Asianet Suvarna News Asianet Suvarna News

'ಕಾಟೇರ' ನಿರ್ದೇಶಕನಿಗೆ ಕೂಡಿ ಬಂದ ಕಂಕಣ ಭಾಗ್ಯ..? ಬನಾರಸ್ ಬೆಡಗಿ ಜೊತೆ ತರುಣ್ ಸುಧೀರ್ ವಿವಾಹ..?

ನಟ, ನಿರ್ದೇಶಕ ತರುಣ್ ಸುಧೀರ್  ಕನ್ನಡದ ನಟಿಯೊಂದಿಗೆ ವಿವಾಹವಾಗುತ್ತಿದ್ದಾರಂತೆ. ಅದು ಬೆಳಕಿನ ಕವಿತೆ ಬನಾರಸ್ ಬೆಡಗಿ ಜೊತೆ ಅನ್ನೋದು ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ.

ಕನ್ನಡ ಖ್ಯಾತ ಖಳ ನಟ ಸುಧೀರ್ (Tharun Sudhir) ಅವರ ಕಿರಿಯ ಪುತ್ರ ತರುಣ್ ಸುಧೀರ್. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ನಿರ್ದೇಶಕ ತರುಣ್ ಸುಧೀರ್. 'ಚೌಕ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ (Tharun Sudhir marriage) ಮುಂದೆ ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಸದ್ಯ ಕಿರುತೆರೆಯ 'ಮಹಾನಟಿ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕೂಡ ಗುರ್ತಿಸಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಹುಟ್ಟಿ ಬೆಳೆದ ತರುಣ್ ಸುಧೀರ್ ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್ ಮಾಡಿ ಒಂದು ವರ್ಷ ಅಶೋಕ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಸಲಹೆಯಂತೆ ಚಿತ್ರರಂಗಕ್ಕೆ ಬಂದರು. 40ರ ಆಸುಪಾಸಿನಲ್ಲಿರೋ ತರುಣ್ ಸುಧೀರ್ ಈಗ ವಿವಾಹವಾಗುತ್ತಾರೆಂಬ ಸುದ್ದಿ ಓಡಾಡುತ್ತಿದೆ. ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೊ(Sonal Monteiro) ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಈಗ ಕೇಳಿಬರ್ತಿದೆ. ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ಸೋನಲ್ ಮಿಂಚಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು.

ಇದನ್ನೂ ವೀಕ್ಷಿಸಿ:  ದರ್ಶನ್‌ಗೆ ಮಾನಸಿಕ ಚಿಕಿತ್ಸೆ ಅಗತ್ಯವಿದ್ದು, ಅವರ ಕ್ರೂರ ಮನಸ್ಥಿತಿಗೆ ಕೌನ್ಸಿಲಿಂಗ್ ಅಗತ್ಯ- ಡಾ. ಚಂದ್ರಿಕಾ!