ಮುದ್ದಿನ ಮಡದಿಗೆ ಕಳೆದ ಬಾರಿ ಬೆಳದಿಂಗಳಾಗಿ ಬಾ ಹಾಡು ಹಾಡಿದ್ದ ವಿಜಯ್‌ ರಾಘವೇಂದ್ರ !

ನಟ ವಿಜಯ್‌ ರಾಘವೇಂದ್ರ ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಪತ್ನಿಗಾಗಿ ಬೆಳದಿಂಗಳಾಗಿ ಬಾ ಎಂಬ ಹಾಡನ್ನು ಹಾಡಿದ್ದರು.
 

Share this Video
  • FB
  • Linkdin
  • Whatsapp

ನಟ ವಿಜಯ ರಾಘವೇಂದ್ರ ತಮ್ಮ ಪತ್ನಿ ಸ್ಪಂದನಾರನ್ನು ಪ್ರೀತಿಸುವಷ್ಟು ಮತ್ಯಾರನ್ನು ಪ್ರೀತಿಸಿಲ್ಲ ಅನಿಸುತ್ತದೆ. ತಮ್ಮ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುಂಚೆಯೇ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ. ಆದ್ರೆ ಕಳೆದ ಬಾರಿ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ನಟ ವಿಜಯ್‌ ರಾಘವೇಂದ್ರ(Vijay Raghavendra) ತಮ್ಮ ಮುದ್ದಿನ ಮಡದಿಗೆ, ಬೆಳದಿಂಗಳಾಗಿ ಬಾ(Beladingalaagi baa) ಎಂಬ ಹಾಡನ್ನು ಹಾಡಿದ್ದರು. ಹುಲಿ ಹಾಲಿನ ಮೇವು ಸಿನಿಮಾದ ಡಾ. ರಾಜ್‌ ಕುಮಾರ್‌ ನಟನೆಯ ಚಿತ್ರದ ಹಾಡು ಇದಾಗಿದೆ. ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ(Spandana) ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ತೆರಳಿದ್ದಾಗ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ವೀಕ್ಷಿಸಿ: ವಿಜಯ್-ಸ್ಪಂದನಾ ಲವ್ ಸ್ಟೋರಿಯೇ ರೋಚಕ: ಕಾಫಿ ಡೇಯಲ್ಲಿ ಶುರುವಾಯ್ತು ಲವ್ ಕಹಾನಿ..!

Related Video