KGF Chapter 2 ಬಿಡುಗಡೆಗೂ ಮೊದಲೇ ಶುರುವಾಗಿದೆ ಕಲೆಕ್ಷನ್ ಲೆಕ್ಕ!

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್-2 ಬಾಕ್ಸಾಫೀಸ್‌ನಲ್ಲಿ ರಾಕಿಂಗ್ ಮಾಡೋದು ಪಕ್ಕಾ.. ಕೆಜಿಎಫ್ 2 ರಿಲೀಸ್‌ಗೆ ಇನ್ನು 8 ದಿನ ಮಾತ್ರ ಬಾಕಿ ಇದೆ. ಆದರೆ ಇದೀಗ ಈ ಸಿನಿಮಾದ ಬಿಡುಗಡೆಗೂ ಮೊದಲೇ ಮಾಡಿರೋ ಪ್ರೀ ರಿಲೀಸ್ ಕಲೆಕ್ಷನ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡ್ತಿದೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ (Yaash) ಅವರ ಕೆಜಿಎಫ್-2 (KGF Chapter 2) ಬಾಕ್ಸಾಫೀಸ್‌ನಲ್ಲಿ ರಾಕಿಂಗ್ ಮಾಡೋದು ಪಕ್ಕಾ.. ಕೆಜಿಎಫ್ 2 ರಿಲೀಸ್‌ಗೆ ಇನ್ನು 8 ದಿನ ಮಾತ್ರ ಬಾಕಿ ಇದೆ. ಆದರೆ ಇದೀಗ ಈ ಸಿನಿಮಾದ ಬಿಡುಗಡೆಗೂ ಮೊದಲೇ ಮಾಡಿರೋ ಪ್ರೀ ರಿಲೀಸ್ ಕಲೆಕ್ಷನ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡ್ತಿದೆ. ರಾಜಮೌಳಿಯ ಆರ್‌ಆರ್‌ಆರ್‌ (RRR) ಸಿನಿಮಾ ಮಾಡಿದ್ದ ಪ್ರಿ-ರಿಲೀಸ್ ಬ್ಯುಸಿನೆಸ್ ದಾಖಲೆಗಳನ್ನು ಯಶ್ ಅವರ ಈ ಪ್ಯಾನ್ ವರ್ಲ್ಡ್ ಕೆಜಿಎಫ್-2 ಸಿನಿಮಾ ಬ್ರೇಕ್ ಮಾಡಿದೆ ಅಂತ ಬಾಕ್ಸಾಫೀಸ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಯಶ್ ನಾಯಕನಾಗಿ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರೋ 'ಕೆಜಿಎಫ್ ಚಾಪ್ಟರ್ 1' ನಾಲ್ಕು ವರ್ಷಗಳ ಹಿಂದೆ, ಡಿಸೆಂಬರ್ 21, 2018 ರಂದು ಬಿಡುಗಡೆಯಾಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

KGF Chapter 2: ಜರ್ಮನಿಯಲ್ಲಿ ಐದು ಭಾಷೆಯಲ್ಲಿ ಬರುತ್ತೆ ರಾಕಿಭಾಯ್ ಸಿನಿಮಾ!

ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಂಡ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತು. 'ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಅತ್ಯಂತ ಯಶಸ್ವಿ ಕಂಡ ಎರಡನೇ ಚಿತ್ರ ಎನಿಸಿಕೊಂಡಿದೆ. ಆದರೆ ಈಗ ಕೆಜಿಎಫ್-2 ಸಿನಿಮಾ ರಾಜಮೌಳಿಯ ಆರ್‌ಆರ್‌ಆರ್‌ ಸೃಷ್ಟಿಸಿರೋ ದಾಖಲೆಗಳನ್ನೆಲ್ಲವನ್ನ ಅಳಿಸಿ ಹಾಕುವ ರೇಂಜ್‌ನಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿದೆ. ಇದರ ಮೊದಲ ಹೆಜ್ಜೆಯಂತೆ ಕೆಜಿಎಫ್-2 ಸಿನಿಮಾ ಪ್ರೀ ರಿಲೀಸ್ ಬ್ಯೂಸಿನೆಸ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾವನ್ನ ಹಿಂದಿಕ್ಕಿ ನಂಬರ್ ಒನ್ ಸ್ಥಾನದಲ್ಲಿದೆಯಂತೆ. ಕೆಜಿಎಫ್- 2 ಕರ್ನಾಟಕದ ಪ್ರೈಡ್. ಹೀಗಾಗಿ KGF-2 ಸಿನಿಮಾ ಕನ್ನಡ ಭಾಷೆ ಒಂದರಲ್ಲೇ 160 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಿ-ರಿಲೀಸ್ ವ್ಯವಹಾರವನ್ನು ಮಾಡಿದೆ ಅಂತ ಹೇಳಲಾಗುತ್ತಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video