ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಯಡಿಯೂರಪ್ಪ ಮೋಸ ಮಾಡಿದ್ದಾರೆ: ಕೆ.ಎಸ್‌.ಈಶ್ವರಪ್ಪ

ಯಾವ ಕಾರಣಕ್ಕೆ ನನ್ನ ಸ್ಫರ್ಧೆ ಎಂದು ನಾಯಕರಿಗೆ ತಿಳಿಸಿದ್ದೇನೆ. ನನ್ನ ನಿರ್ಧಾರ ವಾಪಸ್‌ ಪಡೆಯಲ್ಲ ಎಂದು ಕೆ.ಎಸ್‌.ಈಶ್ವರಪ್ಪ
 

Share this Video
  • FB
  • Linkdin
  • Whatsapp

ಹಿಂದುತ್ವವಾದಿಗಳಿಗೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ(B. S. Yediyurappa) ಮೋಸ ಮಾಡಿದ್ದಾರೆ. ಬಿಎಸ್‌ವೈ ಹಿಡಿತದಲ್ಲಿ ಪಕ್ಷ ಸಿಲುಕಿ ಒದ್ದಾಡುತ್ತಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಕುಟುಂಬದ ವಿರುದ್ಧ ಕೆಂಡಾಮಂಡಲವಾದರು. ನನ್ನ ನಿರ್ಧಾರ ವಾಪಸ್ ಪಡೆಯಲ್ಲ. ಬಂಡಾಯ ಸ್ಪರ್ಧೆ ಎಂದ ಮೇಲೆ ಹಿಂದೆ ಸರಿಯಲ್ಲ. ಪಕ್ಷೇತರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದೇನೆ ಎಂದು ಕೆ.ಎಸ್‌.ಈಶ್ವರಪ್ಪ(KS Eshwarappa) ಹೇಳಿದ್ದಾರೆ. ಆರಗಜ್ಞಾನೇಂದ್ರ , ರವಿಕುಮಾರ್ , ಅರುಣ್ ನನ್ನ ಮನೆಗೆ ಬಂದಿದ್ರು. ಯಾವ ಕಾರಣಕ್ಕೆ ನನ್ನ ಸ್ಪರ್ಧೆ ಎಂದು ಅವರಿಗೆ ತಿಳಿಸಿದ್ದೇನೆ. ನನ್ನ ಮಗನಿಗೆ ಟಿಕೆಟ್(Ticket) ಸಿಗದಿರುವುದು ಒಂದೇ ಕಾರಣ ಅಲ್ಲ. ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಹಿಡಿತದಲ್ಲಿ ಬಿಜೆಪಿ ಪಕ್ಷ ಸಿಲುಕಿದೆ. ಲಿಂಗಾಯತ ನಾಯಕ ಯತ್ನಾಳ್‌ರನ್ನು ಅಧ್ಯಕ್ಷರನ್ನಾಗಿ ಏಕೆ ಮಾಡಿಲ್ಲ. ಸಿಟಿ ರವಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಏಕೆ ಮಾಡಲಿಲ್ಲ? ಎಂಪಿ ಸ್ಥಾನಕ್ಕೆ ಸೀಟಿ ರವಿಗೆ ಟಿಕೆಟ್ ಕೊಡಬಹುದಾಗಿತ್ತು. ಬಿಎಸ್‌ವೈಗೆ ಲಿಂಗಾಯತರು, ಒಕ್ಕಲಿಗರು , ಹಿಂದುಳಿದವರು ಬೇಡ ಎಂದು ಕಿಡಿಕಾರಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Weekly-Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಈ ವಾರದ ವಿಶೇಷತೆ ಏನು ಗೊತ್ತಾ?

Related Video