ಕಿಚ್ಚ 46 ಸಿನಿಮಾ ಚಿತ್ರೀಕರಣ ಆರಂಭ: ಜನ್ಮದಿನದಂದು ಫ್ಯಾನ್ಸ್‌ ಭೇಟಿ ಆಗ್ತಾರಂತೆ ಸುದೀಪ್‌ !

ಸುದೀಪ್ ಅಭಿಮಾನಿಗಳ ಭೇಟಿ ಯಾವಾಗ ?
ಫ್ಯಾನ್ಸ್ ಜೊತೆ ಬರ್ತ್ಡೇ ಮಾಡುತ್ತಾರಾ ಕಿಚ್ಚ?
ಸೆಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್‌ಗೆ ಜನ್ಮದಿನ.!

Share this Video
  • FB
  • Linkdin
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಇನ್ಮುಂದೆ ನಿಮ್ ಕೈಗೆ ಸಿಗೋದಕ್ಕೆ ಚಾನ್ಸೆ ಇಲ್ಲ. ಯಾಕಂದ್ರೆ ಕಿಚ್ಚ ಬೆಂಗಳೂರು(Bengaluru) ಬಿಟ್ಟು ಚೆನ್ನೈ ಸೇರಿಕೊಂಡಿದ್ದಾರೆ. ಅರೆ ಸುದೀಪ್‌ಗೆ ಹೈದರಾಬಾದ್‌ನಲ್ಲಿ ಮನೆ ಇರೋದು, ಅದನ್ನ ಬಿಟ್ಟು ಚೆನ್ನೈಗೆ ಯಾಕ್ ಸೇರಿಕೊಂಡ್ರು ಅಂತೀರಾ. ಅದಕ್ಕೆ ಉತ್ತರ ಕಿಚ್ಚ 46(Kichha 46) ಸಿನಿಮಾ. ಹೌದು, ಸುದೀಪ್ರ 46 ಸಿನಿಮಾದ ಸಿನಿಮಾದ ಶೂಟಿಂಗ್ ಶುರುವಾಗಿದೆ. ಈ ಚಿತ್ರೀಕರಣ 65 ದಿನ ನಾನ್ಸ್ಟಾಪ್ ನಡೆಯುತ್ತಂತೆ. ಕಿಚ್ಚ 46 ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ತಮಿಳು ನಿರ್ಮಾಪಕ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಹೊಸ ಪ್ರತಿಭೆ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿದ್ದು, 65 ದಿನಗಳ ಕಾಲ ನಿರಂತರ ಚಿತ್ರೀಕರಣಕ್ಕೆ ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಐದು ಭಾಷೆಯಲ್ಲಿ ಸಿದ್ಧವಾಗೋ ಈ ಸಿನಿಮಾದ ಆಕ್ಷನ್ ಸೀಕ್ವೆನ್ಸ್, ಟಾಕಿ ಪೋಷನ್ ಚಿತ್ರೀಕರಣ ಚೆನ್ನೈ ಸುತ್ತಮುತ್ತ ನಡೆಯಲಿದ್ದು ತಮಿಳುನಾಡಿನ(Tamilnaadu) ಮಹಾಬಲಿಪುರಂನಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಆಗುತ್ತಂತೆ. ಹಾಗಾದ್ರೆ ಸುದೀಪ್ ತವರಿಗೆ ಬರೋದು ಯಾವಾಗ ? ಫ್ಯಾನ್ಸ್ ಭೇಟಿ ಆಗ್ತಾರೋ ಇಲ್ವೋ ಅಂತ ಕೇಳಿದ್ರೆ ಅದಕ್ಕೆ ಉತ್ತರ ಸೆಪ್ಟೆಂಬರ್ 2.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Panchanga: ಧನಸ್ಸು ರಾಶಿಯವರ ತಂದೆ ಆರೋಗ್ಯದಲ್ಲಿ ಏರುಪೇರು..ಪರಿಹಾರಕ್ಕೆ ಹೀಗೆ ಮಾಡಿ

Related Video