Yash: ಸವಾಲುಗಳ ಸರಮಾಲೆಯಲ್ಲಿ ರಾಕಿಂಗ್ ಸ್ಟಾರ್: ಯಶ್ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ ಎಂದ ನೀಲ್

ಭಾರತೀಯ ಚಿತ್ರರಂಗದ ಗೋಲ್ಡನ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಎದುರು, ಇದೀಗ ಸವಾಲುಗಳ ದೊಡ್ಡ ಬೆಟ್ಟವೇ ಬೆಳೆದು ನಿಂತಿದೆ. 
 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಕಳೆದ ಆರು ವರ್ಷದಲ್ಲಿ ಮಾಡಿದ್ದು ಕೆಜಿಎಫ್ ಅನ್ನೋ ಎರಡನೇ ಸಿನಿಮಾ. ಆ ಎರಡೇ ಸಿನಿಮಾಗಳು ರಾಕಿಯ ಸ್ಟಾರ್ಡಮ್'ನ್ನು ದೇಶಾದ್ಯಂತ ಹಬ್ಬಿಸಿದೆ. ಮತ್ತೊಂದ್ ಕಡೆ ಆ ಸ್ಟಾರ್ಡಮ್ಅನ್ನ ಜೋಪಾನವಾಗಿ ಕಾಪಾಡಿಕೊಂಡು ಹೋಗೋ ದೊಡ್ಡ ಜವಾಬ್ದಾರಿ ಯಶ್ ಹೆಗಲ ಮೇಲೆಯೇ ಇದೆ. ಹೀಗಾಗಿ ಕೆಜಿಎಫ್ ಕಿಂಗ್ ಹೊಸ ಸಿನಿಮಾ ಅನೌನ್ಸ್ ಮಾಡೋಕೆ ಹಿಂದೆ ಮುಂದೆ ಯೋಚನೆ ಮಾಡ್ತಿದ್ದಾರಾ.? ಇಂತಹ ಮಿಲಿಯನ್ ಡಾಲರ್ ಪ್ರಶ್ನೆ ರಾಕಿ ಅಭಿಮಾನಿಗಳಲ್ಲಿ ಆಗಾಗ ಹುಟ್ಟುತ್ತಲೇ ಇರುತ್ತೆ. ಆದ್ರೆ ಯಶ್ ಕ್ಯಾಲಿಬರ್ ಏನು ಅಂತ ಹತ್ತಿರಿಂದ ಬಲ್ಲ ನಿರ್ದೇಶಕ ಪ್ರಶಾಂತ್ ನೀಲ್ ರಾಕಿಂಗ್ ಸ್ಟಾರ್ ಮೇಲೆ ದೊಡ್ಡ ಭರವಸೆ ಇಟ್ಟುಕೊಂಡಿದ್ದು, ಯಶ್ ಸುಮ್ಮನೇ ಕೂರುವ ವ್ಯಕ್ತಿ ಅಲ್ಲದೇ ಅಲ್ಲ ಎಂದಿದ್ದಾರೆ ಪ್ರಶಾಂತ್ ನೀಲ್. ರಾಕಿಂಗ್ ಸ್ಟಾರ್ ಯಶ್ ಸೈನ್ಸ್ ಥ್ರಿಲ್ಲರ್ ಸಿನಿಮಾ ಮಾಡೋ ಯೋಜನೆಯಲ್ಲಿದ್ದಾರೆ ಅನ್ನೋ ಮಾಹಿತಿ ಹರಿದಾಡ್ತಿದೆ. ಅದಕ್ಕಾಗಿ ದೇಶ, ವಿದೇಶದ ಹಲವು ತಂತ್ರಜ್ಞರನ್ನು ಯಶ್ ಭೇಟಿ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಣ್ಣ ಇಲ್ಲ ಅಂತ ಹೇಗೇಗೋ ಡಬ್ಬಿಂಗ್ ಮಾಡೋಕಾಗಲ್ಲ: ಚಿರು ಸಿನಿಮಾದ ಬಗ್ಗೆ ...

Related Video