Asianet Suvarna News Asianet Suvarna News

ಅಣ್ಣ ಇಲ್ಲ ಅಂತ ಹೇಗೇಗೋ ಡಬ್ಬಿಂಗ್ ಮಾಡೋಕಾಗಲ್ಲ: ಚಿರು ಸಿನಿಮಾದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

ಚಿರು ಕೊನೆ ಸಿನಿಮಾ ರಾಜಮಾರ್ತಾಂಡ ಬಗ್ಗೆ ಸುಳಿವು ಕೊಟ್ಟ ಧ್ರುವ ಸರ್ಜಾ. ಒಳ್ಳೆ ಹುಡುಗ ಪ್ರಥಮ್ ಫೋಸ್ಟ್‌ ವೈರಲ್....

Olle hudga pratham post about Dhruva sarja finishing Rajamarthanda film dubbing vcs
Author
First Published Dec 19, 2022, 9:20 AM IST

ಕನ್ನಡ ಚಿತ್ರರಂಗದ ವರ್ಸಟೈಲ್ ನಟ ಚಿರಂಜೀವಿ ಸರ್ಜಾ 2020ರ ಜೂನ್‌ ತಿಂಗಳಿನಲ್ಲಿ ಹೃದಯಾಘಾತದಿಂದ ಅಗಲಿದ್ದರು. ಚಿರು ಅಭಿನಯಿಸಿರುವ ಕೊನೆ ಸಿನಿಮಾ ಹಾಗೆ ಉಳಿಯಿತ್ತು. ಚಿತ್ರಕ್ಕೆ ಸಂಪೂರ್ಣ ಸಾಥ್‌ ಕೊಟ್ಟ ಮೇಘನಾ ರಾಜ್‌ ಮತ್ತು ಪುತ್ರ ರಾಯನ್ ರಾಜ್‌ ಸರ್ಜಾಗೆ ಮತ್ತೊಂದು ದೊಡ್ಡ ಶಕ್ತಿಯಾಗಿ ನಿಂತವರು ಧ್ರುವ ಸರ್ಜಾ. ಅಣ್ಣ ಚಿತ್ರಕ್ಕೆ ನಾನೇ ಡಬ್ಬಿಂಗ್ ಮಾಡಿಕೊಡುವೆ ಹಾಗೂ ಬಿಡುಗಡೆ ಬಜಾಬ್ದಾರಿಯನ್ನು ಹೊತ್ತುಕೊಳ್ಳುವೆ ಎಂದಿದ್ದರು. ಅದರಂತೆ ಈಗ ಡಬ್ಬಿಂಗ್ ಮಾಡುತ್ತಿದ್ದಾರೆ.....ಈ ವಿಚಾರದ ಬಗ್ಗೆ ಒಳ್ಳೆ ಹುಡುಗ ಪ್ರಥಮ ಬರೆದುಕೊಂಡಿದ್ದಾರೆ. 

ಪ್ರಥಮ್ ಪೋಸ್ಟ್‌:

ನಿನ್ನೆ ಚಿರಂಜೀವಿ ಸರ್ಜಾ ಅಣ್ಣವ್ರ ರಾಜಮಾರ್ತಾಂಡ ಸಿನಿಮಾ ಡಬ್ಬಿಂಗ್ ಟೈಂ ಇದು. ಮಧ್ಯಾಹ್ನ ಊಟಕ್ಕೆ ಬನ್ನಿ ಸಿಗೋಣ ಅಂತ ಹೇಳಿದವರು ಡಬ್ಬಿಂಗ್ ಥಿಯೇಟರ್‌ನಿಂದ ಹೊರ ಬಂದಾಗ ರಾತ್ರಿ 7 ಗಂಟೆ ಆಗಿತ್ತು. ಡಬ್ಬಿಂಗ್ ಮುಗೀತಾ ಎಂದು ಕೇಳಿದಕ್ಕೆ ನಮ್ ಹೀರೋ ಧ್ರು ಸರ್ಜಾ ಹೇಳಿದಿಷ್ಟು...ಇಲ್ಲ ಇನ್ನೊಂದೆರಡು ದಿನ ಇದೆ ಮಾಡಿ ಮುಗಿಸುತ್ತೀನಿ. ಅಣ್ಣ ಇಲ್ಲ ಅಂದಾಗ ಹೇಗೇಗೋ ಮಾಡೋಕಾಗಲ್ಲ. ಕೆಲಸ ಒಪ್ಪಿಕೊಂಡ ಮೇಲೆ ಚೆನ್ನಾಗಿ ಮಾಡ್ಬೇಕು ಬ್ರೋ...ಲೇಟಾದ್ರೂ ನೀಟಾಗಿ ಮಾಡೋಣ ಅಂದಿದ್ದರು ಪ್ರತಿ ದೃಶ್ಯಕ್ಕೂ ಜೀವನತುಂಬಿದ್ದಕ್ಕೆ ಸಾಕ್ಷಿಯಾಗಿತ್ತು. ಮೂವರು ಹಿರಿಯರನ್ನು ಧ್ರುವ ಅವ್ರಿಗೆ ಪರಿಚಯ ಮಾಡೋಣ ಅಂತ ಕರೆದುಕೊಂಡು ಹೋಗಿದ್ದೆ. ಅದ್ರಲ್ಲಿ ಒಬ್ಬರು ಹಿರಿಯರು ಹೇಳಿದ್ದಿಷ್ಟು.... ಪ್ರಥಮ್ ಧ್ರುವ ಸರ್ಜಾ ಅವ್ರು ಒಬ್ಬ ಗೆದ್ದರೆ ಕನಿಷ್ಟ ಸಾವಿರಜನ ನೆಮ್ಮದಿಯ ಊಟ ಮಾಡುತ್ತಾರೆ ಅಂತ. ಹೀಗಾಗಿ ನಮ್ಮ ಮೀಟಿಂಗ್ ಇನ್ನೊಂದು ದಿನಕ್ಕೆ ಪೋಸ್ಟ್‌ ಪೋನ್ ಆಯ್ತು. ಈ ಸ್ಪೆಷಲ್ ಅರ್ಪಣೆ ಚಿರು ಅಣ್ಣನಿಗೆ ಧ್ರುವ ಅವರಿಂದ' ಎಂದು ಒಳ್ಳೆ ಹುಡುಗ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

