'ಮಾರ್ಟಿನ್'ನಲ್ಲಿ ಬಹು ದೊಡ್ಡ ಸ್ಟಾರ್ ಕಾಸ್ಟ್..! ಈ ಸಿನಿಮಾದಲ್ಲಿ ಧ್ರುವ ಹೀರೋನಾ..? ವಿಲನ್ನಾ..?

ಈ ವರ್ಷ ಸ್ಯಾಂಡಲ್‌ವುಡ್‌ಗೆ ಸಿನಿಮಾ ಬರ ಬಂದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಸ್ಟಾರ್ ಸಿನಿಮಾಗಳಿಲ್ಲದೇ ಬಸವಳಿದಿರೋ ಕನ್ನಡ ಚಿತ್ರರಂಗ ಮತ್ತೆ ಎದ್ದು ನಿಲ್ಲೋ ಟೈಂ ಬಂದಿದೆ. ಆ ದೊಡ್ಡ ಭರವಸೆ ಹುಟ್ಟಿಸಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಅದು ಮಾರ್ಟಿನ್ ಸಿನಿಮಾ ಮೂಲಕ.

First Published Jul 19, 2024, 10:15 AM IST | Last Updated Jul 19, 2024, 10:15 AM IST

ಮಾರ್ಟಿನ್ (Martin) ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್ ಇಂಡಿಯಾದಲ್ಲಿ(Pan India Cinema) ಸೌಂಡ್ ಮಾಡೋಕೆ ಸಜ್ಜಾಗಿರೋ ಆಕ್ಷನ್ ತ್ರಿಲ್ಲರ್ ಡ್ರಾಮ. ಈ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ವರ್ಲ್ಡ್ ವೈಡ್ ತೆರೆ ಮೇಲೆ ಮೂಡಿ ಬರಲಿದೆ. ಇದೀಗ ಸಿನಿಮಾವನ್ನ ಕರ್ನಾಟಕ ಟು ಬಾಂಬೆಗೆ ಮುಟ್ಟಿಸಬೇಕು ಅಂತ ಮಾರ್ಟಿನ್ ಟೀಂ ಬಿಗ್ ಅನೌನ್ಸ್ ಮೆಂಟ್ ಒಂದನ್ನ ಮಾಡಿದೆ. ಈ ಅನೌನ್ಸ್ ಮೆಂಟ್ಆಕ್ಷನ್ ಪ್ರಿನ್ಸ್ ಫ್ಯಾನ್ಸ್‌ಗೆ ಹಬ್ಬದಂತಿದೆ. ಮಾರ್ಟಿನ್ ಸಿನಿಮಾದ ಟ್ರೈಲರ್, ಟೈಟಲ್ ಸಾಂಗ್, ಲವ್ ಸಾಂಗ್, ಥಿಯೇಟ್ರಿಕಲ್ ಟ್ರೈಲರ್(Trailer) ರಿಲೀಸ್‌ಗೆ ರೆಡಿಯಾಗಿದೆ. ಆದ್ರೆ ಆ ನಾಲ್ಕು ಕಂಟೆಂಟ್‌ನಲ್ಲಿ ನಿಮಗೆ ಯಾವುದನ್ನ ನೋಡಬೇಕು ಅಂತ ಹೇಳಬೇಕು. ಅದಕ್ಕಾಗಿ ಮಾರ್ಟಿನ್ ಟೀಂ ಓಟಿಂಗ್ ಪೋಲ್ ನಡೆಸುತ್ತಿದೆ. ಆಡಿಯೆನ್ಸ್ ಹಾಗೂ ಧ್ರುವನ ಫ್ಯಾನ್ಸ್ ನೀವು ನಿರೀಕ್ಷೆ ಇಟ್ಟುಕೊಂಡಿರೋ ಕಂಟೆಂಟ್‌ಗಾಗಿ ಓಟಿಂಗ್ ಪೋಲ್‌ನಲ್ಲಿ ಓಟ್ ಮಾಡಬೇಕು. ಸೊಷಿಯಲ್ ಮೀಡಿಯಾದಲ್ಲಿ ಈ ಓಟಿಂಗ್ ಪೋಲ್ ಜುಲೈ 20 ರಿಂದ 21 ರ ವರೆಗೆ ಅಂದ್ರೆ ಎರಡು ದಿನ ಓಪನ್ ಇರುತ್ತೆ. ನಂತರ ಜುಲೈ 22ರಂದು ಯಾರು ಯಾವ ಕಂಟೆಂಟ್ಗಾಗಿ ಜಾಸ್ತಿ ಓಟ್ ಮಾಡಿದ್ದಾರೋ ಆ ಕಂಟೆಂಟ್ಅನ್ನ ರಿಲೀಸ್ ಮಾಡೋ ದಿನಾಂಕ ಅನೌನ್ಸ್ ಮಾಡಲಾಗುತ್ತೆ. ಡೈರೆಕ್ಟರ್ ಎಪಿ ಅರ್ಜುನ್ ಹಾಗು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಂಟು ವರ್ಷಗಳ ನಂತರ ಜೊತೆಯಾಗಿ ಮಾಡಿರೋ ದೇಶಾಭಿಮಾನದ ಕತೆಯ ಸಿನಿಮಾ ಮಾರ್ಟಿನ್. ಅದ್ಧೂರಿ ಸಿನಿಮಾದಲ್ಲಿ ಲವರ್ ಬಾಯ್ ಮಾಡಿ ಧ್ರುವನಿಗೆ 100 ಸಕ್ಸಸ್ಫುಲ್ ಸಿನಿಮಾ ಕೊಟ್ಟಿದ್ದ ಎ.ಪಿ ಅರ್ಜುನ್ ಈಗ ಧ್ರುವನನ್ನ ಸೋಲ್ಜರ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Darshan: ನಟ ದರ್ಶನ್‌ಗೆ ಡಬಲ್ ಶಾಕ್..! ಇನ್ನೂ 14 ದಿನ ನ್ಯಾಯಾಂಗ ಬಂಧನದಲ್ಲಿ, ಮತ್ತೆ ಮುಂದುವರೆದ ಜೈಲೂಟ!

Video Top Stories