ಮತ್ತೆ ಕನ್ನಡಕ್ಕೆ ಬರುತ್ತಾರಾ ಟಾಲಿವುಡ್ ಮಿಲ್ಕಿ ಬ್ಯೂಟಿ: 'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ತಮನ್ನಾ ಭಾಟಿಯಾ ?

ಮತ್ತೆ ಕನ್ನಡಕ್ಕೆ ಬರ್ತಾರಾ ಟಾಲಿವುಡ್ ಬಳುಕೋ ಬಳ್ಳಿ.?
ನಾಗಶೇಖರ್ ನಿರ್ದೇಶನದಲ್ಲಿ 'ಸಂಜು ವೆಡ್ಸ್ ಗೀತಾ2'
ಸ್ಯಾಂಡಲ್ವುಡ್ನಲ್ಲಿದ್ದಾರೆ ತಮನ್ನಾ ಡಾನ್ಸ್ ಪ್ರೀಯರು.!

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಂಜು ವೆಡ್ಸ್ ಗೀತಾ-2 (Sanju Weds Geeta 2) ಸದ್ದು ಜೋರಾಗಿದೆ. ಪದ್ಮಾವತಿ ಕ್ವೀನ್ ರಮ್ಯಾ (Ramya) ಪ್ಲೇಸ್‌ಗೆ ರಚಿತಾ ರಾಮ್ ಎಂಟ್ರಿ ಆಗಿದೆ ಅನ್ನೋ ಸುದ್ದಿ ಎಲ್ಲೆಡೆ ಹಲ್‌ಚಲ್ ಎಬ್ಬಿಸಿದೆ. ಸಿನಿಮಾ ಪ್ರೇಮಿಗಳು ರಮ್ಯಾ ಮಾಡಿದ್ದ ಗೀತಾ ಪಾತ್ರವನ್ನ ರಚಿತಾ ರಾಮ್ (Rachita ram) ರೂಪದಲ್ಲಿ ಕಲ್ಪಿಸಿಕೊಳ್ತಿದ್ದಾರೆ. ಇವರ ಈ ಒಂದು ಕಲ್ಪನೆಗೆ ಡೈರೆಕ್ಟರ್ ನಾಗಶೇಖರ್ ಒಂದು ಅದ್ಭುತ ಪ್ಲಾನ್ ಮಾಡಿ ಪೆನ್ಸಿಲ್‌ನಿಂದಲೇ ರಚಿತಾ ರಾಮ್ ಪಾತ್ರವನ್ನ ಡಿಸೈನ್ ಮಾಡ್ಬಿಟ್ಟಿದ್ದಾರೆ. ಆದ್ರೆ ಈಗ ಮತ್ತೊಂದ ಎಕ್ಸೈಟಿಂಗ್ ಸುದ್ದಿ ಸಂಜು ವೆಡ್ಸ್ ಗೀತಾ ಬಳಗದಿಂದ ಹೊರ ಬಂದಿದೆ. ಡೈರೆಕ್ಟರ್ ನಾಗೇಶಖರ್ ಸಂಜು ವೆಡ್ಸ್ ಗೀತಾ 2 ಸಿನಿಮಾಕ್ಕಾಗಿ ದೊಡ್ಡ ಕನಸೇ ಕಂಡಿದ್ದಾರೆ. ಹಾಗೆ ಕಂಡ ಕನಸಿನಲ್ಲಿ ಈಗ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatia) ಕೂಡ ಇದ್ದಾರೆ. ಸಂಜು ವೆಡ್ಸ್ ಗೀತಾ2 ಸಿನಿಮಾಗಾಗಿ ತೆಲುಗಿನ ಹಾಟಿ ತಮನ್ನಾರನ್ನ ಕರೆಸೋ ಯೋಜನೆ ಹಾಕಿದ್ದು, ತಮನ್ನಾಗೆ ಈಗಾಗ್ಲೆ ಅಪ್ರೋಚ್ ಹೋಗಿದೆ. ಹಾಗಂತಾ ತಮನ್ನಾ ಕನ್ನಡಕ್ಕೇನು ಹೊರಬರೇನಲ್ಲ. ಕೆಜಿಎಫ್ ರಾಕಿ ಜೊತೆ ಜೋಕೆ ನಾನು ಬಳ್ಳಿಯ ಮಿಂಚು ಅಂತ ಮಿಂಚು ಹರಿಸಿದ್ರು. ಈಗ ಸಂಜು ವೆಡ್ಸ್ ಗೀತಾ೨ನಲ್ಲೂ ತಮನ್ನಾ ಹೆಸರು ಓಡುತ್ತಿದ್ದು, ಮಿಲ್ಕಿ ಬ್ಯೂಟಿ ಮತ್ತೆ ಕನ್ನಡದಲ್ಲಿ ಕಮಾಲ್ ಮಾಡ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. 

ಇದನ್ನೂ ವೀಕ್ಷಿಸಿ: ಅವನ ಸಾವಿಗೆ ಕಾರಣ, ಇನ್ನೊಬ್ಬನ ಲವ್ ಕಹಾನಿ: ಇದು ಟ್ರೈಯಾಂಗುಲರ್ ಲವ್ ಸ್ಟೋರಿ..!

Related Video