Olle hudga pratham post about Dhruva sarja finishing Rajamarthanda film dubbing vcs

ಪ್ರೆಮ್‌ಮೀಟ್‌ನಲ್ಲಿ ಮೇಘನಾ:

‘ಚಿರು (Chiranjeevi Sarja) ಬಹಳ ಇಷ್ಟಪಟ್ಟು ಮಾಡಿದ ಚಿತ್ರ ರಾಜಾ ಮಾರ್ತಾಂಡ (RajaMarthanda). ಚಿರು ಮೇಲಿನ ಸಿಂಪಥಿಗೆ ಈ ಸಿನಿಮಾ ನೋಡಬೇಡಿ, ಅವರ ಮೇಲಿನ ಪ್ರೀತಿಗೆ ಚಿತ್ರ ನೋಡಿ’ ಎಂದು ಮೇಘನಾ ರಾಜ್‌ (Meghana Raj) ಹೇಳಿದ್ದಾರೆ.ಡಬ್ಬಿಂಗ್ (Dubbing) ಮಾಡುವುದು ಮಾತ್ರ ಬಾಕಿಯಿತ್ತು. ನಂತರ ನಡೆಯಬಾರದ ಘಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಎಂದರು. ಹಾಗೆ ಟ್ರೇಲರ್‌ಗೆ ಧ್ರುವ ಧ್ವನಿ ನೀಡಿದ್ದಾರೆ. ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ. ದರ್ಶನ್ ಸರ್ ಸಹ ವಾಯ್ಸ್ ಓವರ್ ಕೊಡುವುದಾಗಿ ಹೇಳಿದ್ದಾರೆ. ಮೇಘನಾ ರಾಜ್ ಹಾಗೂ ಸುಂದರ್‌ ರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ (Raayan Raj Sarja) ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಡುಗಳು ವೈರಲ್:

ಕಳೆದ ವರ್ಷ ಸಂಕ್ರಾಂತಿ ಹಬ್ಬದ ದಿನ ರಾಜಮಾರ್ತಾಂಡ ಚಿತ್ರದ ಸಂಭಾಳಿಸು ಗುಟ್ಟಾಗಿ ನೀ ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಲವ್ ಹಾಡಿನಲ್ಲಿ ಚಿರು  ಹಾಗೂ  ನಾಯಕಿ ದೀಪ್ತಿ ಸತಿ ಕಾಂಬಿನೇಷನಲ್‌ ರೊಮ್ಯಾನ್ಸ್‌ ನೋಡಬಹುದು. ಅಲ್ಲದೆ ಹಾಡಿನ ರಿಹರ್ಸಲ್‌ನಲ್ಲಿ ಚಿರು ಮಾಡಿದ ತುಂಟಾಟಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಕುಶಾಲ್ ಗೌಡ ಸಾಹಿತ್ಯ ರಚಿಸಿದ್ದು ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯಿದೆ. ಸಂಜಿತ್ ಹೆಗ್ಡೆ ಸಂಭಾಳಿಸು ಧ್ವನಿ ನೀಡಿದ್ದರೆ ಭೂಷನ್ ಕೊರಿಯೋಗ್ರಫ್‌ ಮಾಡಿದ್ದಾರೆ. 

 

Follow Us:
Download App:
  • android
  • ios