ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ ಪವಾಡಗಳ ಸ್ಥಳವಿದು

ಬಂಟ್ವಾಳದಲ್ಲಿ ಇರುವ ವನದುರ್ಗ ದೇವಿಯನ್ನು ಪೂಜಿಸುವ ಗೌತಮಿ. ಮನೆ ದೇವರು ಅಲ್ಲದಿದ್ದರೂ ಇಷ್ಟದ ದೇವರ ಮೇಲೆ ಅಪಾರ ನಂಬಿಕೆ.... 

Bigg Boss gouthami jadav prays mangalore vanadurga temple and its significance

ಸತ್ಯ ಸೀರಿಯಲ್ ಮೂಲಕ ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದ ಗೌತಮಿ ಜಾದವ್ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಖತ್ ಪಾಸಿಟಿವ್ ಆಗಿ ಗೇಮ್ ಶುರು ಮಾಡಿದ ಗೌತಮಿ ಜಾದವ್ ಪ್ರತಿ ದಿನವೂ ತಪ್ಪದೆ ಬಿಬಿ ಮನೆಯಲ್ಲಿ ಇರುವ ದೇವಿಗೆ ಪೂಜೆ ಮಾಡುತ್ತಾರೆ. ಈ ಸಮಯದಲ್ಲಿ ವನದುರ್ಗೆ ಮಂತ್ರವನ್ನು ಜಪಿಸುತ್ತಾರೆ. ವಾರದ ಕ್ಯಾಪ್ಟನ್ ಆಗಲು ಬಿಗ್ ಬಾಸ್ ಕಷ್ಟದ ಟಾಸ್ಕ್ ಕೊಟ್ಟರೂ ಸಹ ಗೌತಮಿ ಗೆಲ್ಲುತ್ತಾರೆ. ಈ ಸಮಯದಲ್ಲಿ ಗೌತಮಿ ವನದುರ್ಗೆ ಜಪ ಮಾಡುವುದನ್ನು ವೀಕ್ಷಕರು ಗಮನಿಸಿದ್ದಾರೆ. ಯಾಕೆ ವನದುರ್ಗೆಯನ್ನು ಅಷ್ಟು ನಂಬುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ಸಿಕ್ಕ ಉತ್ತರವಿದು.

'ಕಳೆದ 6-7 ವರ್ಷಗಳಿಂದ ನಾನು ಸಸ್ಯಹಾರಿ ಆಗಿದ್ದೀನಿ. ಮಂಗಳೂರಿನಲ್ಲಿ ಇರುವ ವನದುರ್ಗೆ ದೇವಿಗೆ ಸುಮಾರು 108 ದಿನಗಳ ಕಾಲ ಪೂಜೆ ಮಾಡುತ್ತಿದ್ದೆ ಆ ಸಮಯದಲ್ಲಿ ನಾನ್‌ವೆಜ್‌ ತಿನ್ನುವುದನ್ನು ನಿಲ್ಲಿಸಿದ್ದರೆ. ಅದಾದ ಮೇಲೆ ಮತ್ತೆ ನಾನ್‌ವೆಚ್‌ ತಿನ್ನಬೇಕು ಅನಿಸುತ್ತಿಲ್ಲ. ಸುಮಾರು 9 ವರ್ಷಗಳಿಂದ ಪ್ರತಿ ತಿಂಗಳು ಒಮ್ಮೆ ದೇವಸ್ಥಾನಕ್ಕೆ ಹೋಗಿ ಬರುತ್ತೀನಿ, ಇದು ನಮ್ಮ ಮನೆ ದೇವರು ಅಲ್ಲ ಆದರೆ ನಾನು ನಂಬಿ ನಡೆದುಕೊಂಡು ಬರುತ್ತಿರುವ ದೇವರು. ವನದುರ್ಗೆ ದರ್ಶನ ಪಡೆದ ನಂತರ ನನಗೆ ತುಂಬಾ ಒಳ್ಳೆಯದಾಗಿದೆ ಅಲ್ಲದೆ ತುಂಬಾ ಪಾಸಿಟಿವಿಟಿ ಇದೆ. ದೇವರು ಅಂದ್ರೆ ಜನರು ಮೋಡ ನಂಬಿಕೆಗೆ ಹೋಗುತ್ತಾರೆ ಆದರೆ ಇಲ್ಲಿ ನಂಬಿಕೆ ಮೇಲೆ ದೇವರಿಗೆ ಹೋದರೆ ಅಂದುಕೊಂಡಿದ್ದು ನಡೆಯುತ್ತದೆ. ಅಲ್ಲಿ ಇರುವ ಗುರುಜೀ ಕೂಡ ತುಂಬಾ ಪ್ರಾಕ್ಟಿಕಲ್ ಆಗಿದ್ದಾರೆ. ದೇವರನ್ನು ನಂಬಿ ಕೆಲಸ ಮಾಡಿದರೆ ಖಂಡಿತಾ ಒಳ್ಳೆಯದಾಗುತ್ತದೆ. ವನತೈಲಂ ಎಂಬ ತಲೆ ಕೂದಲು ಎಣ್ಣೆಯ ಬ್ರ್ಯಾಂಡ್‌ ಆರಂಭಿಸಿದ್ದೀನಿ ಏಕೆಂದರೆ ಹಲವು ವರ್ಷಗಳಿಂದ ನಾನು ಮನೆಯಲ್ಲಿಯೇ ಎಣ್ಣೆ ತಯಾರಿ ಮಾಡಿಕೊಂಡು ಬಳಸುತ್ತಿದ್ದೆ. ನನ್ನ ಸಹೋದರ ಐಡಿಯಾ ಕೊಟ್ಟ ಮೇಲೆ ನಾನು ಈ ಬ್ಯುಸಿನೆಸ್ ಆರಂಭಿಸಿದ್ದೀನಿ. ವನದುರ್ಗೆಯಲ್ಲಿ ಇರುವ ಗುರೂಜಿ ಜೊತೆ ಮಾತನಾಡಿದ ಮೇಲೆ ಈ ಹೆಸರನ್ನು ಆಯ್ಕೆ ಮಾಡಿದ್ದೀನಿ' ಎಂದು ಖಾಸಗಿ ಟಿವಿಯ ಯೂಟ್ಯೂಬ್ ಸಂದರ್ಶನದಲ್ಲಿ ಗೌತಮಿ ಮಾತನಾಡಿದ್ದಾರೆ. 

