Asianet Suvarna News Asianet Suvarna News

ರಾಣನಾಗಿ ಬೆಳ್ಳಿತೆರೆ ಎಂಟ್ರಿಗೆ ರೆಡಿ ಶ್ರೇಯಸ್! ಸಿನಿಮಾದ ಬ್ಯೂಟಿಫುಲ್ ಲವ್ ಸಾಂಗ್ ರಿಲೀಸ್‌

ಸ್ಯಾಂಡಲ್‌ವುಡ್‌ ಹೆಸರಾಂತ ನಿರ್ಮಾಪಕ ಕೆ, ಮಂಜು ಸುಪುತ್ರ ಶ್ರೇಯಸ್ ಈಗ ರಾಣನಾಗಿ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧರಾಗಿದ್ದಾರೆ. ಇದೀಗ ಈ ರಾಣ ಏಕ್ ಲವ್ ಯಾ ಬ್ಯೂಟಿ ರೀಷ್ಮಾ ನಾಣಯ್ಯಗೆ ಲವ್ ಪಪ್ಪಿ ಕೊಟ್ಟಿದ್ದಾರೆ. 

ಸ್ಯಾಂಡಲ್‌ವುಡ್‌ ಹೆಸರಾಂತ ನಿರ್ಮಾಪಕ ಕೆ, ಮಂಜು ಸುಪುತ್ರ ಶ್ರೇಯಸ್ ಈಗ ರಾಣನಾಗಿ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧರಾಗಿದ್ದಾರೆ. ಇದೀಗ ಈ ರಾಣ ಏಕ್ ಲವ್ ಯಾ ಬ್ಯೂಟಿ ರೀಷ್ಮಾ ನಾಣಯ್ಯಗೆ ಲವ್ ಪಪ್ಪಿ ಕೊಟ್ಟಿದ್ದಾರೆ. ರಾಣ ಸಿನಿಮಾದ ಬ್ಯೂಟಿಫುಲ್ ಲವ್ ಸಾಂಗ್ ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ಶ್ರೇಯಸ್ ಹಾಗು ರೀಷ್ಮಾ ನಾಣಯ್ಯ ಕ್ಯೂಟ್ ಆಗಿ ಕಂಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ ರಾಣಾ ಟೀಂ, ಸಿನಿಮಾದ ಹಾಡು ಬಿಡುಗಡೆ ಮಾಡಿದ್ದು, ಆದಷ್ಟು ಬೇಗ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದೇವೆ ಅಂತ ಹೇಳಿದ್ದಾರೆ. 

ನಂದಕಿಶೋರ್ ನಿರ್ದೇಶನದ ರಾಣನ ಈ ಗಲ್ಲಿ ಬಾಯ್ ಹಾಡಿಗೆ ರ್ಯಾಪ್‌ ಸ್ಟಾರ್ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡಿ ಅವರೇ ಬರೆದಿದ್ದು, ಅನಿರುದ್ಧ್ ಶಾಸ್ತ್ರಿ ಮತ್ತು ಅದಿತಿ ಸಾಗರ್ ಹಾಡಿದ್ದಾರೆ. ಈ ಸಿನಿಮಾವನ್ನು ನವೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇನ್ನು ಶೇಖರ್‌ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆದಿದ್ದಾರೆ. ರಜನಿ ಭಾರದ್ವಾಜ್, ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಐದು ಸಾಹಸ ಸನ್ನಿವೇಶಗಳಿದ್ದು, ರವಿವರ್ಮ, ಚೇತನ್,ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories