Asianet Suvarna News Asianet Suvarna News

ಅವನ ಸಾವಿಗೆ ಕಾರಣ, ಇನ್ನೊಬ್ಬನ ಲವ್ ಕಹಾನಿ: ಇದು ಟ್ರೈಯಾಂಗುಲರ್ ಲವ್ ಸ್ಟೋರಿ..!

ಇನ್ನೊಬ್ಬನ ಲವ್ವರ್‌ಗೆ ಲವ್ ಯು ಅಂದಿದ್ದ..!
ಕಾಲೇಜಿಗೆ ಬಂದವರಿಗೆ ಸಿಕ್ಕಿದ್ದು ಅವನ ಗೆಳೆಯ..!
ಪೈಪ್‌ನಲ್ಲಿ ಹೊಡೆದು ಅವನ ಕಥೆ ಮುಗಿಸಿದ್ರು..!
 

ಅವನು ಫಸ್ಟ್ ಇಯರ್ ಡಿಗ್ರಿ ಓದುತ್ತಿದ್ದ ಯುವಕ. ತನ್ನ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನ ಕಂಡಿದ್ದ. ಹೆತ್ತವರು ಕೂಡ ಆತನನ್ನ ಕಷ್ಟಪಟ್ಟು ಕಾಲೇಜಿಗೆ ಸೇರಿಸಿದ್ರು. ಆತ ಕೂಡ ಚೆನ್ನಾಗಿ ಓದುತ್ತಿದ್ದ. ಆದ್ರೆ ಆವತ್ತೊಂದು ದಿನ ಕಾಲೇಜಿಗೆ ಅಂತ ಹೋದವನು ವಾಪಸ್ ಬರಲೇ ಇಲ್ಲ. ಮಧ್ಯಾಹ್ನ ಫ್ರೆಂಡ್ಸ್ ಜೊತೆ ಇದ್ದೀನಿ ಅಂತ ತಾಯಿಗೆ ಫೋನ್ನಲ್ಲಿ ಹೇಳಿದ್ದೇ ಕೊನೆ ನಂತರ ಆತ ಎಲ್ಲಿಗೆ ಹೋದ ಏನಾದ ಅಂತ ಗೊತ್ತೇ ಆಗಲಿಲ್ಲ. ಹುಡುಕಬಾರದ ಜಾಗದಲ್ಲೆಲ್ಲಾ ಆತನನ್ನ ಹುಡುಕಾಡಿದ್ರು. ಆದ್ರೆ ರಾತ್ರಿ ಹೊತ್ತಿಗೆ ಆತನ ಸುದ್ದಿ ಹೆತ್ತವರಿಗೆ ಸಿಕ್ಕಿತ್ತು. ಆದ್ರೆ ಆ ಸುದ್ದಿ ಅವನ ಸಾವಿನದ್ದಾಗಿತ್ತು. ಮೆರ್ವೇಶ್ ಕೊಲೆಯಾದ(Murder) ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮೆರ್ವೇಶ್ ಹೆತ್ತವರೇ ಒಂದು ಸುಳಿವು ಕೊಟ್ಟಿದ್ರು. ಮೆರ್ವೇಶ್ ಕಾಣೆಯಾದಗ ಇನ್ನಿಲ್ಲದಂತೆ ಹುಡುಕುತ್ತಿದ್ದ ಅವನ ಕುಟುಂಬವನ್ನ ಅವತ್ತು ಸಂಜೆ ಒಬ್ಬ ಬಂದು ಭೇಟಿ ಮಾಡಿದ್ದ. ಮೆರ್ವೇಶ್ ಇನ್ನೂ ಬಂದಿಲ್ವಾ ಅಂತ ಕೇಳಿದ್ದ. ಅವನ ಮೇಲೆಯೇ ಹೆತ್ತವರಿಗೆ ಡೌಟ್ ಬಂದಿತ್ತು. ಪೊಲೀಸರೂ(police) ತಡ ಮಾಡದೇ ಅವನ ಹಿಂದೆ ಬಿದ್ರು. ಅದೊಂದು ಟ್ರೈಯಾಂಗುಲರ್ ಲವ್ ಸ್ಟೋರಿ(love). ಇಬ್ಬರು ಲವ್ವರ್ಗಳ ಮಧ್ಯೆ ಒಬ್ಬ ಎಂಟ್ರಿಯಾಗಿದ್ದ. ಅವನೇ ಮೆರ್ವೇಶ್ ಸ್ನೇಹಿತ. ಬೇರೊಬ್ಬ ಪ್ರೀತಿಸುತ್ತಿದ್ದ ಹುಡುಗಿಗೆ ಮೆರ್ವೇಶ್ ಸ್ನೇಹಿತ ಲೋಹಿತ್ ಮೆಸೇಜ್ ಮಾಡ್ತಿದ್ದ. ಆಕೆಗೆ ಲವ್ ಮಾಡು ಅಂತ ಪ್ರಾಣ ಹಿಂಡುತ್ತಿದ್ದ. ಇದು ಅತಿ ಅನಿಸಿದಾಗ ಆ ಹುಡುಗಿ ತನ್ನ ಬಾಯ್ಫ್ರೆಂಡ್ಗೆ ಹೇಳಿದ್ಲು. ಯಾವಾಗ ಬಾಯ್ಫ್ರೆಂಡ್ಗೆ ಲೋಹಿತ್ ವಿಷ್ಯ ಗೊತ್ತಾಯ್ತೋ ಆತನಿಗೆ ಬುದ್ಧಿ ಕಲಿಸಲು ಮುಂದಾದ ಇದಕ್ಕೆ ಆತ ರೌಡಿ ಶೀಟರ್ ಸ್ನೇಹಿತರನ್ನ ಬಳಸಿಕೊಂಡಿದ್ದ. ಆದ್ರೆ ಲೋಹಿತ್ ನಸೀಬು ಆವತ್ತು ಚೆನ್ನಾಗಿತ್ತು. ಆತ ರೌಡಿಗಳಿಗೆ ಸಿಕ್ಕಲಿಲ್ಲ ಅವನ ಬದಲಿಗೆ ಸಿಕ್ಕಿದ್ದು ಅವನ ಸ್ನೇಹಿತ ಮೆರ್ವೇಶ್. ಮೆರ್ವೇಶ್‌ನನ್ನ ಎತ್ತಾಕೊಂಡು ಹೋದ ಅವರು ಅವನ ಕಥೆಯನ್ನೇ ಮುಗಿಸಿಬಿಟ್ಟಿದ್ರು. 

ಇದನ್ನೂ ವೀಕ್ಷಿಸಿ:  ಒಕ್ಕಲಿಗ Vs ಒಕ್ಕಲಿಗ..ರೆಡಿನಾ ಕೇಸರಿ “ಸಮರ”ವ್ಯೂಹ..?: ಬಿಜೆಪಿಗೂ ಸಿಗುತ್ತಾ "ಒಕ್ಕಲಿಗ" ಸಾರಥ್ಯ..?

Video Top Stories