Gandhada Gudi: ಪುನೀತ್ ಕನಸಿನ 'ಗಂಧದ ಗುಡಿ' ಫಸ್ಟ್ ಲುಕ್ ರಿಲೀಸ್

ಇಂದು ಪುನೀತ್ ಅವರ 47 ನೇ ಹುಟ್ಟುಹಬ್ಬ, ಅವರ ಕೊನೆಯ ಚಿತ್ರ 'ಜೇಮ್ಸ್' ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ 'ಗಂಧದ ಗುಡಿ' ಫಸ್ಟ್ ಲುಕ್ ರಿಲೀಸ್ ಆಗಿದೆ. 

Share this Video
  • FB
  • Linkdin
  • Whatsapp

ಇಂದು ಪುನೀತ್ ಅವರ 47 ನೇ ಹುಟ್ಟುಹಬ್ಬ, ಅವರ ಕೊನೆಯ ಚಿತ್ರ 'ಜೇಮ್ಸ್' ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ 'ಗಂಧದ ಗುಡಿ' ಫಸ್ಟ್ ಲುಕ್ ರಿಲೀಸ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟ ಪುನೀತ್‌ರಾಜ್‌ಕುಮಾರ್(Puneeth Rajkumar) ಅವರ ಬಹುದೊಡ್ಡ ಕನಸು ‘ಗಂಧದಗುಡಿ’(Gandhada gudi) ಸಾಕ್ಷ್ಯ ಚಿತ್ರ. ಕೊರೋನಾ ಲಾಕ್‌ಡೌನ್‌ (Covid19 Lockdown) ಸಮಯಲ್ಲಿ ಪುನೀತ್‌ ರಾಜ್‌ಕುಮಾರ್ ವರ್ಕೌಟ್ (Workout) ಮಾತ್ರವಲ್ಲದೇ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ, ಅಲ್ಲಿನ ಸುಂದರ ತುಣುಕನ್ನು ಡಾಕ್ಯುಮೆಂಟರಿ (Documentary) ಮೂಲಕ 2021ರ ಕನ್ನಡ ರಾಜ್ಯೋತ್ಸವಕ್ಕೆ ಜನರ ಮುಂದಿಡಲು ರೆಡಿಯಾಗಿದ್ದರು ಆದರೆ ಹೃದಯಘಾತದಿಂದ (Heart attack) ಅವರೇ ನಮ್ಮನ್ನು ಅಗಲಿದರು. ಪಿಆರ್‌ಕೆ ಸಂಸ್ಥೆ ನಡೆಸುತ್ತಿರುವ ಅವರ ಪತ್ನಿ ಅಶ್ವಿನಿ, ಪುನೀತ್‌ ಕನಸು ನನಸು ಮಾಡಲು ಮುಂದಾಗಿದ್ದಾರೆ. 

ಅಶ್ವಿನಿ ಅವರು ನಿರ್ಮಾಣ ಮಾಡಿರುವ ಈ ವಿಡಿಯೋವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. ಸಹ ನಿರ್ದೇಶಕರಾಗಿ ಅಂಕಿತ್, ಪ್ರೊಡಕ್ಷನ್ ಮುಖ್ಯಸ್ಥರಾಗಿ ಸತೀಶ್, ಪ್ರೊಡಕ್ಷನ್ ಕಂಟ್ರೋಲರ್ ಆಗಿ ಋಷ್ಯಶೃಂಗ, ಲೈನ್ ಪ್ರೊಡ್ಯೂಸರ್ ಆಗಿ ಸುಧೀಂದ್ರ ಕುಮಾರ್, ಸ್ಕ್ರಿಪ್‌ನ ಫ್ಲೌಂಜ್ ರೈಟರ್ಸ್ ಬ್ಲಾಕ್ ಬರೆದಿದ್ದಾರೆ. 

Related Video