James 2022: ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ ಪ್ರಿಯಾ ಆನಂದ್

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ನಡುವೆ ಚಿತ್ರದ ನಾಯಕಿ ಪ್ರಿಯಾ ಆನಂದ್ ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಇಂದು ಜನ್ಮದಿನದ (Birthday) ಸಂಭ್ರಮವಾಗಿದ್ದು, ಅವರ ಅಭಿಮಾನಿಗಳ ಪಾಲಿಗೆ ಸ್ಪೆಷಲ್ ಡೇ. ಮಾತ್ರವಲ್ಲದೇ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಜೇಮ್ಸ್' (James) ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಪವರ್ ಸ್ಟಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್‌ಗೆ ಎರಡನೇ ಬಾರಿಗೆ ನಾಯಕಿಯಾಗಿ ಕಾಲಿವುಡ್‌ನ ಪ್ರಿಯಾ ಆನಂದ್ (Priya Anand) ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಿಯಾ ಆನಂದ್ ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

Add Asianetnews Kannada as a Preferred SourcegooglePreferred

Gandhada Gudi: ಪುನೀತ್ ಕನಸಿನ 'ಗಂಧದ ಗುಡಿ' ಫಸ್ಟ್ ಲುಕ್ ರಿಲೀಸ್

ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಪ್ರಿಯಾ ಆನಂದ್ ಚಿಟ್‌ ಚಾಟ್ ನಡೆಸಿದ್ದು, ಪುನೀತ್ ಜತೆಗಿನ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. 'ಜೇಮ್ಸ್' ಚಿತ್ರದ ಬಗೆಗಿನ ಮಾಹಿತಿ ಸೇರಿದಂತೆ ಅಪ್ಪು ಜತೆಗಿನ ಒಡನಾಟವನ್ನು ಈ ವೇಳೆ ಮೆಲುಕು ಹಾಕುತ್ತಾ ಭಾವುಕರಾಗಿ ಮಾತನಾಡಿದ್ದಾರೆ. ಮಾತ್ರವಲ್ಲದೇ 'ಜೇಮ್ಸ್' ಚಿತ್ರದ ಪ್ರಮೋಷನ್ ಕಾರ್ಯವನ್ನು ಸಹ ಪ್ರಿಯಾ ಆನಂದ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚೇತನ್ ಕುಮಾರ್ (Chetan Kumar) ಆಕ್ಷನ್ ಕಟ್ ಹೇಳಿದ್ದು, ಕಿಶೋರ್ ಪತ್ತಿಕೊಂಡ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video