Bachelor Party: 15 ವರ್ಷದ ದಿಗಂತ್‌, ಯೋಗಿ ಸ್ನೇಹಕ್ಕೆ ಬ್ಯಾಚುಲರ್ ಪಾರ್ಟಿ ಕೊಟ್ಟ ರಕ್ಷಿತ್‌..!

ಬ್ಯಾಚುಲರ್ ಪಾರ್ಟಿ.. ಇದು ನಟ ದೂದ್ ಪೇಡ ದಿಗಂತ್ ಹಾಗೂ ಲೂಸ್ ಮಾದ ಯೋಗಿಯ ಸಿನಿಮಾ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರೋ ಸಿನಿಮಾ ಇದು. 
 

Share this Video
  • FB
  • Linkdin
  • Whatsapp

ರಿಯಲ್ ಲೈಫ್‌ನಲ್ಲಿ ನಟ ಯೋಗಿ(Yogi) ಹಾಗೂ ದಿಗಂತ್‌ರದ್ದು(Diganth) 15 ವರ್ಷದ ಸ್ನೇಹ. ಇವರಿಬ್ಬರ ಈ 15 ವರ್ಷದ ಸ್ನೇಹಕ್ಕೆ ಈಗ ಕಿರಿಕ್ ಪಾರ್ಟಿ ಹೀರೋ ರಕ್ಷಿತ್ ಶೆಟ್ಟಿ ಬ್ಯಾಚುಲರ್ ಪಾರ್ಟಿ(Bachelor Party) ಕೊಟ್ಟಿದ್ದಾರೆ. ‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್ ಬ್ಯಾಚುಲರ್ ಪಾರ್ಟಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇಬ್ಬರು ಗಳೆಯರು ಬ್ಯಾಚ್ಯೂಲರ್ ಪಾರ್ಟಿ ಮಾಡೋಕೆ ಬ್ಯಾಂಕಾಕ್‌ಗೆ ಹೋದಾಗ ಏನೆಲ್ಲಾ ಆಗುತ್ತೆ ಅನ್ನೋ ಕಥೆ ಈ ಸಿನಿಮಾದಲ್ಲಿದೆ. ಕಿರಿಕ್ ಪಾರ್ಟಿ ಸಿನಿಮಾದ ಹಾಗೆ ಬ್ಯಾಚುಲರ್ ಪಾರ್ಟಿ ಸಿನಿಮಾ ಯೂತ್ ಕಾಮಿಡಿ ಸ್ಟೋರಿಯ ಮೂವಿ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಮೂರು ದಿನದಲ್ಲಿ 2.2 ಮಿಲಿಯನ್ ವೀಕ್ಷಣೆ ಕಂಡಿದ್ದು, ಕನ್ನಡ ಸಿನಿ ಪ್ರೇಕ್ಷಕರಲ್ಲಿ ಹೊಸ ಭರವಸೆ ಮೂಡಿಸಿದೆ. ಟ್ರೈಲರ್ನಲ್ಲೇ ಕಾಮಿಡಿ ಕಿಕ್ ಕೊಡುತ್ತಿದ್ದು, ಸಿನಿಮಾದ ಬಹುಪಾಲು ಶೂಟಿಂಗ್ ವಿದೇಶದಲ್ಲೇ ಆಗಿದೆ. ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಜಿ. ಎಸ್. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ(Rakshit Shetty) ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ದಿಗಂತ್ ಜೊತೆ ನಟ ಅಚ್ಯುತ್ ಕುಮಾರ್ ಕೂಡ ಬ್ಯಾಚುಲರ್ ಪಾರ್ಟಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಯೂತ್ ಫುಲ್ ಸಿನಿಮಾ ಜನವರಿ 26ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Dhruva-Prem: ‘KD’ ಬಳಿಕ ಮತ್ತೆ ಒಂದಾಗುತ್ತೆ ಧ್ರುವ-ಪ್ರೇಮ್ ಜೋಡಿ ಯಾವ ಸಿನಿಮಾಗೆ ಗೊತ್ತಾ..?

Related Video