ಮಂಡ್ಯ ಮರಿ ಗೌಡ್ರ ಮನೆಯಲ್ಲಿ ಸಂಭ್ರಮವೋ ಸಂಭ್ರಮ: ಮದುಮಗನಾಗಿ ಬಾಸಿಂಗ ಕಟ್ಟಿದ ಅಭಿಷೇಕ್ ಅಂಬರೀಶ್.!

ಅಭಿ-ಅವಿಯಾ ಮದುವೆ ಶಾಸ್ತ್ರದಲ್ಲಿ ಸ್ಯಾಂಡಲ್ವುಡ್ ತಾರೆಯರು 
ಅಂಬರೀಶ್ ಆಸೆಯಂತೆ ಅಂಬಿ ಮನೆಯಲ್ಲೇ ನಡೆದಿದೆ ಶಾಸ್ತ್ರ.!
ಕೈ ಮೇಲೆ ಅಪ್ಪ, ಮಂಡ್ಯದ ಹೆಸರು ಬರೆಸಿಕೊಂಡ ಅಭಿಷೇಕ್!
 

Share this Video
  • FB
  • Linkdin
  • Whatsapp

ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ಮನದಲ್ಲಿ ಹೊಸ ಬೆಳಕು ಮೂಡಿದೆ. ಅಭಿಷೇಕ್ ಅಂಬರೀಶ್ ಗೃಹಾಸ್ತಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಮಂಡ್ಯದ ಮರಿ ಗೌಡರ ಮನೆಯಲ್ಲಿ ಸಂಭ್ರಮ ಹೆಚ್ಚಾಗಿದೆ. ಅಭಿ ಮದುಮಗನಾಗಿ ಬಾಸಿಂಗ ಕಟ್ಟಿದ್ದಾರೆ. ಪ್ರೀತಿಸಿದ ಹುಡುಗಿ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಜೊತೆ ಅಭಿ ದಾಂಪತ್ಯ ಶುರು ಮಾಡುತ್ತಿದ್ದಾರೆ. ಪ್ರೀತಿಸಿದ ಹುಡುಗಿನ ಕೈ ಹಿಡಿಯೋದು ಅಂದ್ರೆ ಅದೊಂತರಾ ಖುಷಿ ಅಲ್ವಾ. ಇದು ಲವ್ ಮಾಡಿ ಮದ್ವೆ ಆದ ಪ್ರತಿಯೊಬ್ಬರಿಗೂ ಅನುಭವ ಆಗಿರುತ್ತೆ. ಈಗ ಅಂತದ್ದೇ ಅನುಭವದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಇದ್ದಾರೆ. ಈ ಪ್ರೇಮಿಗಳ ಮದುವೆಗೆ ಇಡೀ ಸ್ಯಾಂಡಲ್ವುಡ್ ಸಜ್ಜಾಗಿದೆ. ಒಂದ್ ಕಡೆ ರೆಬೆಲ್ ಕುಟುಂಬ ಮಗನ ಅರಶಿಣ ಶಾಸ್ತ್ರ ಮಾಡಿದ್ರೆ ಮತ್ತೊಂದ್ ಕಡೆ ಬಿದ್ದಪ್ಪ ಕುಟುಂಬ ಅವಿವಾಗೆ ಮೆಹೆಂದಿ, ಅರಶಿಣ ಶಾಸ್ತ್ರ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: Today Horoscope: ಇಂದಿನ 12 ರಾಶಿಗಳ ಭವಿಷ್ಯ ಹೀಗಿದೆ...ಕಾರ ಹುಣ್ಣಿಮೆ ಇದ್ದು, ಚಂದ್ರನ ಪ್ರಾರ್ಥನೆ ಮಾಡಿ..

Related Video