Father Movie: 'ಫಾದರ್'ಗೆ ಸ್ಕೆಚ್ ಹಾಕಿದ ಆರ್ ಚಂದ್ರು..! ಸಿಕ್ಕಾಯ್ತು ಬಂಡೆ ಮಹಾಕಾಳಿ ಆಶೀರ್ವಾದ..!

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕೆಲವು ದಿನಗಳ ಹಿಂದೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ‌ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಅನೌನ್ಸ್ ಮಾಡಿದ್ರು. ಇದೀಗ ಆ ಐದು ಸಿನಿಮಾಗಳಲ್ಲಿ ಒಂದು ಚಿತ್ರಕ್ಕೆ ಮುಹೂರ್ಥದ ಭಾಗ್ಯ ಸಿಕ್ಕಿದೆ. ನಿರ್ದೇಶಕ ಆರ್ ಚಂದ್ರು ಮೊದಲು ಫಾದರ್‌ಗೆ ಸ್ಕೆಚ್ ಹಾಕಿದ್ದು, ಬಂಡೆ ಮಹಾಕಾಳಿ ಆಶೀರ್ವಾದ ಪಡೆದಿದ್ದಾರೆ. 

Share this Video
  • FB
  • Linkdin
  • Whatsapp

ನಿರ್ದೇಶಕ ಆರ್ ಚಂದ್ರು ಈ ಭಾರಿ ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಅದ್ಭುತ ಕಂಟೆಂಟ್ ಸಿನಿಮಾವನ್ನ ಪ್ರೇಕ್ಷಕರಿಗೆ ಉಣಬಡಿಸೋಕೆ ಪ್ಲಾನ್ ಮಾಡಿರೋ ಚಂದ್ರು(R Chandru) ಫಾದರ್ ಸಿನಿಮಾ ಮುಹೂರ್ತ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಆಗಿ ಲವ್ ಮಾಕ್ಟೆಲ್ ಸ್ಟಾರ್ ಡಾರ್ಲಿಂಗ್ ಕೃಷ್ಣ(Darling Krishna) ನಟಿಸುತ್ತಿದ್ದಾರೆ. ನಾಯಕಿಯಾಗಿ ಅಮೃತಾ ಅಯ್ಯಂಗರ್ ಬಣ್ಣ ಹಚ್ಚುತ್ತಿದ್ದಾರೆ. ರಾಜಕೀಯ ಮುಖಂಡ ಎಚ್.ಎಂ.ರೇವಣ್ಣ, ಶಾಸಕ ಪ್ರದೀಪ್ ಈಶ್ವರ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಹದ್ದೂರ್ ಚೇತನ್ ಕುಮಾರ್, ಮಂಜುನಾಥ್, ಮಮತ ದೇವರಾಜ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ರು. ಫಾದರ್(Father Movie) ತಂದೆ - ಮಗನ ಬಾಂಧವ್ಯದ ಚಿತ್ರ. "ಭೈರಾಗಿ" ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಜ್ ಮೋಹನ್ ಫಾದರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಕಾಶ್ ರೈ, ಸುನೀಲ್ ರಂತಹ ಹೆಸರಾಂತ ಕಲಾವಿದರು ಈ ಸಿನಿಮಾ ಪಾರ್ಟ್ ಆಗಿದ್ದಾರೆ. ಮುಂಬೈನ ಆನಂದ್ ಪಂಡಿತ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದು, "ಹನುಮಾನ್" ಚಿತ್ರದ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ. ಆರ್ ಸಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯಿಂದ ವರ್ಷಕ್ಕೆ ಐದು ಸಿನಿಮಾಗಳನ್ನು ನಿರ್ಮಾಣ ಮಾಡೋ ಗುರಿ ನಿರ್ದೇಶಕ ಆರ್ ಚಂದ್ರು ಅವರದ್ದು. ಅದರ ಮೊದಲ ಹೆಜ್ಜೆಯಂತೆ ಫಾದರ್ ಸಿನಿಮಾ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Sanju Weds Geetha: ಡಿಂಪಲ್ ಕ್ವೀನ್ ಜೊತೆ ಶ್ರೀನಗರ ಕಿಟ್ಟಿ ರೊಮ್ಯಾನ್ಸ್..! ಸಂಜು ವೆಡ್ಸ್ ಗೀತಾ ಲವ್ ಸಾಂಗ್ ಸೂಪರ್..!

Related Video