Upendra: ಸಿನಿಮಾ ಕೆಲಸ ಬಿಟ್ಟು ಹೋಮ್ ಮಿನಿಸ್ಟರ್ ಆದ ರಿಯಲ್ ಸ್ಟಾರ್!

ಹೋಮ್ ಮಿನಿಸ್ಟರ್ ಅಂದ್ರೆ ರಾಜ್ಯ ಭಾರ ಮಾಡ್ಬೇಕು. ರಾಜ್ಯದ ಜನರ ಕಷ್ಟ ಸುಖಕ್ಕೆ ಆಗಬೇಕು. ಆದ್ರೆ ಇಲ್ಲೊಬ್ರೊ ಹೋಮ್ ಮಿನಿಸ್ಟರ್ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡ್ತಿದ್ದಾರೆ. ಅರೆ ನಮ್ ಹೋಮ್ ಮಿನಿಸ್ಟರ್ಗೆ ಬಣ್ಣದ ಜಗತ್ತಲ್ಲೇನು ಕೆಲಸ ಅಂತ ಅಂದ್ಕೊಳ್ಳಬೇಡಿ.

Share this Video
  • FB
  • Linkdin
  • Whatsapp

ಹೋಮ್ ಮಿನಿಸ್ಟರ್ (Home Minister) ಅಂದ್ರೆ ರಾಜ್ಯ ಭಾರ ಮಾಡ್ಬೇಕು. ರಾಜ್ಯದ ಜನರ ಕಷ್ಟ ಸುಖಕ್ಕೆ ಆಗಬೇಕು. ಆದ್ರೆ ಇಲ್ಲೊಬ್ರೊ ಹೋಮ್ ಮಿನಿಸ್ಟರ್ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡ್ತಿದ್ದಾರೆ. ಅರೆ ನಮ್ ಹೋಮ್ ಮಿನಿಸ್ಟರ್ಗೆ ಬಣ್ಣದ ಜಗತ್ತಲ್ಲೇನು ಕೆಲಸ ಅಂತ ಅಂದ್ಕೊಳ್ಳಬೇಡಿ. ಆ ಗೃಹ ಮಂತ್ರಿಗಳೇ ಬೇರೆ ಇಲ್ಲಿರೋ ಹೋಮ್ ಮಿಸ್ಟರ್ ಬೇರೆ. ಅವರೇ ನಮ್ಮ ರಿಯಲ್ ಸ್ಟಾರ್ ಉಪೇಂದ್ರ (Upendra). ಇವ್ರ ಕೆಲಸ ಏನ್ ಗೊತ್ತಾ? ಮನೆ ಕ್ಲೀನ್ ಮಾಡೋದು ಹೆಂಡತಿ ಸೇವೆ ಮಾಡೋದು, ಮಕ್ಕಳನ್ನ ನೋಡಿಕೊಳ್ಳೋದು. ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಇಷ್ಟೊಂದು ಕೆಲಸ ಮಾಡುತ್ತಿರೋದು ಯಾಕೆ ಗೊತ್ತಾ.? 

Add Asianetnews Kannada as a Preferred SourcegooglePreferred

ಮುತ್ತಪ್ಪ ರೈ ಆಗ್ತಿದ್ದಾರಾ ಉಪೇಂದ್ರ.? ಕುತೂಹಲ ಮೂಡಿಸಿದೆ ಆರ್‌ಜಿವಿ ಟ್ವೀಟ್..!

ಅದೇ ಉಪ್ಪಿಯ ಹೋಮ್ ಮಿನಿಸ್ಟರ್ ಸಿನಿಮಾ. ರಿಯಲ್ ಸ್ಟಾರ್ ಅಭಿನಯಿಸಿರೋ ಹೊಸ ಸಿನಿಮಾ 'ಹೋಮ್ ಮಿನಿಸ್ಟರ್' ಈ ವಾರ ತೆರೆ ಮೇಲೆ ಬರ್ತಾ ಇದೆ. ಈ ಸಿನಿಮಾದ ಪ್ರಚಾರಕ್ಕೆ ಉಪ್ಪಿ ಮನೆಯಲ್ಲಿ ಕೆಲಸ ಮಾಡಿದ್ದಾರೆ. ಹೋಮ್ ಮಿನಿಸ್ಟರ್ ಅಂದ ಕೂಡ್ಲೆ ಇದು ಪಕ್ಕಾ ಸಂಸಾರಿಕ ಸ್ಟೋರಿಯ ಸಿನಿಮಾ ಅನ್ನೋದು ನಿಮ್ ತಲೆಗೆ ಬಂದು ಬಿಡುತ್ತೆ. ಅದು ಕಂಡಿತ ಹೌದು, ಗಂಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ರೆ, ಹೆಂಡತಿ ಹೊರಗಡೆ ಕೆಲಸಕ್ಕೆ ಹೋಗಿ ಸಂಸಾರಕ್ಕೆ ದುಡಿಯುವ ಕತೆ ಸಿನಿಮಾದಲ್ಲಿದೆ. ಆ ಸ್ಟೋರಿಯಲ್ಲೂ ಒಂದು ತ್ರಿಲ್ಲಿಂಗ್ ಕತೆ ಇದೆ. ಅದೇ ಹೋಮ್ ಮಿನಿಸ್ಟರ್ ಸಿನಿಮಾ ನೋಡೋದಕ್ಕೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯೋ ಸೀಕ್ರೆಟ್.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video