Avatara Purusha: ಸಂಕ್ರಾಂತಿಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ ಕಾಮಿಡಿ ಕಿಂಗ್ ಅಧ್ಯಕ್ಷ

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದ 'ಅವತಾರ ಪುರುಷ' ಚಿತ್ರತಂಡ, ಇದೀಗ ಜನವರಿ 14ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಡಿಸೆಂಬರ್ 10ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಈ ಹಿಂದೆ ನಿರ್ಧರಿಸಿತ್ತು. 

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದ 'ಅವತಾರ ಪುರುಷ' (Avatar Purusha) ಚಿತ್ರತಂಡ, ಇದೀಗ ಜನವರಿ 14ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಡಿಸೆಂಬರ್ 10ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಈ ಹಿಂದೆ ನಿರ್ಧರಿಸಿತ್ತು. ಆದರೆ ಕೊರೋನಾ ಹಾಗೂ ಓಮಿಕ್ರಾನ್ ವೈರಸ್ ಆತಂಕದಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಇದೀಗ ಚಿತ್ರವನ್ನು ಸಂಕ್ರಾಂತಿ ಹಬ್ಬದ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

Add Asianetnews Kannada as a Preferred SourcegooglePreferred

Avatara Purusha: ನಟ ಶರಣ್ ಬಾಯಲ್ಲಿ ಆಶಿಕಾ ಹಾಕಿದ್ರು ಲಡ್ಡು!

ಸಿಂಪಲ್ ಸುನಿ (Simple Suni) ನಿರ್ದೇಶನದ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದಲ್ಲಿ'ಅವತಾರ ಪುರುಷ' ಚಿತ್ರ ಮೂಡಿಬಂದಿದ್ದು, ಪುಷ್ಕರ್ ಫಿಲಂಸ್ ಬ್ಯಾನರ್‌ನಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶರಣ್‌ಗೆ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ' ಚಿತ್ರ ಮೂಡಿ ಬಂದಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video