Sandalwood: ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವಿಶ್ ಮಾಡಿದ ಸ್ಯಾಂಡಲ್‌ವುಡ್..!

ದೇಶದ ಮೂಲೆ ಮೂಲೆಯಲ್ಲೂ ಶ್ರೀರಾಮ ನಾಮ ಜಪಿಸಲಾಗ್ತಿದೆ. ಅಯೋದ್ಯೆಯಲ್ಲಿ ರಾಮ ಮತ್ತೆ ಪ್ರತಿಷ್ಠಾಪನೆಯಾಗ್ತಿರೋದ್ರಿಂದ, ಅಯೋಧ್ಯೆ ಮತ್ತೆ ಶೃಂಗಾರಗೊಂಡಿದೆ.

First Published Jan 22, 2024, 9:36 AM IST | Last Updated Jan 22, 2024, 9:37 AM IST

ರಾಮಾಯಣ ಧಾರಾವಾಹಿಯಲ್ಲಿ ರಾಮ-ಲಕ್ಷ್ಮಣ-ಸೀತೆಯ ಪಾತ್ರ ಮಾಡಿದ್ದ ಕಲಾವಿದರು ಅಯೋಧ್ಯೆಗೆ(Ayodhya) ಭೇಟಿ ಕೊಟ್ಟಿದ್ದರು. ಇವರು ಅಯೋದ್ಯೆಗೆ ಆಗಮಿಸುತ್ತಿದ್ದಂತೆ ಸಾಕ್ಷಾತ್ ರಾಮಚಂದ್ರನೇ ಬಂದ ಅನುಭವವಾಗಿತ್ತು. 500 ವರ್ಷಗಳ ಭಾರತೀಯರ ಕನಸು ನನಸಾಗ್ತಿರೋದ್ರಿಂದ ಇಡೀ ಭರತಖಂಡದಲ್ಲಿ ರಾಮನಾಮ ಜಪಿಸಲಾಗ್ತಿದೆ. ಈ ಖುಷಿಯನ್ನ ಇಮ್ಮಡಿಗೊಳಸೋಕೆ ಸ್ಯಾಂಡಲ್‌ವುಡ್‌ (Sandalwood) ಸ್ಟಾರ್ಸ್ ವಿಶ್ ಮಾಡಿದ್ದಾರೆ. ಇನ್ನು ಇದಿಷ್ಟೆ ಅಲ್ಲದೇ, ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini Puneeth Rajkumar) ಅವರು ಕೂಡ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆಗ್ತಿರೋದರಿಂದ, ಇಡೀ ಭಾರತವೇ ಖುಷಿ ಪಡ್ತಿದೆ. ಈ ಖುಷಿ ಸಂದರ್ಭದಲ್ಲಿ ಶುಭಹಾರೈಸುತ್ತೆ ಅಂತ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಈಗಾಗಲೇ ಅಯೋಧ್ಯೆ ರಾಮ ಮಂದಿರದಲ್ಲಿ(Ram Mandir) ಬಾಲರಾಮನನ್ನ ನೋಡೋಕೆ ಇಡಿ ಭರತಖಂಡವೇ ಕಾತುರದಿಂದ ಕಾದಯ ಕುಳಿತಿದೆ. ಇನ್ನೇನು ಬಾಲರಾಮ ಕೋಟ್ಯಾಂತರ ಭಕ್ತರಿಗೆ ದರ್ಶನ ಕೊಡಲಿದ್ದಾನೆ. ಈ ಕಾರ್ಯದಲ್ಲಿ ಅನೇಕ ನಟರಿಗೂ ಆಹ್ವಾನ ನೀಡಿದ್ದು, ಅನೇಕರು ಈ ಮಹದ್ಕಾರ್ಯಕ್ಕೆ ಸಾಕ್ಷಿಯಾಗ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Bachelor Party: 15 ವರ್ಷದ ದಿಗಂತ್‌, ಯೋಗಿ ಸ್ನೇಹಕ್ಕೆ ಬ್ಯಾಚುಲರ್ ಪಾರ್ಟಿ ಕೊಟ್ಟ ರಕ್ಷಿತ್‌..!

Video Top Stories