ಅಭಿಷೇಕ್ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯ ಇಲ್ಲಿದೆ: ಜ್ಯೂ.ರೆಬೆಲ್ ಸ್ಟಾರ್ ರಿಯಲ್ ನೇಮ್ ಏನು ಗೊತ್ತಾ..?

ಕನ್ನಡ ಚಿತ್ರರಂಗದ ಒಂಟಿ ಸಲಗ, ನೇರ ದಿಟ್ಟ ಡೋಂಟ್ ಕೇರ್ ವ್ಯಕ್ತಿತ್ವ ಅಂದ್ರೆ ಅಂಬರೀಶ್. ಸ್ಯಾಂಡಲ್‌ವುಡ್‌ನ ಕರ್ಣ ಅಂದ್ರೆ ನಮ್ಮ ಕಣ್ ಮುಂದೆ ಬರೋದೇ ಅಂಬಿ. ಅಭಿಮಾನಿಗಳ ಪ್ರೀತಿಯ ರೆಬೆಲ್ ಸ್ಟಾರ್ ಇವತ್ತು ನಮ್ಮೊಂದಿಗಿಲ್ಲ. ಆದ್ರೆ ಅವರ ಅದುಕಿನ ಚಿಲುಮೆ ನಮ್ಮ ಮುಂದಿದೆ. ಯೆಸ್, ಅವ್ರೆ ಅಂಬಿಷೇಕ್ ಅಂಬರೀಶ್. ಅಂದಹಾಗೆ ರೆಬೆಲ್ ಸ್ಟಾರ್ ಪುತ್ರನಿಗೆ ಇಂದು ಹುಟ್ಟುಹಬ್ಬ.
 

Share this Video
  • FB
  • Linkdin
  • Whatsapp

ಅಭಿಷೇಕ್ ಅಂಬರೀಶ್ ಇಂದು ಸ್ಯಾಂಡಲ್ವುಡ್ ಸ್ಟಾರ್. ಅಭಿಗೆ ಸ್ಟಾರ್ ಗಿರಿ ಹುಟ್ಟುತ್ತಲೇ ಬಂದಿದೆ. ಯಾಕಂದ್ರೆ ಅಭಿ ಸೆಲೆಬ್ರಿಟಿ ಕುಡಿ. ಅಪ್ಪ ಅಮ್ಮ ಇಬ್ಬರೂ ದೊಡ್ಡ ಕಲಾವಿಧರು. ಸೆಲೆಬ್ರಿಟಿ ಕುಟುಂಬದಲ್ಲಿ ಹುಟ್ಟಿದ ಅಭಿಗೆ ಅಪ್ಪ ಅಂಬರೀಶ್(Ambareesh) ಏನಂತ ಹೆಸ್ರಿಟ್ಟಿದ್ರು ಗೊತ್ತಾ.? ಅಭಿಷೇಕ್ ಹುಟ್ಟು ಹೆಸ್ರು ಮಂಚೇಗೌಡ ಅಂತ. ಅಭಿಗೆ ಮಂಚೇಗೌಡ ಅಂತ ಹೆಸ್ರಿಟ್ಟಿದ್ದಕ್ಕೆ ಅಂಬಿ ಪತ್ನಿ ಸುಮಲತಾ(Sumalatha) ಗಂಡ ಅಂಬರೀಶ್ ಜತೆ ಜಗಳವಾಡಿದ್ದು ಇದೆ. ಕೊನೆಗೆ ಅಂಬರೀಶ್ ಹೆಸರು ಅ ಅಕ್ಷರದಿಂದ ಶುರುವಾಗಿದ್ದಕ್ಕೆ ಮಗನಿಗೂ ಅ ಅಕ್ಷರದಿಂದಲೇ ಹೆಸ್ರು ಆರಂಭವಾಗ್ಲಿ ಅಂತ ಅಭಿಷೇಕ್ ಎಂದು ನಾಮಕರಣ ಮಾಡಿದ್ರಂತೆ. ಅಭಿಷೇಕ್ ಅಂಬರೀಸ್(Abishek Ambareesh) ಅಮ್ಮನ ಮಗ. ಅಭಿಗೆ ಅಪ್ಪ ಅಂದ್ರೆ ಸಿಕ್ಕಾಪಟ್ಟೆ ಭಯ. ಓದಿನಲ್ಲಿ ಯಾವಾಗ್ಲು ಹಿಂದೆ ಬೀಳುತ್ತಿದ್ದ ಅಭಿಷೇಕ್ಗೆ ಅಮ್ಮ ಸುಮಲತಾನೇ ಟೀಚರ್. ಹೈಸ್ಕೂಲು ಕಾಲೇಜು ದಿನಗಳನ್ನ ಬೆಂಗಳೂರಿನಲ್ಲೇ ಕಳೆದ ಅಭಿ, ಹೈಯರ್ ಎಜ್ಯೂಕೇಷನ್ಗಾಗಿ ಯುಎಸ್ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ರು. ಐದು ವರ್ಷ ಫಾರಿನ್ನಲ್ಲಿ ಓದಿದ್ದ ಅಭಿ International Relations and Democratic Politics ನಲ್ಲಿ ಪಧವಿ ಪಡೆದಿದ್ದಾರೆ. ಅಭಿಷೇಕ್‌ಗೆ ಸಿನಿಮಾ ಸ್ಟಾರ್ ಆಗೋ ಯಾವ್ ಆಸೆಯೂ ಇರಲಿಲ್ಲ. ಆದ್ರೆ ಅಂಬಿಗೆ ತನ್ನ ಮಗನನ್ನ ಕಲಾ ಸೇವೆಗೆ ನೇಮಿಸಬೇಕು ಅನ್ನೋ ಕನಸಿತ್ತು. ತಾನು ಸಾಯೋ ಮೊದಲೇ ಮಗನನ್ನ ಬಿಗ್ಸ್ಕ್ರೀನ್ನಲ್ಲಿ ನೋಡಬೇಕು ಅನ್ನೋ ದೊಡ್ಡ ಆಸೆ ಇತ್ತು.. ಅನಾರೋಗ್ಯಕ್ಕೆ ತುತ್ತಾಗಿದ್ದ ಅಪ್ಪನ ಆಸೆ ಈಡೇರಿಸಬೇಕು ಅಂತ ಅಭಿಷೇಕ್ ಹೀರೋನೂ ಆಗ್ತಾರೆ. ಈ ಸಿನಿಮಾಗೆ ಕತೆ ಆಯ್ಕೆ ಮಾಡಿದ್ದು, ಡೈರೆಕ್ಟರ್ನ ಸೆಲೆಕ್ಟ್ ಮಾಡಿದ್ದು, ಅಮರ್ ಅಂತ ಟೈಟಲ್ ಇಟ್ಟಿದ್ದು ಎಲ್ಲವೂ ಅಂಬರೀಶ್ ಅವರೇ. ಆದ್ರೆ ದುರಾದೃಷ್ಟ ಈ ಸಿನಿಮಾ ರಿಲೀಸ್ ಆಗೋ ಮೊದಲೇ ಅಂಬರೀಶ್ ನಿಧನ ಆದ್ರು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ? ಇಂದು ಯಾರಿಗೆ ಶುಭ-ಅಶುಭ ?

Related Video