Asianet Suvarna News Asianet Suvarna News

ಯಶ್ -ಅಲ್ಲು ಅರ್ಜುನ್ ಮಧ್ಯೆ ಆ ವಿಷಯದಲ್ಲಿ ಫೈಟ್: ಇಬ್ಬರಿಗೂ ಬಂಡವಾಳ ಹೂಡಲು ರೆಡಿ ಸನ್ ಪಿಕ್ಚರ್ಸ್ !

ಸನ್ ಪಿಕ್ಚರ್ಸ್ ತಮಿಳು ಸಿನಿಮಾ ನಿರ್ಮಾಣ ಮಾಡೋ ದೊಡ್ಡ ಪ್ರೊಡಕ್ಷನ್ ಕಂಪೆನಿ. ಈ ಕಂಪನಿ ಯಶ್  ಮತ್ತು ಅಲ್ಲು ಅರ್ಜುನ್  ಸಿನಿಮಾಗೆ ಬಂಡವಾಳ ಹೂಡಲು ಮುಂದೆ ಬಂದಿದೆ.

ರಾಕಿಂಗ್ ಸ್ಟಾರ್ ಯಶ್, ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿನಿಮಾ ರಂಗದಲ್ಲಿ ಒಂದೇ ಟ್ರ್ಯಾಕ್‌ನಲ್ಲಿರೋ ಹೀರೋಗಳು. ಯಾಕಂದ್ರೆ ಯಶ್ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಹಾಗೂ ಕೆಜಿಎಫ್2 ಮಾಡಿ ಗೆದ್ರು. ಈ ಸಿನಿಮಾಗಳ ಇನ್ಸ್ಪರೇಷನ್‌ನಿಂದ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮಾಡಿ ಸಕ್ಸಸ್ ಆದ್ರು. ಇನ್ನೇನು ಕೆಲವೇ ದಿನಗಳಲ್ಲಿ ಪುಷ್ಪ ಚಾಪ್ಟರ್2 ಕೂಡ ತೆರೆ ಮೇಲೆ ಬರಲಿದೆ. ಈ ಮಧ್ಯೆ ಯಶ್ ಹಾಗೂ ಅಲ್ಲು ಅರ್ಜುನ್ ಮಧ್ಯೆ ಆ ವಿಷಯದಲ್ಲಿ ಟಫ್ ಪೈಪೋಟಿ ಎದುರಾಗಿದೆ. ಸನ್ ಪಿಕ್ಚರ್ಸ್ ತಮಿಳು ಸಿನಿಮಾ ನಿರ್ಮಾಣ ಮಾಡೋ ದೊಡ್ಡ ಪ್ರೊಡಕ್ಷನ್ ಕಂಪೆನಿ. ಈ ನಿರ್ಮಾಣ ಸಂಸ್ಥೆ ರಾಜಾ ರಾಣಿ ಸಿನಿಮಾ ಖ್ಯಾತಿಯ ಅಟ್ಲಿ ಅವರ ಡೈರೆಕ್ಷನ್‌ನಲ್ಲಿ ಹೊಸ ಸಿನಿಮಾ ಮಾಡೋಕೆ ಹೊರಟಿದೆ. ಆ ಸಿನಿಮಾಗೆ ನಮ್ಮ ಯಶ್ ಮತ್ತು ತೆಲುಗಿನ ಅಲ್ಲು ಅರ್ಜುನ್ರನ್ನ ಆಯ್ಕೆ ಮಾಡಿಕೊಳ್ಳೋಕೆ ಪ್ಲಾನ್ ಮಾಡಿದೆ. 

ಇದನ್ನೂ ವೀಕ್ಷಿಸಿ: ಮಂಡ್ಯದ ಗಂಡು ಅಂಬಿಗೆ 71ನೇ ಜನ್ಮದಿನ: ಅಪ್ಪನ ಹುಟ್ಟುಹಬ್ಬಕ್ಕೆ ಅಭಿಷೇಕ್ ರೆಬೆಲ್ ಟ್ರೀಟ್.!

Video Top Stories