ಕಾಂತಾರಾ ಶಿವನ ಭೇಟಿ ಮಾಡ್ಬೇಕಾ ?: ಇಲ್ಲಿದೆ ಸೂಪರ್ ಚಾನ್ಸ್ !

ರಿಷಬ್ ಅಭಿಮಾನಿಗಳ ಭೇಟಿಗೆ ಕಾರಣ ಏನು ಗೊತ್ತಾ.?
ಕಾಂತಾರ2 ಕೆಲಸ ಬಿಟ್ಟು ಪ್ಯಾನ್ಸ್ ಭೇಟಿಗೆ ಶೆಟ್ರು ಪ್ಲ್ಯಾನ್!
'ಎಲ್ಲರೂ ಬನ್ನಿ ಭೇಟಿಯಾಗೋಣ' ಎಂದ ರಿಷಬ್

Share this Video
  • FB
  • Linkdin
  • Whatsapp

ಕಾಂತಾರದ ಶಿವ ರಿಷಬ್ ಶೆಟ್ಟಿ ಇಷ್ಟು ದಿನ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ರು. ಕಾಂತಾರ2 ಸ್ಕ್ರಿಪ್ಟ್ ಕೆಲಸ, ಅಮೆರಿಕಾ ಪ್ರವಾಸ, ಫ್ಯಾಮಿಲಿ ಜೊತೆ ಟ್ರಿಪ್ ಸಹವಾಸ ಅಂತ ಒಂದ್ ದಿನವೂ ಬಿಡುವಿಲ್ಲದೇ ಓಡಾಡ್ತಿದ್ರು. ಆದ್ರೆ ಈಗ ನಿಮ್ಗೆಲ್ಲಾ ಒಂದು ಸೂಪರ್ ಚಾನ್ಸ್ ಕೊಟ್ಟಿದ್ದಾರೆ ಶೆಟ್ರು. ಕಾಂತಾರ (Kantara) ಶಿವನನ್ನ ಭೇಟಿ ಮಾಡ್ಬೇಕಾ. ಹಾಗಾದ್ರೆ ಎಲ್ಲರೂ ಬನ್ನಿ ಭೇಟಿಯಾಗೋಣ ಅಂತ ಅಭಿಮಾನಿಗಳಿಗೆ ಮನ ತುಂಬಿ ಕರೆದಿದ್ದಾರೆ. ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ರಿಷಬ್ ಶೆಟ್ಟಿ (Rishabh Shetty) ಈಗ ಕನ್ನಡ ಚಿತ್ರರಂಗದ ಹಾಟ್ ಫೇವರೇಟ್. ರಿಷಬ್ರನ್ನ ಒಮ್ಮೆಯಾದ್ರು ಭೇಟಿ ಮಾಡ್ಬೇಕು. ಶೇಕ್ ಹ್ಯಾಂಡ್ ಕೊಡ್ಬೇಕು ಅನ್ನೋ ಆಸೆ ಹಲವರಲ್ಲಿದೆ. ಅವರನ್ನೆಲ್ಲಾ ಮೀಟ್ ಮಾಡೋಕೆ ಈಗ ಶೆಟ್ರು ಸ್ಥಳ ಸಮಯ ನಿಗಧಿ ಮಾಡಿದ್ದಾರೆ. ಜುಲೈ 7ನೇ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ (Bengaluru) ನಂದಿ ಲಿಂಕ್ ಗ್ರೌಂಡ್‌ನಲ್ಲಿ ತನ್ನ ಅಭಿಮಾನಿಗಳನ್ನ (Fans) ಭೇಟಿ ಆಗುತ್ತೇನೆ ಎಲ್ಲರೂ ಬನ್ನಿ ಎಂದಿದ್ದಾರೆ ರಿಷಬ್ ಶೆಟ್ಟಿ. ಅದಕ್ಕೆ ಕಾರಣವೂ ಇದೆ. ಜುಲೈ 7 ರಂದು ರಿಷಬ್ ಶೆಟ್ಟಿ ಜನ್ಮದಿನ. ಈ ದಿನವನ್ನ ತನ್ನ ಫ್ಯಾನ್ಸ್ಗಾಗಿ ಕಾಯ್ದಿರಿಸಿದ್ದಾರೆ ರಿಷಬ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸಿಲಿಕಾನ್‌ ಸಿಟಿಯಲ್ಲಿ ಭೀಕರ ಅಪಘಾತ: ಮಹಿಳೆ ಬದುಕಿದ್ದೇ ಪವಾಡ..ಸಿಸಿಟಿವಿ ದೃಶ್ಯ ಭಯಾನಕ..!

Related Video