಿನಿಮಾದಲ್ಲಿದೆ. ಸ್ಟಂಟ್ ಡೈರೆಕ್ಟರ್ ಅರ್ಜುನ್ ಮಾಸ್ಟರ್ ಧನ್ವೀರ್ ಬಳಿ ಇರೋ ಟ್ಯಾಲೆಂಟ್‌ನನ್ನ ಹೊರ ತಂದಿದ್ದಾರೆ. ಮೈಸೂರಿನಲ್ಲಿ ಸ್ಥಳೀಯ ಶಾಸಕರಾದ ಜಿ.ಡಿ.ಹರೀಶ್‌ಗೌಡ, ಡಿ. ರವಿ ಶಂಕರ್ ಟೀಸರ್ ರಿಲೀಸ್ ಮಾಡಿದ್ರು. ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಈ ಸಿನಿಮಾವನ್ನ ಚೇತನ್ ಗೌಡ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಇತ್ತೀಗೆಚೆಗೆ ಸಿನಿಮಾ ಫ್ಯಾಶನ್ ಇರೋ ನಿರ್ಮಾಪಕರು ಬಂದಿದ್ದಾರೆ. ಅವರಲ್ಲಿ ನಿರ್ಪಾಪಕ ಚೇತನ್ ಗೌಡ ಕೂಡ ಒಬ್ರು. ವಾಮನ ನಿರ್ಪಾಪಕ ಚೇತನ್ ಗೌಡ ಅವರ ಮೊದಲ ನಿರ್ಮಾಣದ ಸಿನಿಮಾ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಗೆಳೆಯನ ಹುಟ್ಟುಹಬ್ಬಕ್ಕೆ ಧನಂಜಯ್ ಕೊಡುಗೆ: ನಾಗಭೂಷಣ್ ಜನ್ಮದಿನಕ್ಕೆ 'ಟಗರು ಪಲ್ಯ' ಸ್ಪೆಷಲ್ ಟ್ರೀಟ್!

Related Video