Asianet Suvarna News Asianet Suvarna News

Max Movie: ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಹೊತ್ತಲ್ಲಿ ಕ್ಲೈಮ್ಯಾಕ್ಸ್ ಸೀನ್ ಲೀಕ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕ್ಕಿದೆ. ಇತ್ತೀಚೆಗಷ್ಟೆ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಮ್ಯಾಕ್ಸ್ ವಿಶ್ಯುವಲ್ ಈಗ ಎಡಿಟಿಂಗ್ ಟೇಬಲ್ ಮೇಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಆಗುತ್ತಿದೆ. 
 

ಬಾದ್ ಷಾ ಕಿಚ್ಚ ಸುದೀಪ್ ಮ್ಯಾಕ್ಸ್ ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲ. ಸುದೀಪ್(Sudeep) ಸಿನಿಮಾ ಬಂದು ಎರಡು ವರ್ಷ ಆಗ್ತಾ ಬಂತು. ಮ್ಯಾಕ್ಸ್ ಶೂಟಿಂಗ್ ಅಂತು ಮುಗಿದಿದೆ. ಇನ್ನೇನು ಸಿನಿಮಾ ಅಪ್ಡೇಟ್ ಬರುತ್ತೆ ಅಂತ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಈಗ ಮ್ಯಾಕ್ಸ್ ಕ್ಲೈಮ್ಯಾಕ್ಸ್ ಸೀನ್ಅನ್ನೇ(Climax scene) ನೋಡೋ ಚಾನ್ಸ್ ಸಿಗ್ತಿದೆ. ಮ್ಯಾಕ್ಸ್ ಸಿನಿಮಾದ(Max Movie) ಕ್ಲೈಮ್ಯಾಕ್ಸ್ ದೃಶ್ಯದ ಫೋಟೋಗಳು ಲೀಕ್ ಆಗಿವೆ. ಆಕ್ಷನ್ ಸೀನ್ ಗ್ಲಿಂಪ್ಸ್. ಇದಾಗಿದ್ದು, ಜಾತ್ರೆಯ ಸೆಟಪ್, ದೊಡ್ಡ ಕಾಳೀಮಾತೆಯ ವಿಗ್ರಹದ ಮುಂದೆ ಸುದೀಪ್ ನಡೆದುಕೊಂಡು ಬರೋ ರೀತಿ ಈ ಫೋಟೋ ಇದೆ. ಪಕ್ಕಾ ಲೋಕಲ್ ಮಾಸ್ ಅವತಾರದಲ್ಲಿ ಕಿಚ್ಚನನ್ನು ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಮಹಾಬಲಿಪುರಂನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೆಗ್ಡೆ, ಸುಕೃತಾ ವಾಗ್ಲೆ, ಉಗ್ರಂ ಮಂಜು, ಸುನಿಲ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ:  ಕನ್ನಡ ಸಿನಿ ರಂಗದಲ್ಲೇ ದಾಖಲೆ ಬೆಲೆಗೆ 'ಕೆಡಿ' ಆಡಿಯೋ ಮಾರಾಟ..! ಎಷ್ಟು ಕೋಟಿ ಗೊತ್ತಾ?

Video Top Stories