ಡಾಲಿಯ 'ಕೋಟಿ' ನೋಡಿ ಖುಷ್ ಹುವಾ ಎಂದ ಮಾಜಿ ಸಂಸದ! ಧನಂಜಯ್ ನಟನೆಗೆ ಕನ್ನಡದ ವಿಜಯ್ ಸೇತುಪತಿ ಎಂದ ಸಿಂಹ

ಸ್ಟಾರ್ ಸಿನಿಮಾ ಬೇಕು ಅಂತ ಕನ್ನಡ ಚಿತ್ರರಸಿಕರ ಮನ ಮಿಡಿಯುತ್ತಿತ್ತು. ಆ ಆಸೆ ಈಡೇರಿಸಿದ್ದು ನಟ ರಾಕ್ಷಸ ಡಾಲಿ ಧನಂಜಯ್. ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಕಳೆದ ವಾರ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಈ ಕೋಟಿ ಕಥೆ ನೋಡಿ ಸಿನಿ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಕೋಟಿ ಸಿನಿಮಾ ನೋಡಿದವರು ಕೋಟಿ ಕೊಟ್ರು ಮತ್ತೆ ಇಂತ ಸಿನಿಮಾ ಸಿಗಲ್ಲ. ಹೀಗಾಗಿ ಮೊದಲು ಚಿತ್ರಮಂದಿರಕ್ಕೆ ಬಂದು ಕೋಟಿ ಸಿನಿಮಾ(Kotee movie) ನೋಡಿ ಅಂತ ಹೇಳುತ್ತಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕೂಡ ಕೋಟಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಧನಂಜಯ್(Dhananjay) ನಟನೆಗೆ ಮಾರು ಹೋಗಿರೋ ಪ್ರತಾಪ್ ಸಿಂಹ ಡಾಲಿಯನ್ನ ತಮಿಳು ನಟ ವಿಜಯ್ ಸೇತುಪತಿಗೆ ಹೋಲಿಸಿದ್ದಾರೆ. ವಿಜಯ್ ಸೇತುಪತಿ ನಟನೆಗೆ ಇಡೀ ದೇಶ ಮೆಚ್ಚಿಕೊಂಡಿದೆ. ಅವರಂತೆಯೇ ಅದ್ಭುತ ನಟ ಧನಂಜಯ್ ಅನ್ನೋದು ಪ್ರತಾಪ್ ಸಿಂಹ ಅವರ ಮಾತು. ಕೋಟಿ ಕನಸುಗಳೊಂದಿಗೆ ಸಿನಿಮಾ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್‌ಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಸಕ್ಸಸ್ ಹಾರ ಬಿದ್ದಿದೆ. ಸದ್ಯ ಕೋಟಿ ಸಿನಿಮಾ ರಿಲೀಸ್ ಆಗಿ ವಾರ ಕಳೆದಿದ್ದು, ಎಲ್ಲರ ಬಾಯಲ್ಲಿ ಕೋಟಿಯದ್ದೇ ಮಾತು ಕೇಳಿಸುತ್ತಿದೆ. ಇಷ್ಟು ದಿನ ಬಿಗ್ ಸ್ಟಾರ್ ಸಿನಿಮಾ ಬರುತ್ತಿಲ್ಲ, ಕಂಟೆಂಟ್ ಸಿನಿಮಾ ಬೇಕು ಎನ್ನುತ್ತಿದ್ದವರೆಲ್ಲಾ ಈಗ ಕೋಟಿ ನೋಡಿ ಖುಷಿ ಪಡುತ್ತಿರೋದಂತು ನಿಜ.

ಇದನ್ನೂ ವೀಕ್ಷಿಸಿ:  ವಿಜಯ್‌ರ 'ಭೀಮ'ನ ಭರ್ಜರಿ ಎಂಟ್ರಿಗೆ ಡೇಟ್ ಫಿಕ್ಸ್..! ಆಗಸ್ಟ್ 9ಕ್ಕೆ ಬೆಳ್ಳಿತೆರೆ ಮೇಲೆ ಸಿನಿಮಾ ಪ್ರದರ್ಶನ..!

Related Video