ಗೆಳೆಯನ ಹುಟ್ಟುಹಬ್ಬಕ್ಕೆ ಧನಂಜಯ್ ಕೊಡುಗೆ: ನಾಗಭೂಷಣ್ ಜನ್ಮದಿನಕ್ಕೆ 'ಟಗರು ಪಲ್ಯ' ಸ್ಪೆಷಲ್ ಟ್ರೀಟ್!

ಸ್ಯಾಂಡಲ್ವುಡ್ನಲ್ಲಿ ಸಿದ್ಧವಾಗಿದೆ 'ಟಗರು ಪಲ್ಯ'
ನಾಗಭೂಷಣ್-ಅಮೃತಾ ಜೋಡಿಯ ಸಿನಿಮಾ.!
'ಟಗರು ಪಲ್ಯ' ಟೈಟಲ್ ಸಾಂಗ್ ಬಿಡುಗಡೆ..!

Share this Video
  • FB
  • Linkdin
  • Whatsapp

ಟಗರು ಪಲ್ಯಾ ಟೇಸ್ಟ್ ಆಫ್ ನಟ ರಾಕ್ಷಸ ಡಾಲಿ ಧನಂಜಯ್. ಸ್ಯಾಂಡಲ್‌ವುಡ್‌ನಲ್ಲಿ(Sandalwood) ಭಾರಿ ರುಚಿ ರುಚಿಯಾದ ಟಗರು ಪಲ್ಯಾ(Tagaru Palya) ರೆಡಿಯಾಗಿದೆ. ಹೀಗಾಗಿ ನೀವು ಟಗರು ಪಲ್ಯಾ ತಿನ್ನೋಕೆ ಬರಲೇ ಬೇಕು ಎನ್ನುತ್ತಿದೆ ನಟ ರಾಕ್ಷಸ ಡಾಲಿಯ ಗ್ಯಾಂಗ್. ನಟ ಡಾಲಿ ಧನಂಜಯ್(Actor Dolly Dhananjay) ನಿರ್ಮಾಣದ ಮತ್ತೊಂದು ಕನಸು ಟಗರು ಪಲ್ಯಾ ಸಿನಿಮಾ. ಈ ಸಿನಿಮಾದ ನಾಯಕ ನಾಗಭೂಷಣ್(actor Nagabhushan). ನಾಯಕಿ ನೆನಪಿರಲಿ ಪ್ರೇಮ್ ಮುದ್ದಿನ ಪುತ್ರಿ ಅಮೃತಾ. ಈ ಸ್ಪೆಷಲ್ ಜೋಡಿಯ ಟಗರು ಪಲ್ಯಾ. ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ನಟ ನಾಗಭೂಷಣ್ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಟಗರು ಪಲ್ಯಾ ಟೈಟಲ್ ಸಾಂಗ್ ಹೊರ ಬಂದಿದೆ. ವಿಶೇಷ ಅಂದ್ರೆ ಈ ಹಾಡಿಗೆ ಡಾಲಿ ಧನಂಜಯ್ ಅವರೇ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಉಮೇಶ್ ಕೆ. ಕೃಪಾ ನಿರ್ದೇಶನದ ಈ ಹಾಡು ಈಗ ಟಗರು ಪ್ರೀಯರ ಅಂಥೇಮ್ ಆಗೋ ಹಾಗೆ ಮೂಡಿ ಬಂದಿದೆ. ನಾಗಭೂಷಣ್, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧ ಹಳ್ಳಿ ಸೊಗಡಿನ ಸೊಬಗಲ್ಲಿ ಕಂಗೊಳಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಇಂದು ಥಿಯೇಟರ್‌ನಲ್ಲಿ ಕ್ಷೇತ್ರಪತಿ ಆರ್ಭಟ: ಉತ್ತರ ಕರ್ನಾಟಕದ ಸೊಗಡು, ಸಂಸ್ಕೃತಿಯ ಪ್ರತಿಬಿಂಬ ಈ ಸಿನಿಮಾ !

Related Video