Sanju Weds Geetha: ಡಿಂಪಲ್ ಕ್ವೀನ್ ಜೊತೆ ಶ್ರೀನಗರ ಕಿಟ್ಟಿ ರೊಮ್ಯಾನ್ಸ್..! ಸಂಜು ವೆಡ್ಸ್ ಗೀತಾ ಲವ್ ಸಾಂಗ್ ಸೂಪರ್..!

ಸಂಜು ವೆಡ್ಸ್ ಗೀತಾ ಸ್ಯಾಂಡಲ್‌ವುಡ್‌ನ ಸ್ಪೆಷಲ್ ಫ್ಲೇವರ್ ಸಿನಿಮಾ. ಶ್ರೀನಗರದ ಕಿಟ್ಟಿ ಹಾಗೂ ನಿರ್ದೇಶಕ ನಾಗಶೇಕರ್‌ಗೆ ನೇಮ್ ಅಂಡ್ ಫೇಮ್ ತಂದುಕೊಟ್ಟ ಸಿನಿಮಾ. ಇದೀಗ ಸಂಜು ವೆಡ್ಸ್ ಗೀತಾ 2 ಬರ್ತೀದೆ. ಈಗಾಗ್ಲೇ ಸಾಕಷ್ಟು ಸ್ಪೆಷಾಲಿಟಿಗಳಿಂದ ಗಮನ ಸೆಳೆಯುತ್ತಿರೋ ಸಂಜು ವೆಡ್ಸ್ ಗೀತಾ ಪಾರ್ಟ್ 2 ಚಿತ್ರದ ಸಾಂಗ್ ಮೇಕಿಂಗ್ ಈಗ ರಿವೀಲ್ ಆಗಿ ಸಖತ್ ಸೌಂಡ್ ಮಾಡ್ತಿದೆ.

Share this Video
  • FB
  • Linkdin
  • Whatsapp

ಝಗಮಗಿಸೋ ಬೆಳಕು. ಅದ್ದೂರಿ ಸೆಟ್, ಅಬ್ಬಾ ನೋಡ್ತಿದ್ರೆ, ಯಾವುದೋ ಲೋಕದಲ್ಲಿ ಇದ್ದೇವಾ ಅನ್ನುವ ಅನುಭವ.. ಹೌದು, ಈ ಹಾಡು, ಹಾಡಿನ ಚಿತ್ರೀಕರಣ, ಅದಕ್ಕಾಗಿ ಹಾಕಿರೋ ಸೆಟ್ ಎಲ್ಲವೂ ವೆರಿ ಸ್ಪೆಷಲ್ ಅನ್ನುವಂತಿದೆ. ನಿರ್ದೇಶಕ ನಾಗಶೇಖರ್(Nagashekar) ಕಲ್ಪನೆಯಲ್ಲಿ ಅವರ ಡ್ರೀಮ್ ನಂತೆ ಈ ಸಾಂಗ್ ಶೂಟಿಂಗ್(Song Shooting) ನಡೆದಿದೆ. ಈ ಒಂದೇ ಒಂದು ಹಾಡಿನ ಚಿತ್ರೀಕರಣಕ್ಕೆ 50 ಕೋಟಿ ಬಂಡವಾಳ ಹೂಡಲಾಗಿದೆ. ಕುಣಿಗಲ್ ನ ಯುಬಿ ಸ್ಟೆಡ್ ಫಾರಂನಲ್ಲಿ 5 ದಿನಗಳ ಕಾಲ, ಈ ಕಲರ್ ಫುಲ್ ಹಾಡಿನ ಚಿತ್ರೀಕರಣ ನಡೆಸಲಾಗಿದೆಯಂತೆ. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿನಲ್ಲಿ ನಟಿ ಡಿಂಪಲ್ ಕ್ವೀನ್ ರಮ್ಯಾ ಜೊತೆ ಶ್ರೀನಗರ ಕಿಟ್ಟಿ(Srinagara Kitty) ರಮ್ಯಾನ್ಸ್ ಮಾಡಿದ್ದಾರೆ. ಶ್ರೀಧರ ವಿ. ಸಂಭ್ರಮ ಮ್ಯೂಸಿಕ್ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಈ ಹಾಡಿಗೆ ರೊಮ್ಯಾಂಟಿಕ್ ಫ್ರೇಮ್ ಕೊಡಲಾಗಿದೆ. ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್ ಸಂಜು ವೆಡ್ಸ್ ಗೀತಾ(Sanju Weds Geetha 2) ಸಿನಿಮಾದಲ್ಲೂ ಅದನ್ನೇ ಮಾಡಿದ್ದಾರೆ.ಬ ನಿರ್ಮಾಪಕ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 12 ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. 

ಇದನ್ನೂ ವೀಕ್ಷಿಸಿ: ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

Related Video