ಕನ್ನಡ ಸಿನಿ ರಂಗದಲ್ಲೇ ದಾಖಲೆ ಬೆಲೆಗೆ 'ಕೆಡಿ' ಆಡಿಯೋ ಮಾರಾಟ..! ಎಷ್ಟು ಕೋಟಿ ಗೊತ್ತಾ?

ಕನ್ನಡದಲ್ಲಿ ಸ್ಟಾರ್ ಗಳ ಸಿನಿಮಾನೇ ಬರುತ್ತಿಲ್ಲ ಚಿತ್ರರಂಗ ಮುಳುಗ್ತಾ ಇದೆ ಅನ್ನೋ ಮಾತನ್ನ ಕೇಳಿ ಬೇಸರ ಆಗಿತ್ತು. ಆದ್ರೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಹಬ್ಬ ಶುರುವಾಗಿದೆ. ಇನ್ನಾರು ತಿಂಗಳು ಕನ್ನಡಿಗರದ್ದೇ ಹವಾ ಇರುತ್ತೆ. ಅದು ಕರ್ನಾಟಕದಲ್ಲಿ ಮಾತ್ರ ಅಲ್ಲ ಪ್ಯಾನ್ ಇಂಡಿಯಾದ ತುಂಬೆಲ್ಲಾ.
 

Share this Video
  • FB
  • Linkdin
  • Whatsapp

ನಮ್ಮ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾರದ್ದು. ಅದು ಬಿಡಿ ನಿಮಗೊಂದು ಮೂಖ್ಯವಾದ ವಿಷಯ ಹೇಳೋದಿದೆ ಅದು ಕೆಡಿ ಸಿನಿಮಾದ್ದು(KD Movie). ಹೌದು ಕೆಡಿ ಸಿನಿಮಾ ತನ್ನ ಸಂಗೀತದ(Audio Rights)ವಿಚಾರದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಕೆಡಿ ಇದು ಕನ್ನಡ ಸಿನಿಮಾ. ಆದ್ರೆ ಇಡೀ ಭಾರತಿಯ ಚಿತ್ರರಂಗ ಕಾಯ್ತಾ ಇದೆ. ಅದು ಟೀಸರ್ ಮಾಡಿದ ಮೋಡಿ ಇದೆಯಲ್ಲ ಅಬ್ಬಬ್ಬ ಏನ್ ಗುರು ಇದು ದೃಶ್ಯಗಳು ಅಂತ ಮಾತಾಡೋ ಹಾಗಾಯ್ತು. ಅದರಲ್ಲೂ ಲಾಂಗ್ ಹಿಡಿದು ಆ್ಯಕ್ಷನ್ ಪ್ರಿನ್ಸ್(Druva sarja) ಎಂಟ್ರಿ ಕೊಟ್ಟಿದ್ದೆ ತಡ ಸೌತ್ ನಾರ್ತ್ ಮಂದಿ ಯಾರ್ ಗುರು ಈ ಕಟೌಟ್ ಅಂತ ಆಶ್ಚರ್ಯ ಪಟ್ಟಿದ್ರು. ಅದಕ್ಕೆ ತಕ್ಕಂತೆ ಕನ್ನಡದ ಸೆನ್ಸಿಬಲ್ ಡೈರೆಕ್ಟರ್ ಪ್ರೇಮ್(Director Prem) ಕಟ್ಟಿದ್ದ ಆ ಕಲಾವಿಧರ ತಂಡ ಇದೆಯಲ್ಲಾ ಅದು ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸ್ತು. ಕಥೆ ಕೇಳಿದ ಕೆಜಿಎಫ್‌ನ ಅಧಿರ ಸಂಜುಬಾಬ ಮತ್ತೆ ಸ್ಯಾಂಡಲ್‌ವುಡ್‌ ಬೆಸ್ಟ್ ಅಂದ್ರು. ಹತ್ತಾರು ವರ್ಷಗಳಾದ್ರು ಕನ್ನಡದತ್ತ ಮುಖ ಹಾಕದ ಕರವಳಿ ಬ್ಯೂಟಿ ಶಿಲ್ಪಾ ಶೆಟ್ಟಿ ಏಕ್ ದಮ್ ಹೇಳದೇ ಕೇಳದೆ ಕೆಡಿ ಜೊತೆ ಕೈ ಜೋಡಿಸಿದ್ರು. ಕ್ರೆಜಿ ಸ್ಟಾರ್ ರವಿಚಂದ್ರನ್ ಹೀಗೂ ಕಾಣಿಸಬಹುದು ಅನ್ನೋ ಕುತೂಹಲ ಇರುವಾಗ್ಲೆ ರಮೇಶ್ ಅರವಿಂದ್ ನಾನೇನು ತ್ಯಾಗರಾಜ್ ಮಾತ್ರ ಅಲ್ಲ ಅಂತ ಖದರ್ ಆಗಿ ಕೆಡಿ ಜೊತೆ ಬಂದ್ರು.

ಇದನ್ನೂ ವೀಕ್ಷಿಸಿ: ಅಬ್ಕಿ ಬಾರ್ 400 ಪಾರ್ ಬಗ್ಗೆ ಸಟ್ಟಾ ಭವಿಷ್ಯವೇನು..? ಮೋದಿ & ರಾಹುಲ್‌ಗೆ ಎಲ್ಲಿ ಏಳು..ಬೀಳು..?

Related Video