Asianet Suvarna News Asianet Suvarna News

ರಂಗಾಯಣ ರಘು ನಟನೆಯ ಶಾಕಹಾರಿ: ನಿಗೂಢ ಘಟನೆಗಳ ಸುತ್ತುವ ಚಿತ್ರ ಫೆ.6ಕ್ಕೆ ರಾಜ್ಯಾದ್ಯಂತ ತೆರೆಗೆ

ಸ್ಯಾಂಡಲ್ವುಡ್ನಲ್ಲಿ ಕಂಟೆಂಟ್ ಸಿನಿಮಾಗಳಿಗೆ ಕೊರತೆ ಇಲ್ಲ. ಆದ್ರೆ ಆ ಎಲ್ಲಾ ಸಿನಿಮಾಗಳು ಜನರ ಮನಸ್ಸು ಗೆಲ್ಲುವುದೂ ಇಲ್ಲ. ಭಟ್ ನಾವು ಪ್ರೇಕ್ಷಕರ ಮನಸ್ಸನ್ನ ಗೆದ್ದೇ ಗೆಲ್ಲುತ್ತೇವೆ ಅಂತ ನಟ ರಂಗಾಯಣ ರಘು ಹೇಳುತ್ತಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ ಕಂಟೆಂಟ್ ಸಿನಿಮಾಗಳಿಗೆ ಕೊರತೆ ಇಲ್ಲ. ಆದ್ರೆ ಆ ಎಲ್ಲಾ ಸಿನಿಮಾಗಳು ಜನರ ಮನಸ್ಸು ಗೆಲ್ಲುವುದೂ ಇಲ್ಲ. ಭಟ್ ನಾವು ಪ್ರೇಕ್ಷಕರ ಮನಸ್ಸನ್ನ ಗೆದ್ದೇ ಗೆಲ್ಲುತ್ತೇವೆ ಅಂತ ನಟ ರಂಗಾಯಣ ರಘು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ರಂಗಾಯಣ ರಘು ನಟಿಸುತ್ತಿರೋ ಶಾಕಹಾರಿ ಸಿನಿಮಾ. ಈ ಸಿನಿಮಾದ ಸ್ಯಾಂಪಲ್ಸ್ಗಳು ಸಿನಿಮಾ ಮೇಲೆ ಒಂದಿಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ಈ ಶಾಕಹಾರಿ ಸಿನಿಮಾ ಇದೇ ವಾರ ಫೆಬ್ರವರಿ 16ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ತೆರೆದುಕೊಳ್ಳುತ್ತಿದೆ. 

ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ಈ ಚಿತ್ರ ಮಲೆನಾಡಿನ ನಿಗೂಢ ಘಟನೆಗಳ ಸುತ್ತ ಸುತ್ತುತ್ತದೆ. ರಂಗಾಯಣ ರಘು ಅಡುಗೆ ಭಟ್ಟನ ಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಪೊಲೀಸ್ ಅಧಿಕಾರಿಯಾಗಿ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.  ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೀಪ್ ಸುಕಂದ್ ನಿರ್ದೇಶನದ ರಾಜೇಶ್ ಕೀಳಂಬಿ, ರಂಜನಿ ಪ್ರಸನ್ನ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Video Top Stories