Vedha Movie: ಹೀಗಿತ್ತು ಗೀತಾ ಪಿಕ್ಚರ್ಸ್‌ನ 'ವೇದ' ಟೀಸರ್‌ ಲಾಂಚ್ ಈವೆಂಟ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ 'ವೇದ' ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ ಲಾಂಚ್ ಅದ್ದೂರಿಯಾಗಿ ನಡೆದಿದೆ. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ವೇದ ಚಿತ್ರದ ಟೀಸರ್‌ನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ಲಾಂಚ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ 'ವೇದ' ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ ಲಾಂಚ್ ಅದ್ದೂರಿಯಾಗಿ ನಡೆದಿದೆ. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ವೇದ ಚಿತ್ರದ ಟೀಸರ್‌ನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ಲಾಂಚ್ ಮಾಡಿದ್ದು, ಗೀತಾ ಪಿಕ್ಚರ್ಸ್ ಲೋಗೊ ಲಾಂಚ್‌ನ್ನು ಹಿರಿಯ ನಟ ಅನಂತ್ ನಾಗ್ ಬಿಡುಗಡೆಗೊಳಿಸಿದ್ದಾರೆ. ಎ. ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ತಯಾರಾಗಿದ್ದು, ಭಜರಂಗಿ, ವಜ್ರಕಾಯ, ಭಜರಂಗಿ- 2 ಹಿಟ್ ಚಿತ್ರಗಳ ನಿರ್ದೇಶಕ ಹರ್ಷ ವೇದ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದಾರೆ. ವಿಶೇಷವಾಗಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಅದೇ ದಿನ ಗೀತಾ ಪಿಕ್ಚರ್ಸ್ ಲಾಂಚ್ ಆಗಿದೆ. ಹಾಗೂ ಶಿವರಾಜ್ ಕುಮಾರ್ ಅಭಿನಯದ 125 ಸಿನಿಮಾಗಳ ಕುರಿತ ಸ್ಪೆಷಲ್ ವಿಡಿಯೋ ಪ್ರದರ್ಶನ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭಕೋರಿದ್ದಾರೆ. 'ವೇದ' ಟೀಸರ್ ಲಾಂಚ್ ಕಾರ್ಯಕ್ರಮದ ಝಲಕ್‌ನ್ನು ನೀವು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video