Bigg Boss gouthami jadav prays mangalore vanadurga temple and its significance

ಯಾರ ಬಾಲವನ್ನು ಹಿಡಿಯೋಕೆ ಹೋಗ್ಬೇಡ,ಅವಳ ಜೊತೆಯಲ್ಲಿರೋದು ಬೇಡ; ಉಗ್ರಂ ಮಂಜುಗೆ ಸಹೋದರಿ ವಾರ್ನಿಂಗ್

ವನದುರ್ಗಾ ಮೂಲ ಮಂತ್ರ

ಓ೦  ಹ್ರೀ೦ ದು೦ ಉತ್ತಿಷ್ಠ ಪುರುಷಿ ಕಿ೦ ಸ್ವಪಿಷಿ ಭಯ೦ ಮೇ ಸಮುಪಸ್ಥಿತ೦ ಯದಿ ಶಕ್ಯಮಶಕ್ಯ೦ ವಾ ತನ್ಮೇ ಭಗವತಿ ಶಮಯ ಸ್ವಾಹಾ|

ಬೆಂಗಳೂರಿನಲ್ಲಿ ಎರಡು ಸೈಟ್ ಖರೀದಿಸಿದ ಸೋನು ಶ್ರೀನಿವಾಸ್ ಗೌಡ; ಈ ವರ್ಷ ಮನೆ ಕಟ್ಟಿಸೋದು ಕನ್ಫರ್ಮ್‌ ಅಂತೆ

ಮ೦ತ್ರ ಪುರಶ್ಚರಣೆಯ ಪ್ರಯೋಜನಗಳು

1.ವನದುರ್ಗಾ ಮ೦ತ್ರ ಪಠಿಸುವವರಿಗೆ ಕೆಟ್ಟ ಶಕ್ತಿಗಳ ಬಾಧೆ ಇಲ್ಲ.
2.ಗ್ರಹಗಳ ಕ್ರೂರ ದೃಷ್ಟಿ(ಕೆಟ್ಟ ಸ್ಥಾನದಲ್ಲಿರುವಾಗ), ರೋಗ ಬಾಧೆ, ಶತ್ರು ಬಾಧೆ, ಮತ್ಸರ ದೃಷ್ಟಿ, ಇತ್ಯಾದಿ ನಿವಾರಣೆ.
3. ಜೀವನದಲ್ಲಿ ಸಮಸ್ಯೆಗಳು, ಅಡೆ ತಡೆಗಳು, ಅನಾವಶ್ಯಕ ಸ್ಪರ್ಧೆ, ಕೆಟ್ಟ ಮಾತುಗಳು, ಶಾಪಗಳ ನಿವಾರಣೆ.
4. ಮಾಟ, ಮ೦ತ್ರ, ಋಣ ಶಕ್ತಿಗಳ ಬಾಧೆ ಇತ್ಯಾದಿ ನಿವಾರಣೆ.
5. ಕೆಟ್ಟ ಕನಸುಗಳು, ಕೋರ್ಟು ವ್ಯಾಜ್ಯಗಳು, ಹಣ, ಆಸ್ತಿ ಸಮಸ್ಯೆಗಳ ನಿವಾರಣೆಗೆ.

ಹೆತ್ತವರ ಹೆಣಕ್ಕೆ ಬೆಂಕಿ ಇಡಲು ಗಂಡು ದಿಕ್ಕಿಲ್ಲದ ಮನೆ ಎಂದು ಅವಮಾನ ಮಾಡಿದ್ದಾರೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ

Latest Videos
Follow Us:
Download App:
  • android
  • ios