Avatar Purusha: ಮೇ 6ರಂದು ಬೆಳ್ಳಿತೆರೆ ಮೇಲೆ ಬರಲಿದ್ದಾನೆ ಕಾಮಿಡಿ ಕಿಂಗ್ ಶರಣ್

ಬಹು ನಿರೀಕ್ಷೆಯ ಕನ್ನಡದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶರಣ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾದ ಮೊದಲ ಭಾಗ ಮೇ.6ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ.

Share this Video
  • FB
  • Linkdin
  • Whatsapp

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದ ಸಿಂಪಲ್ ಸುನಿ (Simple Suni) ಆಕ್ಷನ್ ಕಟ್ ಹೇಳಿರುವ 'ಅವತಾರ ಪುರುಷ' (Avatara Purusha) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಅವರಿಗೆ ಜತೆಯಾಗಿ ಬಣ್ಣಹಚ್ಚಿರುವವರು ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath). ಈಗಾಗಲೇ ತೆರೆಯ ಮೇಲೆ ಮೋಡಿ ಮಾಡಿರುವ ಈ ಜೋಡಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ 2021ರ ಡಿಸೆಂಬರ್​ನಲ್ಲೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ನಿಯಮಾವಳಿಗಳ ಕಾರಣದಿಂದ ಚಿತ್ರದ ರಿಲೀಸ್ ಮುಂದೂಡಲಾಗಿತ್ತು. 

Add Asianetnews Kannada as a Preferred SourcegooglePreferred

Avatara Purusha: ಸಂಕ್ರಾಂತಿಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ ಕಾಮಿಡಿ ಕಿಂಗ್ ಅಧ್ಯಕ್ಷ

ಇದೀಗ ಚಿತ್ರದ ಹೊಸ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. 'ಅವತಾರ ಪುರುಷ' ಸಿನಿಮಾದ ಮೊದಲ ಭಾಗ ಮೇ.6ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಸಿಂಪಲ್ ಸುನಿ, 'ಕಪ್ಪುಜಾದು ಶುರುವಾಗುವ ಸಮಯ. ಮೇ 6ರಂದು ಬಿಡುಗಡೆ. ಆಶೀರ್ವಾದವಿರಲಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ರಿಲೀಸ್ ಜತೆಗೆ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದ್ದು, ಸಿನಿರಸಿಕರ ಗಮನ ಸೆಳೆಯುತ್ತಿದೆ. ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರ ಈಗಾಗಲೇ ಟೀಸರ್‌ ಹಾಗೂ ಟ್ರೇಲರ್‌ ಮೂಲಕ ಸಾಕಷ್ಟುಗಮನ ಸೆಳೆದಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video