ಪುನೀತ್‌ ರಾಜ್‌ ಕುಮಾರ್‌ಗೆ 49ನೇ ಹುಟ್ಟುಹಬ್ಬ: ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಾಘವೇಂದ್ರ ರಾಜ್‌ ಕುಮಾರ್

ಪುನೀತ್‌ ರಾಜ್‌ಕುಮಾರ್‌ಗೆ 49ನೇ ಹುಟ್ಟುಹಬ್ಬದ ಪ್ರಯುಕ್ತ ರಾಘವೇಂದ್ರ ರಾಜ್‌ ಕುಮಾರ್, ಮಂಗಳಾ, ಚಿನ್ನೇಗೌಡ್ರು ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

First Published Mar 17, 2024, 3:15 PM IST | Last Updated Mar 17, 2024, 3:15 PM IST

ನಟ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ(Puneeth Rajkumar) ಇಂದು 49ನೇ ಹುಟ್ಟುಹಬ್ಬ(Birthday). ಈ ಹಿನ್ನೆಲೆ ಪುನೀತ್ ಸಮಾಧಿಗೆ ರಾಜ್‌ ಕುಟುಂಬದಿಂದ ಪೂಜೆ ಸಲ್ಲಿಸಲಾಯಿತು. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಯತ್ತ ಅಭಿಮಾನಿಗಳ(Fans) ದಂಡೇ ಬರುತ್ತಿದೆ. ರಾಘವೇಂದ್ರ ರಾಜ್‌ ಕುಮಾರ್(Raghavendra Rajkumar), ಮಂಗಳಾ, ಚಿನ್ನೇಗೌಡ್ರು ಭೇಟಿ ನೀಡಿ, ಸಮಾಧಿಗೆ ಪೂಜೆ ಸಲ್ಲಿಸಿದರು. ನಟ ಪುನೀತ್​ ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮನಗಲಿ ಮೂರು ವರ್ಷಗಳು ಕಳೆದಿವೆ. ಆದರೆ ಆ ಕನ್ನಡದ ಕಂದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ರಾತ್ರಿ 11 ಗಂಟೆಯಿಂದಲೇ ಕಂಠೀರವ ಸ್ಟೂಡಿಯೋಗೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಯಡಿಯೂರಪ್ಪ ಮೋಸ ಮಾಡಿದ್ದಾರೆ: ಕೆ.ಎಸ್‌.ಈಶ್ವರಪ್ಪ

Video Top Stories