ವಿಜಯ್‌ರ 'ಭೀಮ'ನ ಭರ್ಜರಿ ಎಂಟ್ರಿಗೆ ಡೇಟ್ ಫಿಕ್ಸ್..! ಆಗಸ್ಟ್ 9ಕ್ಕೆ ಬೆಳ್ಳಿತೆರೆ ಮೇಲೆ ಸಿನಿಮಾ ಪ್ರದರ್ಶನ..!

ಸಲಗ ಸಿನಿಮಾದ ನಂತರ ಮತ್ತೊಮ್ಮೆ ನಿರ್ದೇಶನ ಕೈಗೆತ್ತಿಕೊಂಡಿರುವ ವಿಜಯ್‌ ಕುಮಾರ್‌ ಭೀಮನಾಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ವಿಜಯ್ ಡೈರೆಕ್ಷನ್‌ನ ಭೀಮ ಸಿನಿಮಾದ ಟೀಸರ್‌ ಮತ್ತು ಫಸ್ಟ್‌ ಲುಕ್‌ ಹಾಡುಗಳು  ಟ್ರೆಂಡ್ ಆಗಿವೆ. 

Share this Video
  • FB
  • Linkdin
  • Whatsapp

ವಿಜಯ್ ನಟನೆಯ 28ನೇ ಸಿನಿಮಾ ಭೀಮ. ಸಲಗ ಸಿನಿಮಾದ ಮೂಲಕ ತಮ್ಮ ಹಳೆಯ ಸ್ಟಾರ್‌ಗಿರಿಗೆ ಮರಳಿದ ನಟ ವಿಜಯ್‌ ಕುಮಾರ್‌(Duniya Vijay) ‘ಭೀಮ’ ಚಿತ್ರದಲ್ಲಿ(Bheema movie) ‘ಸಲಗ’ಕ್ಕಿಂತಲೂ ವಿಭಿನ್ನ ಕಥೆಯನ್ನು ಮಾಡಿಕೊಂಡಿದ್ದಾರೆ. ಆಗಸ್ಟ್ 9ಕ್ಕೆ ಭೀಮ ಸಿನಿಮಾ ರಿಲೀಸ್(Release) ಮಾಡೋದಾಗಿ ವಿಜಯ್ ಟೀಂ ಅಫೀಷಿಯಲ್ ಆಗಿ ಅನೌನ್ಸ್ ಮಾಡಿದ್ದಾರೆ. ಭೀಮ ನೈಜ ಘಟನೆ ಆಧರಿಸಿದ ಸಿನಿಮಾವಂತೆ. ಈ ಸಿನಿಮಾ ಸೋಷಿಯಲ್ ಅವೆವರ್ಸರಿ ಇರೋ ಕತೆ ಇದೆ. ಇದರ ಜೊತೆಗೆ ಒಂದಿಷ್ಟು ಕರ್ಮರ್ಶಿಯಲ್ ಎಲಿಮೆಂಟ್ಸ್ ಇಟ್ಟಿದ್ದಾರೆ ವಿಜಯ್. ಇವತ್ತಿನ ಯೂವ ಜನತೆ ಫೇಸ್ ಮಾಡುತ್ತಿರೋ ಸಮಸ್ಯೆಗಳ ಸುತ್ತ ಈ ಸಿನಿಮಾ ಇರುತ್ತಂತೆ. ಅದೇನು ಅಂತ ಸಿನಿಮಾದಲ್ಲೇ ನೋಡಬೇಕು. ಲೋಕಲ್ ಫ್ಲೇವರ್ ಸಿನಿಮಾದಲ್ಲಿ ಲವ್, ಕ್ರೈಂ ಎಲ್ಲವೂ ಇದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ನಿರ್ಮಿಸಿರೋ ಭೀಮನಿಗೆ ಭಾರಿ ಬೇಡಿಕೆಯೂ ಇದೆ. ಈ ಸಿನಿಮಾದ ಹಾಡುಗಳ ರೈಟ್ಸ್ 1.50 ಕೋಟಿಗೆ ಸೇಲ್ ಆಗಿತ್ತು. ಈಗ ಭೀಮನ ರಿಲೀಸ್ ಡೇಟ್ ಅನೌನ್ಸ್ ಆಗ್ತಿದ್ದಂತೆ ಥಿಯೇಟ್ರಿಕಲ್ ರೈಟ್ಸ್ಗಾಗಿ ವಿತರಕರು ಮುಗಿ ಬೀಳುತ್ತಿದ್ದಾರೆ. ಅದಕ್ಕೆ ಕಾರಣ ಒನ್ಸ್ ಅಗೈನ್ ಸಲಗ ಸಿನಿಮಾ. ಸಲಗ ಸಿನಿಮಾ ವಿಜಯ್ ಸಿನಿ ಕರಿಯರ್ನ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾ ಕಲೆಕ್ಷನ್ ಮಾಡಿದ್ದು 25 ಕೋಟಿ. ಹೀಗಾಗಿ ಭೀಮನ ಮೇಲೂ ಎಲ್ಲರ ಕಣ್ಣು ಬಿದ್ದಿದೆ. 

ಇದನ್ನೂ ವೀಕ್ಷಿಸಿ:  ಹೇಗಿತ್ತು ಜೈಲು ಹಕ್ಕಿ ಪವಿತ್ರಾ ಗೌಡ ಮೊದಲ ದಿನ..? ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಖೈದಿ ನಂ .6024!

Related Video