
ಬೆಂಗಳೂರಿಗೆ ಇಂದು ರಾತ್ರಿ ಸ್ಪಂದನಾ ಮೃತದೇಹ: ನಾಳೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಾರದ ಲೋಕಕ್ಕೆ ತೆರಳಿದ್ದು, ಅವರ ಅಂತ್ಯಕ್ರಿಯೆ ನಾಳೆ ನಡೆಯುವ ಸಾಧ್ಯತೆ ಇದೆ.
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ(Spandana) ಸೋಮವಾರ ಬ್ಯಾಂಕ್‌ಕ್‌ನಲ್ಲಿ ಹೃದಯಾಘಾತದಿಂದ(heart attack) ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ಅವರು ಬ್ಯಾಂಕಾಕ್‌ಗೆ (Bangkok) ತೆರಳಿದ್ದರು. ಸೋಮವಾರ ಬೆಳಗ್ಗೆ ಮಲಗಿದ್ದಾಗಲೇ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 39ನೇ ವಯಸ್ಸಿಗೆ ಸ್ಪಂದನಾ ಬಾರದ ಲೋಕಕ್ಕೆ ತೆರಳಿದ್ದಾರೆ. ಸದ್ಯ ದುಃಖದ ಮಡುವಿನಲ್ಲಿ ಸ್ಪಂದನಾ, ವಿಜಯ್ ಕುಟುಂಬ ಇದೆ.ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ(Vijay Raghavendra) ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ಸ್ಪಂದನಾ ವಿಧಿವಶರಾಗಿದ್ದು, ಇಂದು ಭಾರತಕ್ಕೆ ಅವರ ಮೃತದೇಹ ತರುವ ಪ್ರಯತ್ನ ನಡೆಯುತ್ತಿದೆ. ಇಂದು ರಾತ್ರಿ 12 ಗಂಟೆಗೆ ಮೃತದೇಹ ಬರುವ ಸಾಧ್ಯತೆಯಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಮುದ್ದಿನ ಮಡದಿಗೆ ಕಳೆದ ಬಾರಿ ಬೆಳದಿಂಗಳಾಗಿ ಬಾ ಹಾಡು ಹಾಡಿದ್ದ ವಿಜಯ್ ರಾಘವೇಂದ್ರ !