ಬೆಳ್ಳಿ ತೆರೆಗೆ ಬರ್ತಾರಂತೆ ಶ್ರುತಿ ಪುತ್ರಿ ಗೌರಿ: ಉಪ್ಪಿ ಮಗಳ ಗ್ರ್ಯಾಂಡ್ ಎಂಟ್ರಿ ಯಾವಾಗ..?
ಐಶ್ವರ್ಯ ಉಪೇಂದ್ರಗೆ ಆಫರ್‌ಗಳ ಹಾವಳಿ!
ಗಣೇಶ್ ಪುತ್ರಿಗೂ ಇದೆ ನಟಿಯಾಗೋ ಚಾನ್ಸ್!
ಹೈಸ್ಕೂಲ್ ಓದುತ್ತಿದ್ದಾಳೆ ಚಾರಿತ್ರ್ಯಾ ಗಣೇಶ್!
ಸ್ಯಾಂಡಲ್‌ವುಡ್‌ನ ಅಳುಮುಂಜಿ ಶ್ರುತಿ(Shruti) ಕೃಷ್ಣ ಮುದ್ದಿನ ಪುತ್ರಿ ಗೌರಿ(Gauri) ಚಿತ್ರರಂಗ ಪ್ರವೇಶಕ್ಕೆ ಕಾಯುತ್ತಿದ್ದಾರೆ. ಗೌರಿಗೆ ನಟನೆ ರಕ್ತಗತವಾಗೆ ಬಂದಿದೆ. ಅಮ್ಮನ ಆಸೆಯಂತೆ ಬಿಗ್ ಬ್ಯಾನರ್ನಲ್ಲಿ ಲಾಂಚ್ ಆಗೋಕೆ ಎಲ್ಲಾ ತಯಾರಿ ಮಾಡುತ್ತಿದ್ದಾರೆ ಗೌರಿ. ವಿದ್ಯಾಭ್ಯಾಸ ಮುಗಿಸಿರೋ ಗೌರಿ ಅದ್ಭಿತ ಸಿಂಗರ್ ಕೂಡ ಹೌದು.ರಿಯಲ್ ಸ್ಟಾರ್ ಉಪೇಂದ್ರ(Upendra) ಪ್ರಿಯಾಂಕರ ಬ್ಯುಟಿಫುಲ್ ಡಾಟರ್ ಐಶ್ವರ್ಯ(Aishwarya). ಅಮ್ಮ ಪ್ರಿಯಾಂಕ ಉಪೇಂದ್ರ ಜತೆ ಮಮ್ಮಿ, ದೇವಕಿ ಸಿನಿಮಾದಲ್ಲಿ ಬಾಲನಟಿ ಅಭಿನಯಿಸಿರೋ ಐಶ್ವರ್ಯಗೆ ಈಗ 15 ವರ್ಷ ವಯಸ್ಸು. ಹೀರೋಯಿನ್ ಆಗೋ ಎಲ್ಲಾ ಕಲೆ ಐಶ್ವರ್ಯಗಿದ್ದು ಸಧ್ಯದಲ್ಲೇ ಸಿನಿಮಾ ಅನೌನ್ಸ್ ಆದ್ರು ಆಶ್ಚರ್ಯ ಇಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಮುದ್ದಿನ ಮಗಳು ಚಾರಿತ್ರ್ಯ(Charitrya) ಕೂಡ ಬಣ್ಣದ ಜಗತ್ತಿಗೆ ಬರೋ ತಯಾರಿ ಆಗ್ತಿದೆ. ಅಪ್ಪ ಗೋಲ್ಡನ್ ಸ್ಟಾರ್ ಆದ್ರೆ ಮಗಳು ಗೋಲ್ಡನ್ ಕ್ವೀನ್ ಆಗೋ ಕನಸು ಕಂಡಿದ್ದಾರೆ ಗಣೇಶ್. ಸದ್ಯ ಹೈಸ್ಕೂಲ್ ಓದುತ್ತಿರೋ ಚಾರಿತ್ರ್ಯ ಸಿನಿಮಾ ಎಂಟ್ರಿಗೆ ಇನ್ನು ಟೈಂ ಇದೆ. ಆದ್ರೆ ತಯಾರಿ ಬೇಕಲ್ವಾ. ಹೀಗಾಗಿ ಮಗಳಿಗೆ ಡಾನ್ಸ್, ನಟನಾ ತರಬೇತಿ ಕಲಿಸುತ್ತಿದ್ದಾರೆ ಗಣೇಶ್.
ಇದನ್ನೂ ವೀಕ್ಷಿಸಿ: ಕನಸಲ್ಲೂ ಕಾಡೋ ಅಂದ..ಮನಸ್ಸಲ್ಲಿ ಉಳಿಯೋ ಚೆಂದ: ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ಆರಾಧನಾ..!