Simple Suni: ಅವತಾರ ಪುರುಷನಿಗೆ ಸಾಥ್ ಕೊಟ್ಟ ಆರ್‌ಸಿಬಿ!

ಡೈರೆಕ್ಟರ್ ಸಿಂಪಲ್ ಸುನಿ ಹಾಗೇ. ಸಿಂಪಲ್ಲಾಗಿ‌ ಸಖತ್ ಐಡಿಯಾ ಮಾಡ್ತಿರ್ತಾರೆ. ಈಗ ಅವರ ನಿರ್ದೇಶನದ ಅಧ್ಯಕ್ಷ ಶರಣ್ ಅಭಿನಯದ 'ಅವತಾರ ಪುರುಷ' ಸಿನಿಮಾ ಪ್ರಚಾರಕ್ಕೂ ಹೀಗೆ ಪ್ಲ್ಯಾನ್ ಮಾಡಿದ್ದಾರೆ.  ಆರ್‌ಸಿಬಿಯನ್ನ ಬಳಸಿಕೊಂಡು ಸಿನಿಮಾ ಪ್ರಚಾರದ ಹಾಡು ಮಾಡಿದ್ದಾರೆ ಸುನಿ.

Share this Video
  • FB
  • Linkdin
  • Whatsapp

ಡೈರೆಕ್ಟರ್ ಸಿಂಪಲ್ ಸುನಿ (Simple Suni) ಈ ಬಾರಿ 'ಅವತಾರ ಪುರುಷ' (Avatara Purusha) ಚಿತ್ರಕ್ಕೆ ಅವರು ಬಳಕೆ ಮಾಡಿಕೊಂಡಿದ್ದು ಐಪಿಎಲ್ (IPL) ಮ್ಯಾಚ್ಅನ್ನು. ಅದರಲ್ಲೂ ಬಹುಮುಖ್ಯವಾಗಿ ಆರ್‌ಸಿಬಿ (RCB) ಮ್ಯಾಚ್ಅನ್ನು. ಈ ಬಾರಿ 10 ತಂಡಗಳು ಐಪಿಎಲ್‌ನಲ್ಲಿ ಸೆಣೆಸುತ್ತಿವೆ. ಪ್ರತಿ ಆರ್‌ಸಿಬಿ ಮ್ಯಾಚ್ ಇದ್ದಾಗಲೂ ಒಂದು ಹೊಸ ವಿಡಿಯೋ ಮೂಲಕ ಬರುತ್ತಿದ್ದಾರೆ ಸಿಂಪಲ್ ಸುನಿ. ಆರ್ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯವಿದ್ದಾಗ ಒಂದು ವಿಡಿಯೋ ಮಾಡಿ ಬಿಟ್ಟಿದ್ದರು. ಕೋಲ್ಕತ್ತಾ ತಂಡವನ್ನು ಬೆಂಗಳೂರು ಎದುರಿಸುತ್ತಿದೆ. ಹೀಗಾಗಿ, ಹೊಸ ವಿಡಿಯೋ ಹರಿಬಿಡಲಾಗಿದ್ದು, ಸಖತ್ ರೀಚ್ ಪಡೆದುಕೊಳ್ಳುತ್ತಿದೆ. 'ಅವತಾರ ಪುರುಷ' ಸಿನಿಮಾದಲ್ಲಿ ಹಾಸ್ಯದ ಜತೆಗೆ ಮಾಟಮಂತ್ರದ ವಿಚಾರ ಹೇಳಲಾಗಿದೆ. ಇದು ಇತ್ತೀಚೆಗೆ ರಿಲೀಸ್ ಆದ ಟೀಸರ್ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Avatar Purusha: ಮೇ 6ರಂದು ಬೆಳ್ಳಿತೆರೆ ಮೇಲೆ ಬರಲಿದ್ದಾನೆ ಕಾಮಿಡಿ ಕಿಂಗ್ ಶರಣ್

ಆರ್‌ಸಿಬಿ ವಿರುದ್ಧ ಆಡುವ ಟೀಂಗೆ ಮಾಟ ಮಾಡಬೇಕು ಎನ್ನುವ ವಿಚಾರವನ್ನು ಫನ್ನಿಯಾಗಿ ಹೇಳಿದ್ದಾರೆ ಸಿಂಪಲ್ ಸುನಿ. ಈ ಬಗ್ಗೆ ಮಾತನಾಡಿರುವ ಸುನಿ, ‘ನಮಗೆ ಯೂಟ್ಯೂಬ್‌ನಲ್ಲಿ ವೀವ್ಸ್ ಪಡೆದುಕೊಳ್ಳಬೇಕು ಎನ್ನುವ ಉದ್ದೇಶ ಇಲ್ಲ. ಹೀಗಾಗಿ, ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದೇವೆ. ಮೊದಲ ವಿಡಿಯೋ ಒಟ್ಟಾರೆ 5 ಲಕ್ಷ ವೀಕ್ಷಣೆ ಕಂಡಿದೆ. ಐದು ಲಕ್ಷದಲ್ಲಿ ಐದು ಸಾವಿರ ಜನರು ಬಂದು ಸಿನಿಮಾ ನೋಡಿದರೂ ನಾವು ವಿಡಿಯೋ ಮಾಡಿದ್ದಕ್ಕೂ ಸಾರ್ಥಕ’ ಎನ್ನುತ್ತಾರೆ. ಮುಂಬರುವ ಎಲ್ಲಾ ಆರ್‌ಸಿಬಿ ಮ್ಯಾಚ್ ದಿನವೂ ಈ ರೀತಿಯ ವಿಡಿಯೋ ಬಿಡುವ ಆಲೋಚನೆಯಲ್ಲಿ ಸುನಿ ಇದ್ದಾರೆ. ‘ಪುಷ್ಕರ್ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ರಿಲೀಸ್ ಆಗುತ್ತಿದೆ. ಅಂದಹಾಗೆ ಮೇ 6ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video