ಬುಡಕಟ್ಟು ಜನಾಂಗ v/s ರಾಕ್ಷಸನ ಕಥೆಯುಳ್ಳ ‘ಕೋರ’ ಚಿತ್ರಕ್ಕೆ ಸ್ಟಾರ್ ಸುನಾಮಿ ಕಿಟ್ಟಿ ನಾಯಕ!

ರಿಯಾಲಿಟಿ ಶೋಗಳಲ್ಲಿ ಸುನಾಮಿ ಪರ್ಫಾರ್ಮೆನ್ಸ್ ನೀಡಿ ಫೇಮಸ್ ಆದ ಸುನಾಮಿ ಕಿಟ್ಟಿ ಈಗ ನಾಯಕನಟನಾಗಿ 'ಕೋರ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಟ್ರೈಲರ್ ಮೂಲಕ ಸದ್ದು ಮಾಡಿರೋ ಈ ಸಿನಿಮಾ ಸದ್ಯದಲ್ಲೇ ಥಿಯೇಟರ್‌ಗಳಿಗೆ ಬರಲಿದೆ.

Share this Video
  • FB
  • Linkdin
  • Whatsapp

ರಿಯಾಲಿಟಿ ಶೋಗಳಲ್ಲಿ ಸುನಾಮಿ ಪರ್ಫಾರ್ಮೆನ್ಸ್ ನೀಡಿ ಫೇಮಸ್ ಆದ ಸುನಾಮಿ ಕಿಟ್ಟಿ ಈಗ ನಾಯಕನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾನೆ. ಕಿಟ್ಟಿ ನಟನೆಯ ವಿಭಿನ್ನ ಕಥಾಹಂದರದ ಕೋರ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ತನ್ನ ಕಂಟೆಂಟ್ ಮತ್ತು ಮೇಕಿಂಗ್​ನಿಂದ ಸದ್ದು ಮಾಡ್ತಾ ಇದೆ.ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಈ ಸಿನಿಮಾಗೆ ಒರಟ ಶ್ರೀ ಆಕ್ಷನ್ ಕಟ್ ಹೇಳಿದ್ದು, ಕನ್ನಡದ ಜೊತೆಗೆ ತಮಿಳು, ತೆಲಗಿನಲ್ಲೂ ಸಿನಿಮಾ ಮೂಡಿಬಂದಿದೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯಿರೋ ಈ ಸಿನಿಮಾದ ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌ ಕಿಟ್ಟಿ ಜೊತೆ ನಾಯಕಿಯಾಗಿ ಚರಿಷ್ಮಾ ನಟಿಸಿದ್ದು, ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ಸೌಜನ್ಯ ಚಿತ್ರದ ತಾರಾಗಣದಲ್ಲಿದ್ದಾರೆ. ಟ್ರೈಲರ್ ಮೂಲಕ ಸದ್ದು ಮಾಡಿರೋ ಈ ಸಿನಿಮಾ ಸದ್ಯದಲ್ಲೇ ಥಿಯೇಟರ್ ಅಂಗಳಕ್ಕೆ ಬರೋ ತಯಾರಿಯಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ ಪವಾಡಗಳ ಸ್ಥಳವಿದು

Related Video